ಉಳ್ಳಾಲ ನ್ಯೂಸ್ ನೆಟ್ ವರ್ಕ್
ಬೀರಿ: ಆಧುನಿಕ ತಂತ್ರಜ್ಞಾನಗಳು ಎಷ್ಟೇ ಅಭಿವೃದ್ಧಿ ಹೊಂದಿದರೂ ಗ್ರಾಮೀಣ ಪ್ರದೇಶವನ್ನು ತಲುಪಿಲ್ಲ. ದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ತಂತ್ರಜ್ಞಾನವನ್ನು ಆವಿಷ್ಕಾರಗೊಳಿಸುವ ಕಾರ್ಯ ಆಗಬೇಕಾಗಿದೆಎಂದು ಮಹಾರಾಷ್ಟ್ರ ಸರಕಾರದ ವಿಶೇಷ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಾಂಸ್ಕøತಿಕ ಸಂಬಂಧಗಳ ಭಾರತೀಯ ಮಂಡಳಿ ಸದಸ್ಯ ಡಾ| ಯೋಗೇಶ್ ದುಭೆ ಅಭಿಪ್ರಾಯಪಟ್ಟರು.
ಅವರು ಬೀರಿಯ ಸಂತ ಅಲೋಷಿಯಸ್‍ನ ನಿರ್ವಹಣೆ ಮತ್ತು ಮಾಹಿತಿ ತಂತ್ರಜ್ಞಾನ (ಎಐಎಂಐಟಿ) ಮತ್ತು ಸಂತ ಅಲೋಷಿಯಸ್ ಕಾಲೇಜು (ಸ್ವಾಯುತ್ತ) ಇವರ ಸಂಯುಕ್ತ ಆಶ್ರಯದಲ್ಲಿ ಬೀರಿ ಅಲೋಷಿಯಸ್ ಕಾಲೇಜಿನ ಆರ್ತುರ್ ಶೀಣೈ ಆಡಿಟೋರಿಯಂನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಎಪಿಟೋಮ್ 2ಕೆ17 ಸರ್ಜಿಕಲ್ ಸ್ಟ್ರೆ ೈಕ್ ಎಂಬ ರಾಷ್ಟ್ರಮಟ್ಟದ ಅಂತರ್ ಕಾಲೇಜಿನ ಮಾಹಿತಿ ತಂತ್ರಜ್ಞಾನಗಳ ಎರಡು ದಿನಗಳ ಕಾಲ ನಡೆಯಲಿರುವ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಗ್ರಾಮೀಣ ಭಾರತದ ಕೊಡುಗೆ ಅಪಾರ ಆದರೆ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಗ್ರಾಮೀಣ ಪ್ರದೇಶದ ಜನರನ್ನು ನೂತನ ತಂತ್ರಜ್ಞಾನಗಳು ಇನ್ನೂ ಮುಟ್ಟಿಲ್ಲ. ಈ ಭಾಗದ ಜನರಿಗೆ ತಂತ್ರಜ್ಞಾನದ ತಿಳುವಳಿಕೆಯಿಲ್ಲದೆ ಅವರ ಅಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿಗೆ ಹಿನ್ನೆಡೆಯಾಗಿದ್ದು ಈ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನದ ಅರಿವು ಗ್ರಾಮೀಣ ಜನರಲ್ಲಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯಾಚರಿಸಬೇಕಾಗಿದ್ದು, ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ತಂತ್ರಜ್ಞಾನದ ಅರಿವು ಮೂಡಿಸುವುದರೊಂದಿಗೆ ಸರಕಾರದ ಸವಲತ್ತುಗಳನ್ನು ಮುಟ್ಟಿಸುವ ಕಾರ್ಯ ಆಗಬೇಕಾಗಿದೆ ಎಂದರು.
ಬೀರಿ ಎಐಎಂಐಟಿಯ ನಿರ್ದೇಶಕ ಫಾ| ಡೆನ್ಝಿಲ್ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗೋವಾದ ವಾಣಿಜ್ಯ ಮತ್ತು ಅಥಶಾಸ್ತ್ರ ಕಲಿಕೆಯ ದಾಮೋದರ ಕಾಲೇಜು ಇದರ ಉಪಪ್ರಾಂಶುಪಾಲ ಡಾ| ಸಂಜಯ್ ದೇಸಾಯಿ ಮುಖ್ಯ ಅತಿಥಿಯಾಗಿದ್ದರು. ಸಿಬ್ಬಂದಿ ಸಂಯೋಜಕರಾದ ಮಿಥುನ್ ಡಿ’ಸೋಜಾ ಹಾಗೂ ವಿದ್ಯಾರ್ಥಿ ಸಂಯೋಜಕರಾದ ವಯೋಲಾ ಪಾಯಸ್, ಅನಿಕೇತ್ ಉಪಸ್ಥಿತರಿದ್ದರು.
ಎಐಎಂಐಟಿಯ ಮಾಹಿತಿ ತಂತ್ರಜ್ಞಾನ ಮತ್ತು ಬಯೋ ಇನ್ಪಾರ್ಮೇಟಿಕ್ಸ್ ಇದರ ಡೀನ್ ಪ್ರೊ ಸಂತೋಷ್ ರೆಬೆಲ್ಲೋ ಪ್ರಾಸ್ತಾವನೆಗೈದರು. ಶ್ರಿನ್ ಸ್ವಾಗತಿಸಿದರು. ವಿದ್ಯಾರ್ಥಿ ಸಂಘಟಕರಾದ ಕೆವಿನ್ ಸಿಕ್ವೇರಾ ಮತ್ತು ವಂದನಾ ಅತಿಥಿಗಳನ್ನು ಪರಿಚಯಿಸಿದರು. ಲಿನ್ ಫೆರ್ನಾಂಡಿಸ್ ಮತ್ತು ಸಚಿನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸುಮನ್ ಲಸ್ರಾದೊ ವಂದಿಸಿದರು.




