


ದೇರಳಕಟ್ಟೆ : ಕೊಡಗು ಪೊನ್ನಪ್ಪ ಸಂತೆ ಗ್ರಾಮದ ೧೯ ವರ್ಷದ ಪ್ರತಿಭಾ ಳ ಜೀವ ಉಳಿಸಲು ಮೂಡಬಿದ್ರೆಯ ಕೇರ್ ಚ್ಯಾರಿಟೇಬಲ್ ಟ್ರಸ್ಟ್ ನ ಐರಾವತ ಅನಿಲ್ ಮೆಂಡೋನ್ಸಾ ಅವರು ಮುಂದೆ ಬಂದಿದ್ದು, ಇದೀಗ ಸಂಜೆ ವೇಳೆಗೆ ಬೆಂಗಳೂರಿಗೆ ಕರೆದೊಯ್ಯಲಿದ್ದಾರೆ. ಕೆಪಿಸಿಸಿ ವಕ್ತಾರರಾಗಿರುವ ಎಂ.ಜಿ.ಹೆಗ್ಡೆಯವರು ತಮ್ಮ ಫೇಸ್ ಬುಕ್ವಾಲ್ನಲ್ಲಿ ಉಳ್ಳಾಲವಾಣಿ ವರದಿಯನ್ನು ಪೋಸ್ಟ್ ಮಾಡುತ್ತಿದ್ದಂತೆ ಮಹಿಳೆಯೊಬ್ಬರು ಸ್ಪಂಧಿಸಿ ಅನಿಲ್ ಮೆಂಡೋನ್ಸಾ ಅವರ ಸಂಪರ್ಕ ನೀಡಿ ಮಾನವೀಯತೆ ಮೆರೆದಿದ್ದಾರೆ.
ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಿಂದ ಬೆಂಗಳೂರಿಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಪ್ರತಿಭಾಳನ್ನು ಕೊಂಡೊಯ್ಯುವ ಕುರಿತು ಉಳ್ಳಾಲವಾಣಿ ವರದಿಯನ್ನು ಪ್ರಕಟಿಸಿತ್ತು. ಇದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದಂತೆ ಸಾಮಾಜಿಕ ಕರ್ಯಕರ್ತ, ಕೆಪಿಸಿಸಿ ವಕ್ತಾರ ಎಂ.ಜಿ.ಹೆಗ್ಡೆಯವರು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಸುದ್ಧಿಯನ್ನು ಹಂಚಿಕೊAಡಿದ್ದಾರೆ. ಹಾಕಿದ ಕೆಲವೇ ಕ್ಷಣಗಳಲ್ಲಿ ಮರೀಟಾ ಡಿಸೋಜ ಎಂಬವರು ಸ್ಪಂಧಿಸಿ, ಐರಾವತ ಆಂಬ್ಯುಲೆನ್ಸ್ ಅನಿಲ್ ಅವರ ಸಂಪರ್ಕವನ್ನು ಒದಗಿಸಿಕೊಟ್ಟಿದ್ದಾರೆ. ತಕ್ಷಣವೇ ಎಂ.ಜಿ.ಹೆಗ್ಡೆ ಅವರನ್ನು ಸಂಪರ್ಕಿಸಿದಾಗ ಯುವತಿಯನ್ನು ಬೆಂಗಳೂರಿಗೆ ಕೊಂಡೊಯ್ಯುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ನಡುವೆ ಅಬ್ದುಲ್ ಖಾದರ್ ಎಂಬವರು ದೇರಳಕಟ್ಟೆ ಎಸ್ ಕೆ ಎಸ್ ಎಸ್ ಎಫ್ ಆಂಬ್ಯುಲೆನ್ಸ್ ಕುರಿತು ಮಾಹಿತಿ ನೀಡಿ ಮಾನವೀಯತೆ ಮೆರೆದಿದ್ದಾರೆ. ತೊಕ್ಕೊಟ್ಟುವಿನ ಸಿರಿಲ್ ಡಿಸೋಜಾ, ಮೂಡಬಿದ್ರೆಯ ಬಾಷಾ ಎಂಬವರು ಉಳ್ಳಾಲವಾಣಿಯನ್ನು ಸಂಪರ್ಕಿಸಿದ್ದಾರೆ. ಮಾನವೀಯತೆಗೆ ಸ್ಪಂಧಿಸಿದ ಎಲ್ಲಾ ಹೃದಯಗಳಿಗೂ ಉಳ್ಳಾಲವಾಣಿ ಕೃತಜ್ಞತೆಯನ್ನು ಸಲ್ಲಿಸುತ್ತದೆ.
ಅನಿಲ್ ಮೆಂಡೋನ್ಸಾ ಕುರಿತು ಒಂದಿಷ್ಟು
ಮೂಡಬಿದ್ರೆ ಮೂಲದ ಅನಿಲ್ ಮೆಂಡೋನ್ಸಾ
ಅವರು ಆಳ್ವಾಸ್ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಸೇವೆಯನ್ನು ನಡೆಸಿಕೊಂಡು ಬಂದಿರುತ್ತಾರೆ. ಸದಾ ಕಷ್ಟದಲ್ಲಿರುವ ಮಂದಿಗೆ ಸ್ಪಂಧಿಸುವ ಹೃದಯವಾಗಿರುವ ಅನಿಲ್ ಅವರು ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡು ಕೋಮಾ ತಲುಪಿದ್ದ ರೋಗಿಯೊಬ್ಬರನ್ನು 41 ಗಂಟೆಗಳ ಕಾಲ ಆಂಬ್ಯುಲೆನ್ಸ್ ಚಲಾಯಿಸಿಕೊಂಡು 2700 ಕಿ.ಮೀ ದೂರದ ಉತ್ತರಪ್ರದೇಶದ ಮೊರಾದಬಾದ್ ಗೆ ತಲುಪಿಸಿದವರು. ದೇಹದಾರ್ಢ್ಯ ಪಟುವಾಗಿರುವ ಲೋಬೋ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಧರ್ಮ ನೋಡದೆ ಬಡ ಕುಟುಂಬಕ್ಕೆ ಮನೆಯನ್ನು ಕಟ್ಟಿಕೊಟ್ಟವರು. ಅನಿಲ್ ಲೋಬೊ ಅವರಿಗೆ ಉಳ್ಳಾಲವಾಣಿ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.