


ಕುಂಪಲ : ಆಸರೆ ಬಳಗ ಕುಂಪಲ ಆಶ್ರಯದಲ್ಲಿ ತನ್ನ 84 ನೇ ಸೇವಾ ಯೋಜನೆ ಪ್ರಯುಕ್ತ ಕುಂಪಲದ ತಾರೇಶ್ ಎಂಬವರ ಡಯಾಲಿಸಿಸ್ ಖರ್ಚಿಗೆ ಸಹಾಯಧನ ಹಾಗೂ 85 ನೇ ಕಾರ್ಯಕ್ರಮವಾಗಿ ಮರದಿಂದ ಬಿದ್ದು ಹಾಸಿಗೆ ಹಿಡಿದಿರುವ ತೊಕ್ಕೊಟ್ಟು ನಿವಾಸಿ ಜಯ ಎಂಬವರಿಗೆ ಫೋಲ್ಡಿಂಗ್ ಕಾಟ್ & ಬೆಡ್ ಅನ್ನು ವಿತರಿಸಲಾಯಿತು.
ಈ ಸಂದರ್ಭ ಆಸರೆ ಬಳಗ ಸ್ಥಾಪಕಾಧ್ಯಕ್ಷ ಸೂರಜ್ ಸಾಗರ್ ಕುಂಪಲ. ಆಸರೆ ಬಳಗದ ಅಧ್ಯಕ್ಷರಾದ ಹರಿಪ್ರಸಾದ್, ಪ್ರಮುಖರಾದ ಹರೀಶ್ ಮೂರುಕಟ್ಟೆ, ಬಿಜೆಪಿ ಮಂಗಳೂರು ಮಂಡಲ ಯುವಮೋರ್ಚಾ ಅಧ್ಯಕ್ಷೆ ಮಾಧವಿ ಉಳ್ಳಾಲ್, ಮಂಗಳೂರು ಮಂಡಲ ಸಾಮಾಜಿಕ ಜಾಲತಾಣ ಪ್ರಮುಖ್ ಪ್ರಹ್ಲಾದ್ ಇಂದಾಜೆ, ಆರ್ ಎಸ್ ಎಸ್ ನ ನಾಗೇಶ್ ಕುಂಪಲ, ನಿಕೇಶ್ ಕುಂಪಲ, ಚಂದ್ರ ಅನುಷ್ ಗಟ್ಟಿ, ಅನುಷ್ ಸರಳಾಯಕಾಲನಿ, ರಾಹುಲ್, ವಿಕಾಸ್, ಚೇತನ್ ಶೆಟ್ಟಿ ಕುಂಪಲ ಉಪಸ್ಥಿತರಿದ್ದರು.