ಕೊಣಾಜೆ : ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ಕನ್ನಡಕ ವಿತರಣೆ ಮತ್ತು ಭಾರತೀಯ ಅಂಚೆ ಇಲಾಖೆಯ ನೂತನ ಅಪಘಾತ ವಿಮಾ ನೋಂದಾವಣೆ, ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಆ. 18 ರಂದು ಭಾನುವಾರ ಬೆಳಗ್ಗೆ 9.00ರಿಂದ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಗ್ರಾಮಚಾವಡಿಯಲ್ಲಿ ನಡೆಯಲಿದೆ.
ತೊಕ್ಕೊಟ್ಟು ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ಇದರ ಅಧ್ಯಕ್ಷ ರವೀಂದ್ರ ಬಂಗೇರ ಮಾಹಿತಿ ನೀಡಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ, ಎ. ಬಿ. ಶೆಟ್ಟಿ ಮೆಮೋರಿಯಲ್ದಂತ ಮಹಾವಿದ್ಯಾಲಯದ ವೈದ್ಯಕೀಯ ವಿಭಾಗ, ಎಲುಬು ಮತ್ತು ಕೀಲು ಚಿಕಿತ್ಸೆ, ನೇತ್ರ ವಿಭಾಗ, ಕಿವಿ,ಮೂಗು ಮತ್ತು ಗಂಟಲು ವಿಭಾಗ, ದಂತ ವಿಭಾಗ, ಮಕ್ಕಳ ವಿಭಾಗ, ಹೆರಿಗೆ ಮತ್ತು ಸ್ತ್ರೀರೋಗ ವಿಭಾಗಗಳಲ್ಲಿ ತಜ್ಞ ವೈದ್ಯರುಗಳಿಂದ ಆರೋಗ್ಯ ತಪಾಸಣೆ, ಉಚಿತ ಔಷ„ ಹಾಗೂ ಕನ್ನಡಕಗಳನ್ನು ವಿತರಿಸಲಾಗುವುದು ಭಾರತೀಯ ಅಂಚೆ ವಿಭಾಗ ಮಂಗಳೂರು ವಿಭಾಗ ಇದರ ಸಹಭಾಗಿತ್ವದಲ್ಲಿ 18 ವರ್ಷದಿಂದ 65 ವರ್ಷದ
ವಯೋಮಾನದವರಿಗೆ ವಿವಿಧ ರೀತಿಯ ವಿಮಾ ಯೋಜನೆಗಳ ನೋಂದಣಿ ಮತ್ತು ಮಾಹಿತಿ ಹಾಗೂ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರವು ನಡೆಯಲಿದೆ ಎಂದರು.
ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಬ್ಯಾಂಕ್ ಆಫ್ ಬರೋಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಣಾಜೆ ವಲಯ, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ, ಕೋಟೆಕಾರು,ಅಲ್ ಅಸ್ಸಾ ಜುಮಾ ಮಸೀದಿ ಗ್ರಾಮಚಾವಡಿ, ಲಯನ್ಸ್ ಕ್ಲಬ್ ಮುಡಿಪು ಕುರ್ನಾಡು, ಮರ್ಸಿ ಕೇರ್ ಚಾರಿಟೇಬಲ್ ಟ್ರಸ್ಟ್ ,ಗ್ರಾಮಚಾವಡಿ, ಮಂಗಳ ಗ್ರಾಮೀಣ ಯುವಕ ಸಂಘ, ಕೊಣಾಜೆ, ಕೊಣಾಜೆ ಗ್ರಾಮ ಪಂಚಾಯತ್, ಬಿರ್ವ ಬ್ರದರ್, ಬೊಳ್ಳೂರು, ಕರ್ನಾಟಕ ಟೈಲರ್ಸ್ ಅಸೋಸಿಯೇಶನ್ ಉಳ್ಳಾಲ ಕ್ಷೇತ್ರ ಸಮಿತಿ, ಜೆ.ಸಿ.ಐ ಮಂಗಳಗಂಗೋತ್ರಿ ಕೊಣಾಜೆ, ಯುವವಾಹಿನಿ ಗ್ರಾಮಚಾವಡಿ ಕೊಣಾಜೆ ಘಟಕ ಇವರುಗಳ ಜಂಟಿ ಸಹಯೋಗದೊಂದಿಗೆ ನಡೆಯುವ ಶಿಬಿರಕ್ಕೆ ನಿಟ್ಟೆ ವಿವಿ ವಿಶ್ರಾಂತ ಕುಲಪತಿ ಡಾ| ಬಿ. ಸತೀಶ್ ಕುಮಾರ್ ಭಂಡಾರಿ ಚಾಲನೆ ನೀಡಲಿದ್ದುಯ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರ. ಕಾ. ಸುಭಾಸ್ ಬೊಳಿಯಾರ್, ಮಾಜಿ ಅಧ್ಯಕ್ಷ ಎ. ಲಕ್ಷ್ಮಣ ಸಾಲಿಯಾನ್, ಕರ್ನಾಟಕ ಟೈಲರ್ಸ್ ಅಸೋಸಿಯೇಶನ್ ಉಳ್ಳಾಲ ವಲಯ ಇದರ ಅಧ್ಯಕ್ಷ ದೇವದಾಸ್ ಕೆರೆಬೈಲು, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಡಿ. ಕುಂದರ್, ಯುವವಾಹಿನಿ ಗ್ರಾಮಚಾವಡಿ ಅಧ್ಯಕ್ಷ ಹರೀಶ್ ಪೂಜಾರಿ, ಉಪಾಧ್ಯಕ್ಷ ವಿಜೇತ್ ಪಜೀರ್, ಮಂಗಳ ಗ್ರಾಮೀಣ ಯುವಕ ಸಂಘ ಅಧ್ಯಕ್ಷ ಎ.ಕೆ.ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.