
ಉಳ್ಳಾಲ: ಇಲ್ಲಿನ ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಭರಣಿ ಮಹೋತ್ಸವದ ಪ್ರಯುಕ್ತ ಹಸಿರುಹೊರೆಕಾಣಿಕೆ ಶೋಭಾಯಾತ್ರೆ ರ್ಶಈ ಜೈ ವೀರ ಮಾರುತಿ ವ್ಯಾಯಾಮ ಶಾಲೆ ತೊಕ್ಕೊಟ್ಟು ಇಲ್ಲಿಂದ ಶ್ರೀ ಕ್ಷೇತ್ರಕ್ಕೆ ವಿಜೃಂಭಣೆಯಿAದ ಜರಗಿತು.
ಕಲ್ಲಡ್ಕ ಗೊಂಬೆ, ಚೆಂಡೆ ಕುಣಿತ, ಬ್ಯಾಂಡ್ , ಹುಲಿವೇಷ, ಕುಣಿತ ಭಜನೆ ಜೊತೆಗೆ ಹೊರೆಕಾಣಿಕೆಗಳು ಹಲವು ವಾಹನಗಳಲ್ಲಿ ಸಾಗಿಬಂತು. ಪರಿಸರ ಪ್ರೇಮಿ ಮಾಧವ್ ಉಳ್ಳಾಲ್ ಇವರು ರುದ್ರಾಕ್ಷ ಗಿಡವನ್ನು ಹೊರೆಕಾಣಿಕೆಯಾಗಿ ನೀಡುವ ಮೂಲಕ ಪರಿಸರ ಜಾಗೃತಿ ಮೂಡಿಸಿರುವುದು ಹೊರೆಕಾಣಿಕೆಯ ವಿಶೇಷವಾಗಿತ್ತು.
ಹಸಿರುವಾಣಿ ಹೊರೆಕಾಣಿಕೆಗೆ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಚಾಲನೆ ನೀಡಿದರು. ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸುರೇಶ್ ಭಟ್ನಗರ, ಉಮಾಮಹೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜೆ.ಶೇಖರ್, ಅಧ್ಯಕ್ಷರಾದ ಚಿದಾನಂದ ಗುರಿಕಾರ ನಂದ್ಯ, ಯಶವಂತ ಉಚ್ಚಿಲ್, ಜಗದೀಶ್ ಉಳ್ಳಾಲ್ ಬೈಲ್, ತೀಯ ಸಮಾಜದ ಮುಖಂಡ ಚಂದ್ರಹಾಸ್ ಉಳ್ಳಾಲ್ , ಮೊಕ್ತೇಸರರುಗಳಾದ ಸದಾಶಿವ ಉಳ್ಳಾಲ್, ವಿಶ್ವನಾಥ ಉಚ್ಚಿಲ್, ರಾಘವ ಕೈಕಂಬ, ಉಮೇಶ್ ಕೊಣಾಜೆ ಉಪಾಧ್ಯಕ್ಷರುಗಳಾದ ದಿನೇಶ್ ಕುಂಪಲ, ದಾಮೋದರ ಪಡ್ಪು, ನಾಗಪ್ಪ ಅಡ್ಯಾರ್, ಜನಾರ್ದನ ಕಾಯರ್ ಪಳಿಕೆ, ಗೆಜ್ಜೆಗಿರಿಕ್ಷೇತ್ರದ ಚಂದ್ರಶೇಖರ್ ಉಚ್ಚಿಲ್ , ಮುರಳೀಧರ್ ಸಾಲ್ಯಾನ್, ಮಹಿಳಾ ವೇದಿಕೆ ಪ್ರಧಾನ ಸಂಚಾಲಕಿ ಮಾಧವಿ ಉಳ್ಳಾಲ್, ಯುವ ವೇದಿಕೆ ಪ್ರಧಾನ ಸಂಚಾಲಕ ಕೇಶವ ತೊಕ್ಕೊಟ್ಟು ಮುಂತಾದವರು ಉಪಸ್ಥಿತರಿದ್ದರು.
























