ಕಿನ್ಯ ಗ್ರಾಮದ ಸಾಂತ್ಯಗುತ್ತುವಿನಲ್ಲಿ ನಾಲ್ಕು ದಶಕಗಳ ಬಳಿಕ ಕಿನ್ಯ ಬೆಳರೆಂಗಿ ಶ್ರೀ ಮಲರಾಯ, ಧೂಮಾವತಿ-ಬಂಟ ದೈವಗಳಿಗೆ ಎ.6ರಂದು ನಡೆಯಲಿರುವ ‘ಧರ್ಮನೇಮ’ದ ಪೂರ್ವಭಾವಿಯಾಗಿ ತಲಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಸಾಂತ್ಯಗುತ್ತುವಿಗೆ ಕೊಪ್ಪರಿಗೆ ಸಹಿತ ಹಸಿರು ಹೊರೆಕಾಣಿಕೆ ಮೆರವಣಿಗೆ ಶುಕ್ರವಾರ ನಡೆಯಿತು.
ಶ್ರೀ ಕ್ಷೇತ್ರ ತಲಪಾಡಿಯ ಪ್ರದಾನ ಅರ್ಚಕ ಗಣೇಶ್ ಭಟ್ ಪಂಜಾಳ ಹೊರೆ ಕಾಣಿಕೆಗೆ ಚಾಲನೆ ನೀಡಿದರು.

ಆಡಳಿತ ಮೊಕ್ತೇಸರ ಬಾಲಕೃಷ್ಣ ಸಾಮಾನಿ, ಕಾರ್ಯಾಧ್ಯಕ್ಷ ಶಿವರಾಮ ಶೆಟ್ಟಿ, , ಸಮಿತಿಯ ಸದಾನಂದ ಶೆಟ್ಟಿ ಸುರೇಶ್ ಆಳ್ವ, ರಮಾನಾಥ ಕಾವ, ಸಚಿನ್ ಶೆಟ್ಟಿ ಉದಯಕುಮಾರ್ ಶೆಟ್ಟಿ, ಪ್ರವೀಣ್ ಪಲಾಯಿ, ವಿಶ್ವನಾಥ್ ಪಲಾಯಿ, ಡಾ. ಕಿಶೋರ್ ಶೆಟ್ಟಿ ಸುಬ್ಬಯ್ಯ ಶೆಟ್ಟಿ, ಹೊರೆಕಾಣಿಕೆ ಸಮಿತಿಯ ನಿತ್ಯಾನಂದ ಭಂಡಾರಿ, ನವೀನ್ ಆಳ್ವ ಪುನೀತ್ ಯುವರಾಜ್ ಶ್ರವಣ್ ದೇವಿನಗರ, ಶ್ಯಾಮ್ ರಾಜ್ ನೆತ್ತಿಲ, ಆಶ್ವಿತ್ ಪಕ್ಕಳ, ಮೋಹನ್ ದಾಸ್ ಶೆಟ್ಟಿ ನೆತ್ತಿಲ ಬಾಳಿಕೆ, ನಾರಾಯಣ ಕಜೆ, ಮೋಹನ್ ದಾಸ್ ಭಂಡಾರಿ, ರಘುನಾಥ್ ಶೆಟ್ಟಿ, ಕೇಶವ ಕಜೆ, ಶ್ರೀನಿವಾಸ ಗಟ್ಟಿ ಸೋವೂರು, ರಾಮ ಮನೋಹರ ರೈ ಉಪಸ್ಥಿತರಿದ್ದರು.