ಉಳ್ಳಾಲ : ವೈಯಕ್ತಿಕ ವರ್ಚಸ್ಸಿನ ಪ್ರದರ್ಶನ ಮಾಡುವ ನಿಟ್ಟಿನಲ್ಲಿ ಕೆಲವರ ಮೇಲಿನ ಸೇಡನ್ನು ತೀರಿಸಲು ಶ್ರೀ ಕ್ಷೇತ್ರ ಕೊಂಡಾಣವನ್ನು ವೇದಿಕೆ ಮಾಡಿರುವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಕ್ರಮ ಇಡೀ ಗ್ರಾಮಸ್ಥರು ಮತ್ತು ಶ್ರೀ ಕ್ಷೇತ್ರದ ಭಕ್ತಾಧಿಗಳಿಗೆ ನೋವನ್ನು ತಂದಿದ್ದು, ಶ್ರೀ ಕ್ಷೇತ್ರದಲ್ಲಿ ಈ ಹಿಂದೆ ನಡೆದಂತೆ ಸಂಪ್ರಾದಾಯ, ಕಟ್ಟುಕಟ್ಟಳೆಯಂತೆ ಕಾರ್ಯಕ್ರಮಗಳನ್ನು ನಡೆಸಬೇಕು ಇದಕ್ಕೆ ವ್ಯವಸ್ಥಾಪನಾ ಸಮಿತಿ ವ್ಯವಸ್ಥೆ ಮಾಡಬೇಕು ಹೊರತು ಕಟ್ಟುಕಟ್ಟಳೆಯನ್ನು ಉಲ್ಲಂಘಿಸಿ ಕಾರ್ಯಕ್ರಮಗಳನ್ನು ನಡೆಸಬಾರದು,ವ್ಯವಸ್ಥಾಪನಾ ಸಮಿತಿ, ದೈವಸ್ಥಾನಕ್ಕೆ ಸಂಬಂಧಪಟ್ಟವರು ಮತ್ತು ಗ್ರಾಮಸ್ಥರು ಒಂದು ಸೇರಿ ಸಭೆ ನಡೆಸಿ ಸಮನ್ವಯ ಸಮಿತಿ ರಚಿಸಿ ಸಮಸ್ಯೆ ಬಗೆಹರಿಸುವ ಕಾರ್ಯ ಆಗಬೇಕು ಎಂದು ಶ್ರೀ ಕ್ಷೇತ್ರ ಕೊಂಡಾಣದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ರೈ ಕೋಟೆಕಾರು ಗುತ್ತು ಅಭಿಪ್ರಾಯಪಟ್ಟರು.


ಶ್ರೀ ಕ್ಷೇತ್ರ ಕೊಂಡಾಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಧಾರ್ಮಿಕ ದತ್ತಿ ಇಲಾಖೆಯ ಕಾನೂನು ಇಡೀ ರಾಜ್ಯಕ್ಕೆ ಒಂದೇ ಕಾನೂನು ಆದರೆ ತುಳುನಾಡಿನ ದೈವಾರಾದನೆ ಕಟ್ಟುಪಾಡುಗಳ ಕುರಿತು ಪ್ರಸ್ತಾಪ ಇಲ್ಲ. ದೇವಸ್ಥಾನದಲ್ಲಿ ಅರ್ಚಕ ವರ್ಗ ಮತ್ತು ವ್ಯವಸ್ಥಾಪನಾ ಸಮಿತಿ ಇದ್ದರೆ ದೇವಸ್ಥಾನದ ಎಲ್ಲಾ ಕಾರ್ಯಗಳನ್ನು ಮಾಡಲು ಸಾಧ್ಯ ಆದರೆ ದೈವಸ್ಥಾನದಲ್ಲಿ ಅದರದ್ದೇ ಆದ ಕಟ್ಟುಪಾಡು, ಸಂಪ್ರದಾಯವನ್ನು ಗುರಿಕಾರರು, ಆಚಾರಪಟ್ಟವರು, ಚಾಕರಿಯವರು ಮತ್ತು ಭಂಡಾರ ಮನೆಯವರು ಸೇರಿ ಶ್ರೀ ಕ್ಷೇತ್ರದ ತಂತ್ರಿಯವರ ಮಾರ್ಗದರ್ಶನದಲ್ಲಿ ಗ್ರಾಮಸ್ಥರು ಮತ್ತು ಭಕ್ತಾ„ಗಳ ಸಹಕಾರದಿಂದ ಮಾಡಲು ಸಾಧ್ಯ ವಿನಹ ಓರ್ವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಿಂದ ಮತ್ತು ಸದಸ್ಯರಿಂದ ಸಾದ್ಯವಿಲ್ಲ. ಈ ಕಟ್ಟುಪಾಡುಗಳಿಗೆ ದಾಖಲೆಯನ್ನು ನೀಡಲೂ ಸಾದ್ಯವಿಲ್ಲ. ನೂತನ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರು ಅವರು ಅ„ಕಾರಕ್ಕೆ ಬಂದ ಪ್ರಥಮದಲ್ಲಿ ಹೂವಿನ ಪೂಜೆ ಎಲ್ಲರ ಸಹಕಾರದಿಂದ ನಡೆದಿತ್ತು. ಅದೇ ಮಾದರಿಯಲ್ಲಿ ಜಾತ್ರಾ ಮಹೋತ್ಸವದ ಕಾರ್ಯಗಳು ನಡೆಯಬೇಕಿತ್ತು. ಆದರೆ ವೈಯಕ್ತಿಕ ಧ್ವೇಷವನ್ನು ದೈವಸ್ಥಾನದ ಒಳಗೆ ತಂದಿದ್ದೇ ಈ ಗೊಂದಲಗಳಿಗೆ ಕಾರಣವಾಗಿದೆ ಎಂದ ಅವರು ಭಂಡಾರಮನೆ ಆ ಮನೆತನದ ಗೌರವ ಅಲ್ಲಿ ಬರುವ ಹರಕೆ ಚಿನ್ನ, ಬೆಳ್ಳಿಯ ಲೆಕ್ಕಾಚಾರ ವ್ಯವಸ್ಥಾಪನ ಸಮಿತಿಗೆ ಸಲ್ಲುತ್ತದೆ ಇದಕ್ಕೆ ಬೀಗ ಹಾಕಿರುವ ಕಾರ್ಯ ಸಾಧುವಲ್ಲ ಎಂದರು.ಕ್ಷೇತ್ರದ ಒಂದನೇ ಗುರಿಕಾರ ಮುತ್ತಣ್ಣ ಶೆಟ್ಟಿ ಮಾತನಾಡಿ ತಾನು ಕೋಟೆಕಾರು ಕೆಳಗಿನ ಗುತ್ತಿನ ಒಂದನೇ ಗುರಿಕಾರನೆಂದು ನ್ಯಾಯಾಲಯವೇ ಆದೇಶ ನೀಡಿದೆ. ಕ್ಷೇತ್ರದ ಭಂಡಾರ ಮನೆಗೆ ಅದರದೇ ಆದ ಕಟ್ಟುಪಾಡಿದೆ. ಈ ಸಲ ಕೊರೊನಾ ಕಾರಣದಿಂದ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆದಿಲ್ಲ. ಭಂಡಾರಮನೆಯು ಕ್ಷೇತ್ರದ ಸುಪರ್ದಿಗೆ ಬರದಿದ್ದರೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಭಂಡಾರಮನೆಗೆ ಬೀಗ ಜಡಿದಿದ್ದರು. ಈ ಬಗ್ಗೆ ನಾವು ಉಳ್ಳಾಲ ಠಾಣೆಗೆ ದೂರು ನೀಡಿದ್ದು ಪೆÇಲೀಸರ ಅನುಮತಿಯಿಂದ ಭಂಡಾರಮನೆಗೆ ನಾವೂ ಕೂಡ ಬೀಗ ಹಾಕಿದ್ದೆವು. ಕಳೆದ ಮೇ 22ರಂದು ಭಂಡಾರ ಮನೆಯ ಬೀಗ ಒಡೆದು ನಾವು ವಾಡಿಕೆಯಂತೆ ಗಣಹೋಮ ನೆರವೇರಿಸಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಮೋಹನ್ ರಾಜ್ ಕೆ.ಆರ್, „ೀರಜ್ ಕೊಂಡಾಣ, ಪಿಲಿಚಾಮುಂಡಿ ದೈವದ ಪಾತ್ರಿ ನಾರಾಯಣ ಮೂಲ್ಯ, ಬಂಟ ದೈವದ ಪಾತ್ರಿ ಗೋಕುಲ, ಪ್ರಮುಖರಾದ ರವೀಂದ್ರ ಶೆಟ್ಟಿ ಭಂಡಾರಮನೆ, ಪ್ರಸಾದ್ ಮಡ್ಯಾರ್, ಗುರಿಕಾರರು ಹಾಗೂ ಚಾಕರಿ ವರ್ಗದವರು ಉಪಸ್ಥಿತರಿದ್ದರು.
