UN NETWORK

ಮಂಗಳೂರು: ಹೊಸ ವರುಷದ ಹೆಸರಿನಲ್ಲಿ ಡಿ. 31 ನಗರದ ಹಲವು ಹೋಟೆಲ್, ಪಬ್ ಮತ್ತು ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಡಿ ಜೆ ಪಾರ್ಟಿ, ಅಶ್ಲೀಲ ನೃತ್ಯ ಮತ್ತು ಮಾದಕ ದ್ರವ್ಯಗಳ ಪಾನ ಪಾರ್ಟಿ ಆಯೋಜನೆ ಮಾಡಿದ್ದು ಇದನ್ನು ವಿಶ್ವಹಿಂದೂ ಪರಿಷದ್ – ಬಜರಂಗದಳ ತೀವ್ರವಾಗಿ ಖಂಡಿಸಿದೆ.

ಈಗಾಗಲೇ ಲವ್ ಜಿಹಾದ್ ಜಿಲ್ಲೆಯಲ್ಲಿ ತೀವ್ರವಾಗಿದ್ದು ಮುಗ್ದ ಹೆಣ್ಣುಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಭಾಗವಹಿಸಲು ಪ್ರಚೋದನೆ ನೀಡಲಾಗುತ್ತಿದೆ. ಆದುದರಿಂದ ಯಾವುದೇ ಹೋಟೆಲ್, ಪಬ್ ಗಳಿಗೆ ಯಾವುದೇ ಡಿ ಜೆ ಪಾರ್ಟಿ ನಡೆಸಲು ಅನುಮತಿ ಪೊಲೀಸ್ ಇಲಾಖೆ ನೀಡಬಾರದು . ಎಲ್ಲಾ ಬಾರ್ ಪಬ್ ಗಳು ರಾತ್ರಿ 11:00ಗಂಟೆ ಒಳಗೆ ಮುಚ್ಚಬೇಕು ಎಂದು ಪೊಲೀಸ್ ಕಮೀಷನರಿಗೆ ಬಜರಂಗದಳ ಮನವಿ ಮಾಡಿತು. ಒಂದು ವೇಳೆ ಯಾವುದೇ ಅಹಿತಕರ ಘಟನೆ ನಡೆದರೆ ಪೊಲೀಸ್ ಇಲಾಖೆ ನೇರ ಹೊಣೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.