UN NETWORKS




ಹಿಮಾಚಲಪ್ರದೇಶ: ಹಿಮಾಚಲ ಪ್ರದೇಶದ 14ನೇ ಮುಖ್ಯಮಂತ್ರಿಯಾಗಿ ಜೈರಾಮ್ ಠಾಕೂರ್ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಸಚಿವರು ಹಾಗು ಠಾಕೂರ್ ಅವರಿಗೆ ರಾಜ್ಯಪಾಲ ಆಚಾರ್ಯ ದೇವ್ರತ್ ಪ್ರಮಾಣ ವಚನ ಭೋದಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕ ಅಮಿತ್ ಶಾ, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸೇರಿದಂತೆ ಮತ್ತಿತರ ಕೇಂದ್ರ ಸಚಿವರು ಉಪಸ್ಥಿತರಿದ್ದರು.



ಮಂಡ್ಯ ಜಿಲ್ಲೆಯಿಂದ ಮೊದಲ ಮುಖ್ಯಮಂತ್ರಿಯಾಗಿರುವ ಠಾಕೂರ್ ಹಿಮಾಚಲ ಪ್ರದೇಶದ 14ನೇ ಸಿಎಂ ಆಗಿದ್ದಾರೆ. ಮೊಹಿಂದರ್ ಸಿಂಗ್, ಕೃಷ್ಣನ್ ಕಪೂರ್, ಸುರೇಶ್ ಭಾರದ್ವಾಜ್, ಅನಿಲ್ ಶರ್ಮಾ, ಸರ್ವೀನ್ ಚೌಧರಿ, ರಾಮ್ ಲಾಲ್ ಮರ್ಕಂಡ, ವಿಪಿನ್ ಪರ್ಮಾರ್, ವಿರೇಂದರ್ ಕನ್ವಾರ್, ಗೋವಿಂದ್ ಠಾಕೂರ್, ರಾಜೀವ್ ಸೈಜಲ್ ಹಾಗು ವಿಕ್ರಮ್ ಸಿಂಗ್ ಹಿಮಾಚಲ ಪ್ರದೇಶದ ನೂತನ ಸಚಿವರುಗಳಾಗಿದ್ದಾರೆ.