UN NETWORKS
ಉಳ್ಳಾಲ: ಸೋಮೇಶ್ವರ ಗ್ರಾಮ ಪಂಚಾಯತ್ 2017-18ನೇ ಸಾಲಿನ ಅರಿವಿನ ಸಿಂಚನ ಕಾರ್ಯಕ್ರಮ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಅರಿವಿನ ಸಿಂಚನ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ 14ನೇ ಹಣಕಾಸು ನಿಧಿ ಮತ್ತು ಪಂಚಾಯತ್ ಅನುದಾನದಿಂದ 48 ಫಲಾನುಭವಿಗಳಿಗೆ 2.68 ಲಕ್ಷ ಸಹಾಯ ಧನದ ಚೆಕ್ ವಿತರಣೆಯನ್ನು ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್ ಹಸ್ತಾಂತರಿಸಿದರು.ಬಳಿಕ ಮಾತನಾಡಿದ ಅವರು ವಿಶೇಷವಾಗಿ ಸರಕಾರದಿಂದ ವಿಕಲಚೇತನರಿಗೆ ಸಿಗುವಂತಹ ಸವಲತ್ತುಗಳನ್ನು ಸಮರ್ಪಕವಾಗಿ ಬಳಸುವಲ್ಲಿ ಫಲಾನುಭವಿಗಳು ಆಸಕ್ತಿವಹಿಸಬೇಕು,ಸರಿಯಾದ ವೈದ್ಯಕೀಯ ದಾಖಲೆಯೊಂದಿಗೆ ಸಂಭಂಧಪಟ್ಟ ಇಲಾಖೆಯೊಂದಿಗೆ ನಿಖಟ ಸಂಪರ್ಕದಲ್ಲಿರಬೇಕು,ಸ್ವ ಉದ್ಯೋಗ,ದ್ವಿಚರ್ಕ ವಾಹನ,ಪಿಂಚಣಿ,ಹತ್ತು ಹಲವು ಸವಲತ್ತು ಸಿಗುತ್ತಿದ್ದು ಗೌರವಾನ್ವಿತ ಎಲ್ಲಾ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಯೋಜನೆಯ ಸವಲತ್ತುಗಳನ್ನು ವಿಶೇಷವಾಗಿ ಫಲಾನುಭವಿಗಳಿಗೆ ಮುಟ್ಟಿಸುವಲ್ಲಿ ಆಸಕ್ತಿ ಮತ್ತು ಸಹಕಾರ ನೀಡಬೇಕೆಂದು ಹೇಳಿದರು.
ಸೋಮೇಶ್ವರ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಧನಲಕ್ಷ್ಮಿ ಗಟ್ಟಿ,ಸೋಮೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಶೀಲಾ ನಾಯಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೇಶವ ಪೂಜಾರಿ, ಗುಮಾಸ್ತೆ ರೂಪಾ,ವಿಕಲಚೇತನ ಶರತ್ ಉಪಸ್ಥಿತರಿದ್ದರು