ಸೋಮೇಶ್ವರ: ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಮಹಿಳಾ ದಿನಾಚರಣೆಯನ್ನು ಸೋಮೇಶ್ವರದ ಸಾರಸ್ವತ ಕಾಲನಿಯ ದ್ವಾರಕಾ ನಗರದಲ್ಲಿ ಆಚರಿಸಲಾಯಿತು.
ಬಿಜೆಪಿ ಹಿರಿಯ ಕಾರ್ಯಕರ್ತೆ ವೇದಮ್ಮರವರನ್ನು ಪಕ್ಷಕ್ಕಾಗಿ ಸಲ್ಲಿಸಿದ ಸೇವೆಗಾಗಿ ಸನ್ಮಾನಿಸಲಾಯಿತು.
ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ದೇವಕಿ ರಾಘವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತೆ ಧನಲಕ್ಷ್ಮೀ, ಜಿಲ್ಲಾ ಸಮಿತಿ ಸದಸ್ಯ ನಮಿತಾ ಶ್ಯಾಂ, ಪ್ರಧಾನ ಕಾರ್ಯದರ್ಶಿ ಧನ್ಯವತಿ, ಶಕ್ತಿ ಕೇಂದ್ರದ ಅಧ್ಯಕ್ಷ ದೇವದಾಸ್ ಕೊಲ್ಯ, ಗೀತಾ ಜಿ. ಪ್ರಭು, ರಮಣಿ ಗಟ್ಟಿ, ಶೈಲೇಶ್ ಉಪಸ್ಥಿತರಿದ್ದರು.
ಸೋಮೇಶ್ವರ ಪಂಚಾಯತ್ ಅಧ್ಯಕ್ಷೆ ರಮಣಿ ಕಾರ್ಯಕ್ರಮ ನಿರೂಪಿಸಿದರು. ರಾಜೀವಿ ಕೆಂಪುಮಣ್ಣು ವಂದಿಸಿದರು.