UN networks


ಉಳ್ಳಾಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಸೋಂಕು ತಡೆಗಟ್ಟಲು ಮತ್ತು ಕೋವಿಡ್ ಸೋಂಕಿತರೊಂದಿಗೆ ಸಂಪರ್ಕ ಸಾಧಿಸಲು ಪುರಸಭಾ ಕಚೇರಿಯಲ್ಲಿ ಕೋವಿಡ್ ಸಹಾಯವಾಣಿಯನ್ನು ಆರಂಭಿಸಿದ್ದು, ಸೋಂಕಿತರೊಂದಿಗೆ ವಿಡಿಯೋ ಕಾಲ್ ಮೂಲಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಯಲಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ವಾಣಿ ವಿ. ಆಳ್ವ ತಿಳಿಸಿದ್ದಾರೆ.



ಸೋಮೇಶ್ವರ ಪುರಸಭಾ ಕಚೇರಿಯಲ್ಲಿ ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದ ಅವರು : ಪುರಸಭೆ ವ್ಯಾಪ್ತಿಯಲ್ಲಿ ಕೊರೋನಾ ಎರಡನೇ ಅಲೆಯಲ್ಲಿ ದಿನ ನಿತ್ಯ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಸರಕಾರದ ನಿಯಮದಂತೆ ಜನರಲ್ಲಿ ಅಂತರ ಕಾಯ್ದುಕೊಳ್ಳಲು ಮತ್ತು ಅನವಶ್ಯಕವಾಗಿ ಹೊರಗಡೆ ಓಡಾಡದಂತೆ ಜನತಾ ಕಫ್ರ್ಯೂ ಪುರಸಭಾ ವ್ಯಾಪ್ತಿಯಲ್ಲಿ ವಿಧಿಸಿದೆ. ಈ ಹಿನ್ನೆಲೆಯಲ್ಲಿ ವಿವಿಧ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಅನವಶ್ಯಕವಾಗಿ ಕಛೇರಿಗೆ ಆಗಮಿಸಿ ಕಾಯುವುದನ್ನು ತಪ್ಪಿಸಲು ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ವಿಭಾಗವಾರು ಸಿಬ್ಬಂದಿಗಳನ್ನು ನೇಮಕ ಮಾಡಿ ಪುರಸಭೆ ಕಛೇರಿಗೆ ಬಂದು ಅಲೆದಾಟ ಮಾಡುವುದನ್ನು ತಪ್ಪಿಸಲು ನೇರವಾಗಿ ತಮ್ಮ ಕೆಲಸ ಯಾರಿಂದ ನಡೆಯುತ್ತದೆ ಮತ್ತು ಅವರ ಹೆಸರು ದೂರವಾಣಿ ಸಂಖ್ಯೆಯನ್ನು ಒದಗಿಸಿದ್ದು ಅವರನ್ನು ಸಂಪರ್ಕಿಸಿ ತಮ್ಮ ಅರ್ಜಿಗಳ ಬಗ್ಗೆ ವಿಚಾರಿಸಿ ಸವಲತ್ತುಗಳನ್ನು ಪಡೆದುಕೊಳ್ಳುಲು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಜನರಿಗೆ ಕೋವಿಡ್ ಬಗ್ಗೆ ಮಾಹಿತಿ ಸಿಬ್ಬಂದಿ ರೂಪಾ (8951423051), ತೆರಿಗೆ ಪಾವತಿ ಮತ್ತು ಇತರ ಮಾಹಿತಿಗಾಗಿ ಕಛೇರಿ ವ್ಯವಸ್ಥಾಪಕ ಕೃಷ್ಣ ಆರ್. (9902236990), ಕಂದಾಯ ವಿಭಾಗದಲ್ಲಿ ವಾರ್ಡು 1 ರಿಂದ 23ರವರೆಗೆ ಖಾತಾ ನಕಲು, ದೃಢೀಕರಣ ನಕಲು ಪ್ರತಿ, ಮುಟೇಷನ್, ಕಟ್ಟಡ ನಂಬ್ರಕ್ಕೆ ಪ್ರ.ದ.ಸ- ನಾಗರಾಜ್ (7676186884), ಸುದಿನ್ ಕುಮಾರ್ (9449565684), ಕಟ್ಟಡ ಪರವಾನಿಗೆ ತುಳಸಿದಾಸ್ ಕಿರಿಯ ಅಭಿಯಂತರರು(9449209204), ಶ್ರೇಯಸ್(9611554161), ಆರೋಗ್ಯ ವಿಭಾಗದಲ್ಲಿ ಜನನ ಮರಣ ಪ್ರಮಾಣ ಪತ್ರ, ಬೀದಿದೀಪ ಮತ್ತು ಉದ್ದಿಮೆ ಪರವಾನಿಗೆ – ಲಿಲ್ಲಿ ನಾಯರ್ ಎ ಹಿರಿಯ ಆರೋಗ್ಯ ನಿರೀಕ್ಷಕರು(9342374210), ರೇಖಾ (9008420696), ಡೇ-ನಲ್ಮ್, ಆಶ್ರಯ ಮತ್ತು ಇತರ ಯೋಜನೆಗಳು – ರೋಹಿನಾಥ್ ಸಮುದಾಯ ಸಂಘಟಕರು(9449080417), ಶ್ರೀನಾಥ್ (8431470067), ನೀರು ನಿರ್ವಹಣೆ ವಿಭಾಗ -ಸೌಮ್ಯಶ್ರೀ ಕೆ (8951373051).ಲಾಕ್‍ಡೌನ್ ಸಮಯದಲ್ಲಿ ಅಗತ್ಯ ಸೇವೆಗಳನ್ನು ಮನೆ ಬಾಗಿಲಿಗೆ ಮುಟ್ಟಿಸಲು ಸೋಮೇಶ್ವರ ಪುರಸಭಾ ವ್ಯಾಪ್ತಿಯ ಈ ಕೆಳಗಿನ ಮೊಬೈಲ್ ನಂಬ್ರಗಳನ್ನು ಸಂಪರ್ಕಿಸಬಹುದು.ಯಾವುದೇ ದೂರು, ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ 0824-2466572ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.