
ಉಳ್ಳಾಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಜಾಗೃತಿಅಭಿಯಾನದೊಂದಿಗೆ ಜನರಿಗೆ ಆರಂಭಿಕ ಎಚ್ಚರಿಕೆ ನೀಡಿದ್ದು, ಬುಧವಾರದಿಂದ ಈ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಸಾರ್ವಜನಿಕರು ಮಾಸ್ಕ್ ಸೇರಿದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೋಮೇಶ್ವರ ಪುರಸಭಾ ಮುಖ್ಯಾ„ಕಾರಿ ವಾಣಿ ವಿ. ಆಳ್ವ ಎಚ್ಚರಿಕೆ ನೀಡಿದರು.
ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಮಂಗಳವಾರ ಕೋವಿಡ್ 19 ಜಾಗೃತಿ ಅಭಿಯಾನ ಇದರ ನೇತೃತ್ವ ವಹಿಸಿ ಪ್ರಮುಖ ಜಂಕ್ಷನ್‍ಗಳಲ್ಲಿ ವ್ಯಾಪಾರಸ್ಥರಿಗೆ, ಹೋಟೆಲ್ ಮಾಲೀಕರಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡಿ ಮಾತನಾಡಿದರು.
ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಹೋಟೆಲ್‍ಗಳಲ್ಲಿ ಸಾಮಾಜಿಕ ಅಂತ ಮತ್ತು ಕೋವಿಡ್ ಮುಂಜಾಗರೂಕತಾ ಕ್ರಮವನ್ನು ಕೈಗೊಳ್ಳಬೇಕು ಇದರೊಂದಿಗೆ ಕೇರಳ ಸೇರಿದಂತೆ ಹೊರಗಿನಿಂದ ಬರುವ ಗ್ರಾಹಕರ ಮಾಹಿತಿ ಲಾಡ್ಜ್, ಸೇರಿದಂತೆ ಗೆಸ್ಟ್‍ಹೌಸ್‍ಗಳಲ್ಲಿ ನಮೂದಿಸಬೇಕು ಮತ್ತು ಕಡ್ಡಾಯವಾಗಿ ಅವರಿಂದ ಆರ್‍ಟಿಪಿಸಿಆರ್ ವರದಿ ಪಡೆಯಬೇಕು ಎಂದ ಅವರು ಮಂಗಳವಾರ ಹೋಟೆಲ್, ಲಾಡ್ಜ್, ಗೆಸ್ಟ್‍ಹೌಸ್‍ಗಳಿಗೆ ನೋಟೀಸು ನೀಡಿದ್ದು , ನಿಯಮ ಉಲ್ಲಂಘಿಸಿದರೆ ದಂಡ ವಿಸ್ತಸಲಾಗುವುದು . ಇದರೊಂದಿಗೆ ಪ್ರಮುಖ ಜಂಕ್ಷನ್‍ಗಳಲ್ಲಿ ಪ್ಲೆಕ್ಸ್ ಮೂಲಕ ಜಾಗೃತಿ ಮಾಹಿತಿಯನ್ನು ಹಾಕಲಾಗಿದೆ ಎಂದರು.
ಅಭಿಯಾನ ಕೋಟೆಕಾರು ಬೀರಿ ಜಂಕ್ಷನ್‍ನಿಂದ ಆರಂಭಗೊಂಡು ಕುಂಪಲ ಜಂಕ್ಷನ್, ಯೇನೆಪೆÇಯ ಆಸ್ಪತ್ರೆ ಜಂಕ್ಷನ್, ಕುತ್ತಾರ್ ಜಂಕ್ಷನ್, ಪಿಲಾರ್ ಮಾರ್ಗವಾಗಿ ಕುಂಪಲ, ಆನಂದಾಶ್ರಮ ಶಾಲೆ, ಪರಿe್ಞÁನ ಶಾಲೆ, ಉಚ್ಚಿಲ ಪೆರಿಬೈಲ್, ಉಚ್ಚಿಲ ಬೀಚ್ ರಸ್ತೆಯಾಗಿ ಅಭಿಯಾನ ನಡೆಯಿತು.
ಈ ಸಂದರ್ಭದಲ್ಲಿ ಮಾಸ್ಕ್ ಧರಿಸದ 9 ಮಂದಿಗೆ ತಲಾ 100ರೂ.ವಿನಂತೆ 900ರೂ. ದಂಡ ವಿ„ಸಲಾಯಿತು. ಮೂರು ವಾಹನಗಳಲ್ಲಿ ಮೈಕ್ ಮೂಲಕ ಸೋಮೇಶ್ವರದ ವಿವಿಧ ವಾರ್ಡ್‍ಗಳಲ್ಲಿ ಜಾಗೃತಿ ಮೂಡಿಸಲಾಯಿತು. ಸೋಮೇಶ್ವರ ಪುರಸಭಾ ಮಾಜಿ ಸದಸ್ಯ ಬಶೀರ್, ರೋಹಿತ್ ಗಟ್ಟಿ ,ಸೋಮೇಶ್ವರ ಪುರಸಭಾ ಕಚೇರಿ ವ್ಯವಸ್ಥಾಪಕ ಕೃಷ್ಣ, ಹಿರಿಯ ಆರೋಗ್ಯ ನಿರೀಕ್ಷಕಿ ಲಿಲ್ಲಿ ನಾಯರ್, ಸಿಬಂದಿಗಳಾದ ರೂಪಾ, ಸೌಮ್ಯಶ್ರೀ, ಸುದಿನ್, ಶ್ರೇಯಸ್, ಪ್ರೀತಿ, ಶ್ರೀನಾಥ್. ಪೌರಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ರಿಕ್ಷಾ ಚಾಲಕರು, ಸಾರ್ವಜನಿಕರು ಈ ಸಂದರ್ಭದಲ್ಲಿ ಅಭಿಯಾನದಲ್ಲಿ ಭಾಗವಹಿಸಿದರು.
