ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಸೋಮೇಶ್ವರ: ಸ್ನೇಹಿತರ ಜತೆಗೆ ವಿಹಾರಕ್ಕೆಂದು ಬಂದಿದ್ದ ಬ್ರಹ್ಮಾವರ ಬಾರಕೂರು ನಿವಾಸಿ ಸುರೇಶ್ ಶೆಟ್ಟಿ (40) ಎಂಬವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮೇಶ್ವರದ ಕೆರೆಯಲ್ಲಿ ಸಂಭವಿಸಿದೆ.
ಕೊಲ್ಯ ಕನೀರುತೋಟದ ತನ್ನ ಐದು ಮಂದಿ ಸ್ನೇಹಿತರ ಜತೆಗೆ ವಿಹಾರಕ್ಕೆಂದು ಬಂದ ಸಂದರ್ಭ ಘಟನೆ ಸಂಭವಿಸಿದೆ. ಸುರೇಶ್ ಅವರು ಏಳು ತಿಂಗಳ ಹಿಂದೆ ಅಯ್ಯಪ್ಪ ವೃತಧಾರಿಯಾಗಿ ಕನೀರುತೋಟದ ಯುವಕರ ಜತೆಗೆ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಇದೇ ಪರಿಚಯದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಜತೆಯಾಗಿದ್ದ ಎಲ್ಲರೂ ಊಟ ಮುಗಿಸಿ ಸೋಮೇಶ್ವರ ಸಮುದ್ರ ತೀರಕ್ಕೆ ಬಂದಿದ್ದರು. ಅಲ್ಲಿ ಕೆರೆಯಲ್ಲಿ ಸುರೇಶ್ ಅವರು ಈಜಲು ಆರಂಭಿಸಿದ್ದು, ಆಯತಪ್ಪಿ ಮುಳುಗಿದರೆನ್ನಲಾಗಿದೆ. ಸ್ಥಳೀಯ ಈಜುಗಾರರನ್ನು ಕರೆಯುವಷ್ಟರಲ್ಲಿ ಸುರೇಶ್ ನೀರಲ್ಲಿ ಮುಳುಗಿ ಮೃತಪಟ್ಟಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.