UN NETWORKS


ಮಂಗಳೂರು: ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಸೋಸಿಯಲ್ ಅಚೀವ್‍ಮೆಂಟ್ ಫಾರಂ ಇದರ ಸದಸ್ಯರು ವೆಲೆನ್ಸಿಯಾದಲ್ಲಿರುವ ಸೈಂಟ್ ಆಂಟನಿ ಪೂವರ್ ಹೋಂ ಎಂಬ ಕ್ರೈಸ್ತರ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಫಾದರ್ ಫ್ರಾನ್ಸಿಸ್‍ಡಿ ಸೋಜರವರಿಗೆ ಹೂಗುಚ್ಛ ನೀಡಿ ಕ್ರಿಸ್‍ಮಸ್ ಹಬ್ಬದ ಶುಭಾಶಯ ಕೋರಿದರು.



ಈ ಸಂದರ್ಭ ಸಂಸ್ಥೆಯ ಫಾದರ್ ಫ್ರಾನ್ಸಿಸ್‍ಡಿಸೋಜರವರು ಸೋಸಿಯಲ್ ಅಚೀವ್‍ಮೆಂಟ್‍ನ ಸದಸ್ಯರ ಕಾರ್ಯವನ್ನು ಮೆಚ್ಚಿಕೊಂಡರು. ಬಳಳಿಕ ಮಾತನಾಡಿದ ಅವರು ಹಬ್ಬ ಹರಿದಿನಗಳಲ್ಲಿ ಬೇರೆ ಬೇರೆ ಧರ್ಮದವರು ಪರಸ್ಪರ ಶುಭಾಶಯ ಕೋರುವಿಕೆ, ಸಿಹಿತಿಂಡಿ ವಿತರಣೆ ಮೋದಲಾದ ಕಾರ್ಯಕ್ರಮಗಳು ನಡೆಯುತ್ತವೆ. ಧರ್ಮಗಳ ಮಧ್ಯೆ ನಂಬಿಕೆ, ಪ್ರೀತಿ, ವಿಶ್ವಾಸ, ಸಹೋದರತೆ, ಸೌಹಾರ್ದತೆ ಕಡಿಮೆಯಾಗದಂತೆ ಸಮಾಜಿಕ ಮೌಲ್ಯಗಳನ್ನು ಕಾಪಾಡಬೇಕಾದ ಅವಶ್ಯಕತೆ ಇಂದಿನ ದಿನಗಳಲ್ಲಿ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನಾಸಿರ್ ಸಾಮಣಿಗೆ, ಸಂಚಾಲಕ, ನಿಯಾಝ್ ಸಾಮಣಿಗೆ, ಪತ್ರಕರ್ತ ಬಶೀರ್ ಕಲ್ಕಟ್ಟ, ಅಡ್ವೋಕೇಟ್ ಫೈಝಲ್, ಪ್ರ. ಕಾರ್ಯದರ್ಶಿ ಇಬ್ರಾಹಿಂ ಖಲೀಲ್, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಖಾದರ್ ಅಡ್ಕರೆ, ಉದ್ಯಮಿ ಅಜೀಂ ಕಂಕನಾಡಿ, ಮುಸ್ತಫಾ ಪಟ್ಲ, ಅಬ್ದುಲ್ ರಶೀದ್ ಮಂಜನಾಡಿ ಇದ್ದರು.