UN NETWORKS

ಕೊಣಾಜೆ: ಸೇವೆ ಮತ್ತು ತ್ಯಾಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ದೇಶ ತನ್ನಿಂತಾನೆ ಆಬಿವೃದ್ಧಿಯಾಗಲು ಸಾಧ್ಯ ಎಂದು ಮಾಜಿ ಒಂಬುಡ್ಸ್‍ಮೆನ್ ಹಾಗೂ ಜನಶಿಕ್ಷಣ ಟ್ರಸ್ಟ್‍ನ ಮುಖ್ಯಸ್ಥರಾದ ಶೀನ ಶೆಟ್ಟಿ ಅಭಿಪ್ರಾಯಪಟ್ಟರು.


ಅವರು ಕೊಣಾಜೆಯ ಗುಡ್ಡುಪಾಲು ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ಸಭಾಂಗಣದಲ್ಲಿ ಮಂಗಳೂರು ರಥಬೀದಿಯ ಡಾ| ಪಿ. ದಯಾನಂದ ಪೈ ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು.
ಎಲ್ಲಾ ಕ್ರಿಯೆಗಳಿಗೆ ಚಿಂತನೆಗಳೇ ಬೀಜಗಳು ಇಂತಹ ಚಿಂತನೆಗಳು ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಮುಖ್ಯಸ್ಥರು ಆಳವಡಿಸಿಕೊಂಡಿದ್ದು, ಇದರೊಂದಿಗೆ ಎರಡು ಆದರ್ಶಗಳ ಮೂಲಕ ಗ್ರಾಮದ ಅಭಿವೃದ್ಧಿಯ ಚಿಂತನೆಯತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ.
ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಆಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಗ್ರಾಮದ ಆಭಿವೃದ್ಧಿಯ ನಿಟ್ಟಿನಲ್ಲಿ ಕಳೆದ ಆರು ತಿಂಗಳಿನಿಂದ ಉತ್ತಮ ಕಾರ್ಯವನ್ನು ಗ್ರಾಮದಲ್ಲಿ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಕಾರ್ಯಕ್ಕೆ ಪ್ರೋತ್ಸಾಹ ನೀಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಥಬೀದಿ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೋ| ರಾಜೇಖರ್ ಹೆಬ್ಬಾರ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾ„ಕಾರದ ಮಾಜಿ ಅದ್ಯಕ್ಷ ಇಬ್ರಾಹಿಂ ಕೋಡಿಜಾಲ್, ಹಸಿರು ಸೇನೆ ರಾಜ್ಯ ರೈತ ಸಂಘದ ಕಾರ್ಯದರ್ಶಿ ಮನೋಹರ ಶೆಟ್ಟಿ, ಕಿಟೆಲ್ ಮೆಮೋರಿಯಲ್ ಪದವಿಪೂರ್ವ ಕಾಲೇಜು ಗೋರಿಗುಡ್ಡೆ ಇಲ್ಲಿನ ಪ್ರಾಂಶುಪಾಲ ವಿಠಲ್ ಆಬುರ, ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಆಧ್ಯಕ್ಷ ಹಾಗೂ ಸದಸ್ಯ ಅಚ್ಯುತ ಗಟ್ಟಿ ಕೆಳಗಿನಮನೆ, ಶ್ರೀ ರಾಮಕೃಷ್ಣ ಪ್ರೌಢಶಾಲೆ ಹರೇಕಳ ಇಲ್ಲಿನ ಮುಖ್ಯ ಶಿಕ್ಷಕ ರವೀಂದ್ರ ರೈ , ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹಾಗೂ ಕುಡುಬಿ ಸಮುದಾಯದ ಮುಖಂಡ ನರ್ಸುಗೌಡ ಅಣ್ಣೆರೆ ಪಾಲು, ಎಪಿಎಂಸಿ ಉಪಾಧ್ಯಕ್ಷೆ ಮುತ್ತು ಎನ್ ಶೆಟ್ಟಿ, ಕೊಣಾಜೆ ಗ್ರಾಮ ಪಂಚಾಯತ್ ಸದಸ್ಯರಾದ ರಾಮಚಂದ್ರ ಎಂ., ವೇದಾವತಿ ಗಟ್ಟಿ, ಗೋವಿಂದ ಗೌಡ, ಮಹಮ್ಮದ್ ಇಕ್ಬಾಲ್ ಬರುವ, ಪ್ರೇಮ್‍ದಾಸ್ ಆಸೈಗೋಳಿ, ಗೀತಾ ಮುಚ್ಚಿಲ್ ಕೋಡಿ, ಗುಲಾಬಿ ಮುಚ್ಚಿಲ್‍ಕೋಡಿ, ಹರಿಶ್ಚಂದ್ರ ಮುಚ್ಚಿಲ್‍ಕೋಡಿ, ತಾಹಿರ ಅಡ್ಕರೆಪಡ್ಪು, ಅಬ್ದುಲ್ ಖಾದರ್ ಅಡ್ಕರೆಪಡ್ಪು ರಾಷ್ಟ್ರೀಯ ಸೇವಾಯೋಜನೆಯ ಯೋಜನಾ„ಕಾರಿ ಜೆಫ್ರಿ ರಾಡ್ರಿಗಸ್ , ಕಾರ್ಯದರ್ಶಿಗಳಾದ ಭರತ್ ಶೆಟ್ಟಿ ಉದಯ ಕುಮಾರ್, ನಿಕ್ಷಿತಾ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾಯೋಜನೆಯ ಯೋಜನಾ„ಕಾರಿ ಜೆಫ್ರಿ ರಾಡ್ರಿಗಸ್ ಸ್ವಾಗತಿಸಿದರು. ಯೋಜನಾ„ಕಾರಿ ಡಾ| ನವೀನ್ ಎನ್. ಕೊಣಾಜೆ ಪ್ರಸ್ತಾವನೆಗೈದರು. ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಯೋಜನಾ„ಕಾರಿ ನಾಗವೇಣಿ ಮಂಚಿ ವಂದಿಸಿದರು.