ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಸ್ವಾತಂತ್ರ್ಯಪೂರ್ವದಿಂದಲೂ ಸಮಾಜಕ್ಕೆ ಮಹಿಳೆಯರ ಕೊಡುಗೆ ಅಪಾರವಾದದ್ದು. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕನಂತವರೂ ದೇಶಕ್ಕಾಗಿ ಹೋರಾಟ ಮಾಡಿ ಸಮಾಜದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಪಾತ್ರ ವಹಿಸಿದ್ದಾರೆ. ಅಲ್ಲದೆ ಮದರ್‍ಥೆರೆಸಾgರಂತವರು ಕೂಡಾ ಸಮಾಜ ಸೇವೆಯ ಮೂಲಕ ಉತ್ತಮ ಕೊಡುಗೆ ನೀಡಿದ್ದಾರೆ. ಆದ್ದರಿಂದ ಸಮಾಜಕ್ಕೆ ಮಹಿಳಾ ಶಕ್ತಿಯೂ ನೀಡಿದ ಕೊಡುಗೆಯನ್ನು ನಾವು ಪ್ರೇರಣೆಯಾಗಿಟ್ಟುಕೊಂಡು ಮಹಿಳಾ ಸಶಕ್ತೀಕರಣಕ್ಕಾಗಿ ಮುಂದಿನ ಪೀಳಿಗೆಗೆ ಬೇಕಾದ ಅಡಿಪಾಯವನ್ನು ಹಾಕುವ ಅವಶ್ಯಕತೆವಿದೆ ಎಂದು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಸಂಸ್ಥೆಯ ಅಧ್ಯಕ್ಷರಾದ ಡಾ. ದಿವ್ಯಾ ಪ್ರಭಾ ಗೌಡ ಅವರು ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಆಶ್ರಯದಲ್ಲಿ ವಿವಿಯ ಮಂಗಳಾ ಸಭಾಂಗಣದಲ್ಲಿ `ಸಮಾಜದಲ್ಲಿ ಬದಲಾವಣೆ ಸೃಷ್ಟಿಸುವ ಮಹಿಳೆ ಮತ್ತು ¸ಮಾಜಿಕ ಸ್ಥಿತಿಯಲ್ಲಿ ಬದಲಾದ ಮಹಿಳೆಯ ಪಾತ್ರ’ ಎಂಬ ವಿಷಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಸಮ್ಮೇಳನವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಇಂದು ಮಹಿಳೆಯರ ಅಭಿವದ್ದಿಗಾಗಿ ಸರಕಾರ ಹಲವಾರು ಯೋಜನೆಗಳು,ಕಾನೂನುಗಳು ರೂಪಿತಗೊಂಡಿವೆ. ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಬಹಳಷ್ಟು ಮೀಸಲಾತಿಗಳು ಇವೆ. ಇಂತಹ ಅವಕಾಶಗಳನ್ನು ಮಹಿಳೆಯರು ಸಮರ್ಥವಾಗಿ ಬಳಸಿಕೊಂಡು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಅವರು ಹೇಳಿದರು.
ತಮಿಳುನಾಡು ತಿರುಚನಪಳ್ಳಿಯ ಭಾರತಿದಾಸನ್ ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ವಿಭಾಗದ ನಿರ್ದೇಶಕರದ ಡಾ. ಎನ್. ಮಣಿಮೆಕಲೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂದಿನ ಪ್ರಸ್ತುತ ಸಮಾಜದಲ್ಲಿ ಅನಿಷ್ಟ ಪದ್ದತಿಗಗಳಾದ ಸತೀ ಪದ್ದತಿ, ಬಾಲ್ಯ ವಿವಾಹದಂತಹ ಪಿಡುಗು ಕಡಿಮೆಯಾಗಿದೆ. ಆದರೂ ಮಹಿಳೆ ಇಂದ ಕೂಡಾ ದೌರ್ಜನ್ಯದಿಂದ ಮುಕ್ತವಾಗಿಲ್ಲ. ಅತ್ಯಾಚಾರ, ಬಾಲಕಿಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿ.ವಿ.ಕುಲಸಚಿವ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ವಹಿಸಿದ್ದರು.
ಕಾರ್ಯಾಗಾರದ ಸಂಘಟಕರಾದ ಡಾ. ಪೌಲ್ ಜೆರಾಲ್ಡ್ ಅಕ್ವಿನಸ್ ರವರು ವಿಚಾರಸಂಕಿರಣದ ರೊಪುರೇಷೆಯ ವಿವರಣೆಯನ್ನು ನೀಡಿದರು. ಸಮಾಜಶಾಸ್ತ್ರ ವಿಭಾಗದ ಅಧ್ಯಕ್ಷರಾದ ಪೆÇ್ರ.ಜೋಗನ್ ಶಂಕರ್ ರವರು ಸ್ವಾಗತಿಸಿ, ಡಾ.ಯಶಸ್ವಿನಿ ರವರು ಧನ್ಯವಾದಗೈದರು. ಲಾಯ್ಡ್ ವಿಕ್ಕಿ ಮತ್ತು ಕುಮಾರಿ ನಿಶ್ಮಿತ ಕಾರ್ಯಕ್ರಮವನ್ನು ನಿರೂಪಿಸಿದರು.