ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮಾಡೂರು: ಕೋಟೆಕಾರು ಬೀರಿ ಸಮೀಪದ ಪ್ರತಿಷ್ಠಿತ ಕಾಲೇಜೊಂದರ ಕ್ಯಾಂಪಸ್ ಒಳಗಿನ ಕ್ಯಾಂಟೀನ್ ಒಂದರಲ್ಲಿ ವಿಷಾಹಾರ ಸೇವನೆಯಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಗುರುವಾರ ನಡೆದಿದೆ.

ವಿದ್ಯಾರ್ಥಿಗಳ ಅಸ್ವಸ್ಥತೆಯ ಬಗ್ಗೆ ಠಾಣೆಗಾಗಲೀ ಮಾಧ್ಯಮಕ್ಕಾಗಲೀ ಯಾವುದೇ ಮಾಹಿತಿ ನೀಡದಂತೆ ಶಾಲಾ ಆಡಳಿತ ತಾಕೀತು ಮಾಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮಾಧ್ಯಮಕ್ಕಾಗಲೀ ಠಾಣೆಗಾಗಲೀ ದೂರು ದಾಖಲಿಸಿಲ್ಲ.
ಅಸ್ವಸ್ಥಗೊಂಡ ವಿದ್ಯಾರ್ಥಿಗಳ ಪೆÇೀಷಕರು ಆಸ್ಪತ್ರೆಯ ಹೊರಗಡೆ ಗಲಿಬಿಲಿಗೊಂಡು ಆತಂಕದಲ್ಲಿದ್ದರಾದರೂ ಶಾಲಾ ಆಡಳಿತ ವಿದ್ಯಾರ್ಥಿಗಳ ಆಸ್ಪತ್ರೆ ಖರ್ಚು ವೆಚ್ಚ ಭರಿಸುವ ಭರವಸೆ ನೀಡಿದ್ದು ಹಾಗೂ ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ಭವಿಷ್ಯದ ಹಿನ್ನೆಲೆಯಲ್ಲಿ ದೂರು ನೀಡಿಲ್ಲ ಎನ್ನಲಾಗಿದೆ.
ಇಪ್ಪತಕ್ಕೂ ಅ„ಕ ವಿದ್ಯಾರ್ಥಿಗಳ ಪೈಕಿ ಹದಿನೈದು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕೆಲವು ವಿದ್ಯಾರ್ಥಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿ ತೆರಳಿದ್ದಾರೆ. ಕಾಲೇಜಿನಲ್ಲಿ ಬುಧವಾರ ಹಾಗೂ ಶುಕ್ರವಾರ ರಾಷ್ಟಿ ್ರೀಯ ಮಟ್ಟದ ಉತ್ಸವವೊಂದನ್ನು ಆಯೋಜಿಸಲಾಗಿದ್ದು ಗುರುವಾರ ಮಧ್ಯಾಹ್ನ ವಿದ್ಯಾರ್ಥಿಗಳಿಗೆ ನೀಡಿದ ಸವಿಊಟದಲ್ಲಿ ವಿಷಾಹಾರ ಮಿಶ್ರಣಗೊಂಡಿದ್ದು ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಲು ಕಾರಣವಾಯಿತೆಂದು ನಂಬಲರ್ಹ ಮೂಲಗಳು ತಿಳಿಸಿವೆ.