ಉಳ್ಳಾಲ್ ನ್ಯೂಸ್ ಡೆಸ್ಕ್
ಉಳ್ಳಾಲ: ವಿದ್ಯುತ್ ವಯರ್ ಸ್ಪರ್ಶಿಸಿ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಉಚ್ಚಿಲ ಬೆಟ್ಟಂಪಾಡಿ ಬಳಿ ಸಂಭವಿಸಿದೆ.
ಕುಂಜತ್ತೂರು ನಿವಾಸಿ ಚಂದ್ರ(೨೯) ಮೃತರು. ಉಚ್ಚಿಲ ಬೆಟ್ಟಂಪಾಡಿಯ ಸಮುದ್ರ ತೀರಕ್ಕೆ ಮೀನು ಹಿಡಿಯಲೆಂದು ಬಂದಿದ್ದ ಸಂದರ್ಭ ಘಟನೆ ನಡೆದಿದೆ. ಶನಿವಾರ ಎಂದಿನಂತೆ ಬೆಳಗ್ಗಿನ ಬೇಳೆ ಮೀನು ಹಿಡಿಯಲು ಉಚ್ಚಿಲ ಬೆಟ್ಟಂಪಾಡಿ ಒಳ ಪ್ರದೇಶಕ್ಕೆ ಬಂದಿದ್ದರು. ಶನಿವಾರ ಬಂದವರು ರಾತ್ರಿಯಾದರೂ ಮನೆಗೆ ಹೋಗದೇ ಇದ್ದರಿಂದ ಗಾಬರಿಗೊಂಡ ಮನೆಮಂದಿ ಕಾಣೆಯಾದ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಚಂದ್ರ ಅವರು ಮೀನು ಹಿಡಿಯಲು ಇಳಿದ ಜಾಗದಲ್ಲೇ ವಿದ್ಯುತ್ ವಯರ್ ಕೆಳಭಾಗದಲ್ಲಿದ್ದು, ವಿದ್ಯುತ್ ವಯರ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.