ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಸೋಮೇಶ್ವರ: ರಾಜ್ಯದ ಅತೀ ದೊಡ್ಡ ಗ್ರಾಮ ಪಂಚಾಯತ್ ಆಗಿರುವ ಮಂಗಳೂರು ವಿಧಾನ ಸಬಾ ಕ್ಷೇತ್ರ ವ್ಯಾಪ್ತಿಯ ಸೋಮೇಶ್ವರ ಗ್ರಾಮ ಪಂಚಾಯತ್ಗೆ ೧೯ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯತ್ನ ಹಾಲಿ ಅಧ್ಯಕ್ಷೆ ರಮಣಿ ಮತ್ತು ಉಪಾಧ್ಯಕ್ಷ ರಾಜೇಶ್ ಎ. ಉಚ್ಚಿಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯತ್ನ ೬೧ ಸ್ಥಾನಗಳಲ್ಲಿ ೪೨ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಐದು ವಾರ್ಡ್ಗಳಲ್ಲಿ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದರಿಂದ ಚುನಾವಣೆಯಿಂದ ಮುಕ್ತವಾಗಿದೆ. ಅಂಬಿಕಾ ರೋಡ್ ಪಿಲಾರ್ ೪ನೇ ವಾರ್ಡ್ನಲ್ಲಿ ಉದಯ ಗಟ್ಟಿ, ದೀಪಕ್ ಪಿಲಾರ್, ಪರ್ವೀನ್, ಕುಂಪಲ ಚೆತನ ನಗರ ೫ನೇ ವಾರ್ಡ್ನಲ್ಲಿ ಶಾಲಿನಿ, ಕುಂಪಲ ಕೃಷ್ಣನಗರ ೬ನೇ ವಾರ್ಡ್ನಲ್ಲಿ ಶಶಿಕಲಾ, ಕುಂಪಲ ಆಶ್ರಯ ಕಾಲನಿ ೮ನೇ ವಾರ್ಡ್ನಲ್ಲಿ ಕುಮುದಾಕ್ಷಿ, ಕನೀರು ತೋಟ ಹನುಮಾನ್ನಗರ ವಾರ್ಡ್ನಲ್ಲಿ ಹರಿಣಾಕ್ಷಿ , ಸುಕನ್ಯಾ, ಸೋಮೇಶ್ವರ ಫೆರಬೈಲ್ ವಾರ್ಡ್ನಲ್ಲಿ ರಮಣಿ, ವೇದಾವತಿ, ಅಜಿತ್, ಉಚ್ಚಿಲ ನೇತಾಜಿ ರಸ್ತೆ ೧೫ನೇ ವಾರ್ಡ್ನಲ್ಲಿ ರಾಜೇಶ್ ಎ. ಉಚ್ಚಿಲ, ಲೋಲಾಕ್ಷಿ, ಸಾವಿತ್ರಿ, ಉಚ್ಚಿಲ ನಯಾಪಟ್ಣ ೧೬ನೇ ವಾರ್ಡ್ನಲ್ಲಿ ಫಾತಿಮ್ಮಾತ್ ಭಾನು, ಇಸ್ಮಾಯಿಲ್, ಉಚ್ಚಿಲ ಕರಾವಳಿ ೧೭ನೇ ವಾರ್ಡ್ನಲ್ಲಿ ರೇವತಿ, ಸಚಿನ್, ಸೋಮೇಶ್ವರ ಶಿವಶಕ್ತಿ ನಗರ ೧೯ನೇ ವಾರ್ಡ್ನಲ್ಲಿ ಮಮತಾ ವಾಸುಗೋಪಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಿನ್ಯಾ ಗ್ರಾ.ಪಂ.ನ ಕುರಿಯ ಸಾಂತ್ಯ ಭಾಗದ ನಾಲ್ಕನೇ ವಾರ್ಡಿನ ಭಾಗಿ, ಮಂಜನಾಡಿ ಗ್ರಾ.ಪಂ.ನ ಅಸೈಗೋಳಿ ೧ ನೇ ವಾರ್ಡಿನ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಮಹಮ್ಮದ್, ಬದಲಿಕಟ್ಟೆ ಪೂವೆನಾಡು ೪ ನೇ ವಾರ್ಡಿನ ಬಾವು ಮರಾಠಿಮೂಲೆ, ಅದೇ ವಾರ್ಡಿನ ಬದಲಿಕಟ್ಟೆಯ ಸದಸ್ಯೆ ಮರಿಯಮ್ಮ, ಕಲ್ಕಟ್ಟ-ಬದ್ಯಡ್ಕ ಐದನೇ ವಾರ್ಡಿನ ಶೋಭಾ, ಮುನ್ನೂರು ಗ್ರಾ.ಪಂ.ನ ಸುಭಾಷನಗರ ೩ನೇ ವಾರ್ಡಿನ ಬಿಜೆಪಿ ಬೆಂಬಲಿತೆ ಚಂದ್ರಕಲಾ, ತಲಪಾಡಿಯ ಎರಡನೇ ವಾರ್ಡು ಕೆ.ಸಿರೋಡಿನ ಗೀತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.