ullalavani news

ಉಳ್ಳಾಲ: ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ೨೪ ಗಂಟೆಯೊಳಗೆ ಬೆಂಗಳೂರು ಆಸ್ಪತ್ರೆಗೆ ತುರ್ತಾಗಿ ಲಿವರ್ ಟ್ರಾನ್ಸ್ ಪ್ಲಾಂಟ್ ನಡೆಸಲು ಬೆಂಗಳೂರು ದಾಖಲು ಆಗಬೇಕಿರುವ ಕೊಡಗಿನ 19ರ ಯುವತಿಯ ಜೀವ ರಕ್ಷಣೆಗೆ ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲು ಮನೆಮಂದಿ ಸಹಾಯ ಯಾಚಿಸಿದ್ದಾರೆ. ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸುವ ಸಂಸ್ಥೆಯ ಜಾಹೀರಾತನ್ನು ಉಳ್ಳಾಲವಾಣಿ ಸಂಸ್ಥೆ ಉಚಿತವಾಗಿ ಪತ್ರಿಕೆ ಮತ್ತು ವೆಜಬ್ ಸೈಟಿನಲ್ಲಿ ಪ್ರಕಟಿಸಲಿದೆ.
ಕೊಡಗು ಪೊನ್ನಪ್ಪ ಸಂತೆ ಗ್ರಾಮದ 19 ವರ್ಷದ ಪ್ರತಿಭಾ ಳ ಜೀವ ಉಳಿಸಲು ಆಂಬ್ಯುಲೆನ್ಸ್ ಸೇವೆಯವರು ಮುಂದಾಗಬೇಕಿದೆ. ಲಿವರ್ ಬಡ್ ಛಿಯರಿ ಸಿಂಡ್ರೋಮ್ ನಿಂದ ಬಳಲುತ್ತಿರುವ ಪ್ರತಿಭಾಳನ್ನು ಕರ್ನಾಟಕ ಸರಕಾರದ ಇನ್ಟಿ÷್ಟಟ್ಯೂಟ್ ಆಫ್ ಗ್ಯಾಸ್ಟ್ರೋಡಾಂಟಾಲಜಿ ಸೈನ್ಸಸ್ ಆಂಡ್ ಆರ್ಗನ್ ಟ್ರಾನ್ಸ್ ಪ್ಲಾö್ಯಂಟ್ (ಐಗಾಟ್ ಆಸ್ಪತ್ರೆ) ವಿಕ್ಟೋರಿಯ ಆಸ್ಪತ್ರೆ ಕ್ಯಾಂಪಸ್ ಬೆಂಗಳೂರಿಗೆ ತಕ್ಷಣ ಕೊಂಡೊಯ್ಯಬೇಕಿದೆ.
ಆಗಿದ್ದೇನು : ಪದವಿ ವಿದ್ಯಾರ್ಥಿನಿ ಪ್ರತಿಭಾ (19) ಳಿಗೆ ಮೂರು ತಿಂಗಳ ಹಿಂದೆ ಡೆಂಗ್ಯೂ ಬಾಧಿಸಿತ್ತು. ಚಿಕಿತ್ಸೆ ನಂತರ ಡೆಂಗ್ಯೂ ನಿಂದ ಗುಣಮುಖಳಾಗಿದ್ದಳು. ಮನೆಮಂದಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿರುವವರು ಸಂಸಾರದ ನೌಕೆಯೇ ಕಷ್ಟವಾಗಿರುವ ಸಂದರ್ಭ ಹಣ ಹೊಂದಾಣಿಕೆ ಮಾಡಿಕೊಂಡು ಗುಣಮುಖರಾಗಿಸಿದ್ದರು. ಆದರೆ ನಂತರದ ದಿನಗಳಲ್ಲಿ ಪ್ರತಿಭಾ ಳ ಹೊಟ್ಟೆ ಊದಿಕೊಂಡು ಬರುತ್ತಿದ್ದು, ಮತ್ತೆ ವೈದ್ಯರ ಬಳಿ ಹೋದಾಗ ಸರಿಯಾದ ಕಾರಣ ಸಿಗದೇ ಕೆಲ ದಿನಗಳವರೆಗೆ ಹಾಗೆಯೇ ಕಳೆದಿದ್ದರು. ಬಳಿಕ ಸಾವಿರಾರು ರೂ.ಖರ್ಚು ಮಾಡಿಕೊಂಡು ಅಪೋಲೋ ಆಸ್ಪತ್ರೆಯಲ್ಲಿ ಗಮನಿಸಿದಾಗ ಕರುಳು ಭಾಗದಿಂದ ಲಿವರ್ ನತ್ತ ರಕ್ತಸಂಚಾರ ನಡೆಸುವ ಹೆಪಟಿಕ್ ವೇನ್ ಬ್ಲಾಕ್ ಆಗಿದ್ದು, ಲಿವರಿಗೆ ರಕ್ತಸಂಚಾರವಾಗದೆ ನೀರು ತುಂಬುತ್ತಿರುವ ಅಂಶ ಬೆಳಕಿಗೆ ಬಂದಿದೆ. ಅದಕ್ಕಾಗಿ ಮೂರು ವೇನ್ ಗಳಿಗೆ ಸ್ಟಂಟಿಂಗ್ ನಡೆಸಿ ರಕ್ತಸಂಚಾರ ಸರಳ ಮಾಡಿಕೊಡಬೇಕಿದೆ ಅನ್ನುವ ವೈದ್ಯರ ಸಲಹೆ ಸಿಕ್ಕಿದೆ. ಆದರೆ ಅಪೋಲೊ ಆಸ್ಪತ್ರೆಯಲ್ಲಿ ಸರ್ಜರಿಗೆ ರೂ. 8.5 ಲಕ್ಷ ತಗುಲುವುದಾಗಿ ತಿಳಿಸಿದ್ದರಿಂದ ಬಡ ಹೆತ್ತವರು ದಿಕ್ಕು ತೋಚದಂತಾಗಿದ್ದರು. ಈ ನಡುವೆ ಕೊಡಗು ಭಾಗದಲ್ಲಿ ಬಡ ರೋಗಿಗಳ ಚಿಕಿತ್ಸೆಗಳಿಗೆ ಸರಕಾರಿ ವ್ಯವಸ್ಥೆಗಳಾಗಲಿ, ಖಾಸಗಿ ಆಸ್ಪತ್ರೆಗಳಿಂದ ಚಿಕಿತ್ಸೆ ಒದಗಿಸಲು ಸಹಕರಿಸುತ್ತಾ ಬಂದಿರುವ ಸಮಾಜಸೇವಕ ಸಂಜು ಸುಬ್ಬಯ್ಯ ಅವರನ್ನು ಸಂಪರ್ಕಿಸಿದ್ದಾರೆ. ಅವರು ತಕ್ಷಣಕ್ಕೆ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯನ್ನು ಸಂಪರ್ಕಿಸಿ ಅಲ್ಲಿ ಇಂಟ್ರಾವೆನ್ಷನಲ್ ರೇಡಿಯಾಲಾಜಿಸ್ಟ್ ಡಾ| ವಿಜಯ ಮತ್ತು ಗ್ಯಾಸ್ಟ್ರೋಡಾಂಲಾಜಿಸ್ಟ್ ಡಾ| ಚಂದ್ರಶೇಖರ್ ಸೊರಕೆ ಅವರ ಸಹಕಾರದಿಂದ ದಾನಿಗಳಿಂದ ಸಂಗ್ರಹಿಸಿದ ಕನಿಷ್ಠ ಮೊತ್ತದಿಂದ ಒಂದು ವೇನ್ ಗೆ ಸ್ಟಂಟ್ ಹಾಕುವಂತೆ ಮಾಡಿದರು. ಇದರಿಂದಾಗಿ ಶೇ.33 ರಕ್ತಸಂಚಾರ ಆರಂಭವಾಗಿದೆ. ಆದರೆ ಈ ನಡುವೆ ಪ್ರತಿಭಾಳ ಲಿವರಿನಿಂದ ನೀರು ತೆಗೆಯಲು ಮುಂದಾಗುವಾಗ ಸೋಡಿಯಂ ಕಡಿಮೆಯಾಗುತ್ತಿದ್ದು, ಅದಕ್ಕೆ ಔಷಧಿ ನೀಡುವಾಗ ಆಲ್ಬಮಿನ್ ಕಡಿಮೆಯಾಗುತ್ತಿದೆ. 17 ದಿನಗಳ ಚಿಕಿತ್ಸೆ ಬಳಿಕ ಸ್ವಲ್ಪ ಗುಣಮುಖಳಾಗಿದ್ದ ಪ್ರತಿಭಾ ಇದೀಗ ಜೀವನ್ಮರಣ ಸ್ಥಿತಿಯಲ್ಲಿದ್ದಾಳೆ. ತಕ್ಷಣಕ್ಕೆ ಬೆಂಗಳೂರಿನ ಐಗಾಟ್ ಆಸ್ಪತ್ರೆಯಲ್ಲಿ ಸಮಾಜಸೇವಕ ಸಂಜು ಸುಬ್ಬಯ್ಯ ಅವರು ಲಿವರ್ ಟ್ರಾನ್ಸ್ ಪ್ಲಾಂಟ್ ಕುರಿತು ಮಾತುಕತೆ ನಡೆಸಿದ್ದು, ಲಿವರ್ ಸಂಬಂಧಿತ ಹೊರರೋಗಿಗಳಿಗೆ ಸೋಮವಾರ ಮತ್ತು ಗುರುವಾರ ಮಾತ್ರ ತೆರೆದಿದ್ದು, ಆ.19 ಅಥವಾ ಆ.20 ರ ಒಳಗೆ ಪ್ರತಿಭಾ ಬೆಂಗಳೂರು ತಲುಪಬೇಕಿದೆ. ಈ ನಡುವೆ ಆಂಬ್ಯುಲೆನ್ಸ್ ಹಣ ನೀಡುವಷ್ಟು ಶಕ್ತರಲ್ಲದ ತಾಯಿ , ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲು ದಾನಿಗಳ ಮೊರೆಹೋಗಿದ್ದಾರೆ .
ಯುವತಿ ಪ್ರತಿಭಾಳ ಜೀವರಕ್ಷಣೆ ನಡೆಸಲು ಮುಂದಾಗುವವರು
8197353390 (ಪ್ರತಿಭಾ ತಾಯಿ)
8123822096 (ಸಂಜು ಸುಬ್ಬಯ್ಯ) ಇವರನ್ನು ಸಂಪರ್ಕಿಸಬಹುದು.