UN NETWORKS


ಮಂಗಳೂರು: ಯುವವಾಹಿನಿ (ರಿ) ಮಂಗಳೂರು ಘಟಕ ಇದರ ಆಶ್ರಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಯುವಜನ ಜಾಗೃತಿ ಪ್ರಗತಿ ಉಪನ್ಯಾಸ, ಸಂವಾದ, ಸಮನ್ವಯ ಕಾರ್ಯಾಗಾರವು ದಿನಾಂಕ 23-12-2017 ರಂದು ಗೋಕರ್ಣನಾಥೇಶ್ವರ ಕಾಲೇಜಿನ ಸಭಾಭವನದಲ್ಲಿ ನಡೆಯಿತು.



ಕಾರ್ಯಾಗಾರವನ್ನು ಉಧ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ರೇಣುಕಾ ಕೆ ವಿದ್ಯಾರ್ಥಿಗಳು ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಇಂತಹ ಕಾರ್ಯಾಗಾರವು ಅವಶ್ಯಕವಾಗಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನುಡಿದರು. ಮುಖ್ಯ ಅಥಿತಿಗಳಾಗಿ ಶ್ರೀ ದತ್ತೇಶ್ ಪೂಜಾರಿ ಮಾಲಕರು ಶ್ರೀ ಭವಾನಿ ಸ್ಯಾನಿಟರಿ ಮಂಗಳಾದೇವಿ, ಶ್ರೀ ದೇವೇಂದ್ರ ಕೋಟ್ಯಾನ್ ಮಾಲಕರು ಪ್ರಿಯಾ ವುಡ್ ವಕ್ರ್ಸ್ ಕೋಡಿಕಲ್ ಕಾರ್ಯಾಗಾರಕ್ಕೆ ಶುಭ ಹಾರೈಸಿದರು. ಯುವ ವಾಹಿನಿ ಕೇಂದ್ರ ಸಮಿತಿ ಅದ್ಯಕ್ಷರಾದ ಶ್ರೀ ಯಶವಂತ್ ಪೂಜಾರಿ ಮಾತನಾಡಿ ಮಂಗಳೂರು ಘಟಕವು ಕಳೆದ ಮೂರು ವರ್ಷಗಳ ಹಿಂದೆ ಪ್ರಾರಂಭಿಸಿದ ಯುವಜನ ಜಾಗೃತಿ ಪ್ರಗತಿ ಕಾರ್ಯಾಗಾರವು ವಿದ್ಯಾರ್ಥಿಗಳಲ್ಲಿ ಚಿಂತನೆ, ವಿಮರ್ಶೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಒಂದು ಅವಕಾಶವಾಗಿದ್ದು ವಿದ್ಯಾರ್ಥಿಗಳು ಕಾರ್ಯಾಗಾರದ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಸಮಾರಂಭದ ಅದ್ಯಕ್ಷತೆಯನ್ನು ಯುವವಾಹಿನಿ ಮಂಗಳೂರು ಘಟಕದ ಅದ್ಯಕ್ಷರಾದ ಶ್ರೀ ರವೀಶ್ ಕುಮಾರ್ ರವರು ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಸಂಘಟನಾ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಚಾಲಕರಾದ ಜಗನ್ನಾಥ್ ಶಿರ್ಲಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಕಾರ್ಯದರ್ಶಿ ಪ್ರವೀಣ್ ಸಾಲ್ಯಾನ್ ಕಿರೋಡಿ ಧನ್ಯವಾದ ವಿತ್ತರು. ಮಾಜಿ ಅದ್ಯಕ್ಷರಾದ ಶ್ರೀ ಅಶೋಕ್ ಇಂಜಿನಿಯರ್ ನಿರೂಪಿಸಿದರು.
ನಂತರ ಕಾರ್ಯಾಗಾರದಲ್ಲಿ, ವರ್ತಮಾನದಲ್ಲಿ ನಾರಾಯಣ ಗುರುಗಳ ಸಂದೇಶ ಎಂಬ ವಿಷಯದ ಬಗ್ಗೆ ಆಳ್ವಾಸ್ ಕಾಲೇಜಿನ ಪ್ರಾದ್ಯಾಪಕರಾದ ಡಾ. ಯೋಗಿಶ್ ಕೈರೋಡಿ, ಹಾಗೂ ಸಾಮಾಜಿಕ ಜಾಲತಾಣಗಳು ಮತ್ತು ಯುವ ಜನತೆಯ ಮನಸ್ಥಿತಿ ವಿಷಯದ ಬಗ್ಗೆ ಶ್ರೀ ನವನೀತ್ ಡಿ ಹಿಂಗಾಣಿ ಉಪನ್ಯಾಸ ನೀಡಿದರು. ಸಮನ್ವಯಕಾರರಾಗಿ ಶ್ರೀ ಶೇಷಪ್ಪ ಅಮೀನ್, ಹಾಗೂ ಶ್ರೀ ರಾಕೇಶ್ ಕುಮಾರ್ ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ಸುಮಾರು 140 ವಿದ್ಯಾರ್ಥಿಗಳು ಭಾಗವಹಿಸಿದ್ದರು.