ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಧರ್ಮ ಜಾಗೃತಿ ವೇದಿಕೆ ಮುಡಿಪು ಇದರ ಆಶ್ರಯದಲ್ಲಿ ಎ.19ರಂದು ಭಾನುವಾರ ಮುಡಿಪುವಿನ ಮುಡಿಪಿನ್ನಾರ್ ದೈವಸ್ಥಾನದ ವಠಾರದಲ್ಲಿ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆಯು ಮಂಗಳವಾರ ಮುಡಿಪು ಭಾರತಿ ಶಾಲಾ ವಠಾರದಿಂದ ಮುಡಿಪ್ಪಿನ್ನಾರ್ ಕ್ಷೇತ್ರದವರಗೆ ನಡೆಯಿತು.
ಮುಡಿಪ್ಪಿನಾರ್ ದೈವಸ್ಥಾನದ ವಠಾರದಲ್ಲಿ ಸಾಮೂಹಿಕ ಕುಂಕುಮಾರ್ಚನೆ, ಗಣಪತಿ ಹವಣ, ಸತ್ಯನಾರಾಯಣ ಪೂಜೆ, ಶಿವ ಪೂಜೆ, ದುರ್ಗಾ ಪೂಜೆ ಹಾಗೂ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ, ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಕಾರ್ಯಕ್ರಮ ಭಾನುವಾರ ಬೆಳಿಗ್ಗೆಯಿಂದ ಆರಂಭಗೊಳ್ಳಲಿದೆ.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಿದ ಧರ್ಮಜಾಗೃತಿ ವೇದಿಕೆಯ ಗೌರವ ಸಲಹೆಗಾರ ಟಿ.ಜಿ.ರಾಜಾರಾಂ ಭಟ್, ಮುಡಿಪು ಪರಿಸರದ 16 ಗ್ರಾಮಗಲ ಜನರು ಸೇರಿಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪರಿಸರದ ಹಿಂದೂ ಮನೆಗಳಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸಿ, ಮಹಿಳೆಯರಲ್ಲಿ ಧಾರ್ಮಿ ಭಾವನೆಯನ್ನು ಬೆಳೆಸುವುದರೊಂದಿಗೆ ಸಮಾಜದ ಅಸ್ಪಶ್ಯತೆಯನ್ನು ಕಿತ್ತೊಗೆಯುವ ಸಂಕಲ್ಪದೊಂದಿಗೆ ಈ ಕಾರ್ಯಕ್ರಮವು ನಡೆಯಲಿದೆ. ಸುಮಾರು ಆರು ಸಾವಿರಕ್ಕೂ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್ ಮಾತನಾಡಿ,ಇಂದಿನ ಆಧುನಿಕತೆಯಲ್ಲಿ ಜನರಲ್ಲಿ ಸಂಸ್ಕಾರವನ್ನು ಬೆಳೆಸಿ ಉತ್ತಮ ಸಮಾಜವನ್ನು ನಾವು ಕಟ್ಟಬೇಕಾಗಿದೆ. ಇದರಂತೆ ಭಾನುವಾರ ನಡೆಯುವ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸರಳ ಸಾಮೂಹಿಕ ವಿವಾಹವು ಕೂಡಾ ನಡೆಯಲಿದ್ದು ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಧರ್ಮಜಾಗೃತಿ ವೇದಿಕೆಯ ಅಧ್ಯಕ್ಷ ನವೀನ್ ಕುಮಾರ್ ಪಾದಲ್ಪಾಡಿ, ಕಾರ್ಯದರ್ಶಿ ದಿನಕರ, ಸಂದೇಶ್ ಎಂ,. ಸತ್ಯಪಾಲ್ ರೈ, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಯಶವಂತ ದೇರಾಜೆ, ಹರೀಶ್ ಆಚಾರ್ಯ, ಚಂದ್ರಶೇಖರ ಗಟ್ಟಿ, ಮುರಳೀ ಮೋಹನ್ ಭಟ್, ಜಯಂತ್ ಪಾದಲ್ಪಾಡಿ, ಪ್ರೇಮಾನಂದ ರೈ, ರಾಮಚಂದ್ರ ಗಟ್ಟಿ, ನವೀನ್ ಶೆಟ್ಟಿ, ಪ್ರಶಾಂತ್, ರಮೇಶ್ ಬೆದ್ರೊಳಿಕೆ, ಪ್ರವೀಣ್ ಆಳ್ವ ಹಾಗೂ ಧರ್ಮಜಾಗೃತಿ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು.