ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮುಡಿಪು : ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರು ಗ್ರಾಮ ಪಂಚಾಯತ್‍ನ ನವಸಾಕ್ಷರರು ಉತ್ಪಾದಿಸಿದ ದಿನಬಳಕೆ ವಸ್ತುಗಳು ಹಾಗೂ ಬೆಳೆಸಿದ ಸಾವಯವ ತರಕಾರಿಗಳನ್ನು ನ್ಯಾಯಬೆಲೆಯಲ್ಲಿ ಮಾರಾಟ ಮಾಡುವ ಕೇಂದ್ರ ಅಕ್ಷರ ಅಂಗಡಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ರವೀಶ್ ಶೆಟ್ಟಿ ಉದ್ಘಾಟಿಸಿದರು.

ದ.ಕ.ಜಿಲ್ಲಾ ಪಂಚಾಯತ್, ಜಿಲ್ಲಾ ಸಾಕ್ಷರತಾ ಸಮಿತಿ ಹಾಗೂ ಜನಶಿಕ್ಷಣ ಟ್ರಸ್ಟ್‍ನ ಸಹಭಾಗಿತ್ವದಲ್ಲಿ ನಡೆದ ನವಸಾಕ್ಷರರ ವೃತ್ತಿ ತರಬೇತಿಯಲ್ಲಿ ಭಾಗವಹಿಸಿದ ನವಸಾಕ್ಷರರು ತಯಾರಿಸಿದ ದಿನಬಳಕೆ ವಸ್ತುಗಳಾದ ಹರ್ಬಲ್ ಫಿನಾಯಿಲ್, ಸಾಬೂನ್, ಸಾಬೂನು ಪೌಡರ್, ಸಾಬೂನು ದ್ರಾವಣ ಮತ್ತಿತರ ಗೃಹೋಪಯೊಗಿ ವಸ್ತುಗಳು ಹಾಗೂ ಪ್ರತಿ ಮನೆಗಳಲ್ಲಿ ಬೆಳೆಸಲಾಗುವ ಸಾವಯವ ತರಕಾರಿಗಳನ್ನು ಮಾರಾಟ ಮಾಡುವ ಕೇಂದ್ರ ಸುಸಜ್ಜಿತ ಎರಡು ಕೊಠಡಿಗಳ ಕಟ್ಟಡದಲ್ಲಿ ಮಾರಾಟ ನಡೆಯಲಿದ್ದು ಅದೇ ಸಂದರ್ಭ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಮನೆ, ಗ್ರಾಮ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಯಿತು.
ಹಸಿಕಸದ ನಿರ್ವಹಣೆಗೆ ಪೈಪ್ ಕಾಂಪೆÇೀಸ್ಟ್ ತಯಾರಿ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.