ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೋಟೆಕಾರು:ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಟೆಕಾರಿನ ಬೀರಿಯಲ್ಲಿರುವ ವಾಣಿಜ್ಯ ತಪಾಸಣಾ ಕೇಂದ್ರಕ್ಕೆ ಘನ ಸರಕು ಮತ್ತು ಅನಧಿಕೄತ ಮರಳು ಸಾಗಾಟ ಬೃಹತ್ ಟ್ರಕ್‍ಗಳು ಕರ್ನಾಟಕದ ತಪಾಸಣಾ ಕೇಂದ್ರವೊಂದರ ನಕಲಿ ಮೊಹರನ್ನು ಹಾಕಿ ರಾಜ್ಯ ಸರಕಾರಕ್ಕೆ ರಾಯಲ್ಟಿ ಹಾಗೂ ಅಪಾರ ತೆರಿಗೆ ವಂಚಿಸುವ ಮೂಲಕ ಅಪಾರ ನಷ್ಟವೆಸಗುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದ್ದು ಅದಕ್ಕೆ ಪೂರಕವಾಗಿ ಒರಿಸ್ಸಾದ ಪರವಾನಗಿ ಹೊಂದಿರುವ ಮಂಗಳೂರಿನಿಂದ ಮರಳು ಸಾಗಿಸುತ್ತಿದ್ದ ಲಾರಿಯನ್ನು ಅ„ಕಾರಿಗಳು ಹಿಡಿದ ಬಳಿಕ ಪ್ರಕರಣಕ್ಕೆ ಇನ್ನಷ್ಟು ಪುಷ್ಠಿ ಸಿಕ್ಕಿದೆ.

ನಂಬಲರ್ಹ ಮೂಲಗಳ ಪ್ರಕಾರ ಕಳೆದ ಜ. 7ರಂದು ಒರಿಸ್ಸಾದಿಂದ ಕೇರಳಕ್ಕೆ ಮರಳು ಸಾಗಾಟ ಮಾಡುತ್ತಿರುವುದಾಗಿ ದಾಖಲಾತಿ ಇರುವ ವಾಹನವೊಂದನ್ನು ಮಂಗಳೂರಿನ ವಾಣಿಜ್ಯ ಇಲಾಖೆ ತಪಾಸಣೆ ಆ„ಕಾರಿಗಳ ತಂಡ ಬೀರಿಯಲ್ಲಿ ತಪಾಸಣೆ ನಡೆಸಿದಾಗ ನಕಲಿ ಮೊಹರು ಸೃಷ್ಟಿಸಿ ಮರಳು ಸಾಗಾಟ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೋಟೆಕಾರು ವಾಣಿಜ್ಯ ಇಲಾಖೆ ತಪಾಸಣಾ„ಕಾರಿಗಳು ಕಣ್ಣು ಮುಚ್ಚಿ ಕುಳಿತರೇ ಅಥವಾ ಬೀರಿಯಲ್ಲಿ ಇರುವ ವಾಣಿಜ್ಯ ತೆರಿಗೆ ತಪಾಸಣಾ ಅ„ಕಾರಿಗಳು ಅಕ್ರಮ ಮರಳು ಸಾಗಾಟದಾರರ ಜೊತೆ ಶಾಮೀಲಾಗಿದ್ದಾರೆಯೇ ಎಂಬ ಆರೋಪ ಸಾರ್ವಜನಿಕರಿಂದ ಹಲವು ವರ್ಷಗಳಿಂದ ಕೇಳಿ ಬಂದಿದ್ದು ಜಾಣ ಕುರುಡು ಪ್ರದರ್ಶಿಸುವುದರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಗೊಮ್ಮೆ ಈಗೊಮ್ಮೆ ಒಂದು ಲಾರಿಯನ್ನು ಹಿಡಿಯುವ ಮೂಲಕ ಸಾಚಾತನ ತೋರಿಸುತ್ತಿದ್ದಾರೆ ಎಂಬ ಆರೋಪ ಇದೆ.
ಸಾರ್ವಜನಿಕರು ಅಭಿಪ್ರಾಯಪಡುವಂತೆ ಜ .7ರಂದು ಮಧ್ಯಾಹ್ನ 12.15ರ ಸಮಯದಲ್ಲಿ ಮಂಗಳೂರಿನ ವಾಣಿಜ್ಯ ತೆರಿಗೆ ತಪಾಸಣಾ ವಿಶೇಷ ತಂಡವೊಂದು ಒರಿಸ್ಸಾದಿಂದ ಕೇರಳಕ್ಕೆ ಮರಳು ಸಾಗಿಸುತ್ತಿದ್ದ ಹನ್ನೆರಡು ಚಕ್ರದ ಕೆಎ25ಡಿ9088 ನೋಂದಣಿಯ ಘನ ಟ್ರಕ್‍ನ್ನು ಕೋಟೆಕಾರು ವಾಣಿಜ್ಯ ತಪಾಸಣಾ ಕೇಂದ್ರದೆದುರು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ ಟ್ರಕ್ ಚಾಲಕ ಭರತ್ ಎಂಟರ್‍ಪ್ರೈಸಸ್ ಭರಮ್‍ಪುರ್, ಗಾಣಿಯಮ್, ಒರಿಸ್ಸಾ ಟ್ಯಾಕ್ಸ್ ಇನ್‍ಪೈಸ್ ಕ್ಯಾಶ್ ಕ್ರೆಡಿಟ್ ದಾಖಲಾತಿಯನ್ನು ಹಾಜರುಪಡಿಸಿದ್ದು ,ದಾಖಲಾತಿ ಜನವರಿ 5ರಂದು ವಾಹನ ಸಾಗಾಟ ಮಾಡಲು ಹಾದು ಹೋಗಿರುವಂತೆ ಮೊಹರು ಕಂಡು ಬಂದಿದ್ದು, ವಾಹನ ಚಲಾವಣೆಯ ಬಗ್ಗೆ ತನ್ನ ದಾಖಲು ಕರ್ನಾಟಕ ಗಡಿ ದಾಟಿದ ಬಗ್ಗೆ ಯಾವುದೇ ಪುರಾವೆ ಮೊಹರು ಪುರಾವೆ ಇರಲಿಲ್ಲ. ಪುಸ್ತಕದಲ್ಲಿ ದಾಖಲಾಗಿರುವ ಮೊಹರಿಗೆ ಮತ್ತು ಇಲಾಖಾ ಮೊಹರಿಗೆ ವ್ಯತ್ಯಾಸ ಕಂಡು ಬಂದಿದ್ದು ಇದರ ಹಿಂದೆ ಬೃಹತ್ ಜಾಲ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಚೆಕ್‍ಪೆÇೀಸ್ಟ್‍ನಲ್ಲಿ ಲಂಚ ಕೊಟ್ಟು ಕೇರಳಕ್ಕೆ ತಲುಪಿದರೆ ಕೇರಳ ಸರಕಾರಕ್ಕೆ ಕನಿಷ್ಠ 1800ರೂ. ತೆರಿಗೆ ಲಭಿಸುತ್ತದೆ. ಅದರಿಂದ ಕರ್ನಾಟಕ ಸರಕಾರಕ್ಕೆ ರಾಯಲ್ಟಿ ಸಿಗುತ್ತಿಲ್ಲ. ತೆರಿಗೆ ಹಣವೂ ಸಿಗದೆ ಸರಕಾರದ ಬೊಕ್ಕಸಕ್ಕೆ ದಿನಂಪ್ರತಿ ಕೋಟ್ಯಂತರ ರೂ. ನಷ್ಟವಾಗುತ್ತಿದ್ದರೂ ಅ„ಕಾರಿಗಳು ಸುಮ್ಮನಿರುವ ಹಿಂದೆ ಕಾಂಚಾಣ ಆಟವಾಡುತ್ತಿದೆ ಎಂಬ ಸಾರ್ವಜನಿಕರ ಅಭಿಪ್ರಾಯದಲ್ಲಿ ಸತ್ಯವಿದೆ.
ಆರೋಪಿ ಚಾಲಕನು ಕರ್ನಾಟಕ ರಾಜ್ಯದ ಕೋಟೆಕಾರು ತಪಾಸಣಾ ಕೇಂದ್ರದ ನಕಲಿ ಮೊಹರನ್ನು ತಯಾರಿಸಿ ದಾಖಲಾತಿಗೆ ಹಾಕಿ, ಅನ„ಕೃತವಾಗಿ ಮರಳನ್ನು ಕೇರಳಕ್ಕೆ ಸಾಗಿಸಿ ರಾಜ್ಯ ಸರಕಾರಕ್ಕೆ ಅಪಾರ ನಷ್ಟ ಮತ್ತು ಮೋಸವನ್ನು ಎಸಗಿರುವುದರ ವಿರುದ್ಧ ಕೋಟೆಕಾರು ವಾಣಿಜ್ಯ ತೆರಿಗೆ ತಪಾಸಣಾ ಅ„ಕಾರಿ ಗಂಗಾಧರ್ ರೈ ಉಳ್ಳಾಲ ಪೆÇಲೀಸ್ ಠಾಣೆಗೆ ನೀಡಿದ ದೂರಿನನ್ವಯ ಪೆÇಲೀಸರು ಟ್ರಕ್ ಮತ್ತು ಚಾಲಕನನ್ನು ದಸ್ತಗಿರಿ ನಡೆಸಿದ್ದಾರೆ.
ಕೇರಳದಲ್ಲಿ ಮರಳುಗಾರಿಕೆ ನಿಷೇಧದಿಂದ ಹೊರರಾಜ್ಯಗಳಿಂದ ಹನ್ನೆರಡು ಚಕ್ರಗಳ ವಾಹನಗಳಲ್ಲಿ ಅನ„ಕೃತ ಮರಳು ಸಾಗಾಟ ನಡೆಯುತ್ತಿದ್ದು, ಕೋಟೆಕಾರು ವಾಣಿಜ್ಯ ತೆರಿಗೆ ತಪಾಸಣಾ ಕೇಂದ್ರಕ್ಕೆ ದಿನನಿತ್ಯವೂ ಅನೇಕ ನಕಲಿ ವಾಣಿಜ್ಯ ದಾಖಲಾತಿಗಳನ್ನು ಹಾಜರುಪಡಿಸಿ ಮರಳು ಧಂಧೆಕೋರರ ಪ್ರಸಾದವನ್ನು ಪಡೆದ ಅ„ಕಾರಿಗಳು ತಪಾಸಣೆ ರಹಿತ ಸಂಚಾರಕ್ಕೆ ಅನುವು ಮಾಡಿ ಕೊಡುತ್ತಿದ್ದಾರೆ ಎಂಬ ಆರೋಪ ಜೋರಾಗಿ ಕೇಳಿ ಬರುತ್ತಿದೆ. ಅಷ್ಟಕ್ಕೂ ನಕಲಿ ಮೊಹರಿನ ಬಗ್ಗೆ ಕೋಟೆಕಾರು ವಾಣಿಜ್ಯ ಇಲಾಖೆ ತಪಾಸಣೆ ಅ„ಕಾರಿಗಳು ಜಾಗೃತರಾಗಬೇಕಾದ್ದು ಅನಿವಾರ್ಯ.