UN NETWORKS
ಉಳ್ಳಾಲ: ಮುಂದೆ ಬರಲಿರುವ ಕರ್ಣಾಟಕ ರಾಜ್ಯ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರಕಾರ ಬರವುದು ಖಚಿತ ಇದರೊಂದಿಗೆ ಮಂಗಳೂರು ಕ್ಷೇತ್ರದಲ್ಲಿಯೂ ಕಮಲ ಅರಳಿದೆ ಎಂದು ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದ ಸಂಜೀವ ಮಠಂದೂರು ಆಭಿಪ್ರಾಯಪಟ್ಟರು.
ಮಂಗಳೂರು ಕ್ಷೇತ್ರ ಕಛೇರಿಯಲ್ಲಿ ನಡೆದ ಚುನಾವಣಾ ಪ್ರಣಾಳಿಕೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದ, ಜಿಲ್ಲೆಯ, ಕ್ಷೇತ್ರದ ಜ್ವಲಂತ ಸಮಸ್ಯೆ, ಬೇಡಿಕೆಗಳನ್ನು ಸಾರ್ವಜನಿಕರ ಅಭಿಪ್ರಾಯ ಕ್ರೋಡಿಕರಿಸಿ ರಚಿಸಲಾಗುವುದು. ಈ ಬಗ್ಗೆ ಪ್ರತಿ ಕ್ಷೇತ್ರದಲ್ಲಿ ಮುಂದಿನ ತಿಂಗಳು ವೈದ್ಯರು, ಇಂಜೀನಿಯರ್, ಶಿಕ್ಷಕರು, ಕೃಷಿಕರು, ಕಾರ್ಮಿಕರು, ಧಾರ್ಮಿಕ, ಸಾಮಾಜಿಕ ಕ್ಷೇತ್ರದ, ಯುವ ಸಮುದಾಯದ ಪ್ರಮುಖರನ್ನು ಅಹ್ವಾನಿಸಿ ಸಭೆ ನಡೆಯಲಿದ್ದು. ಪ್ರಣಾಳಿಕೆಯಲ್ಲಿ ತಮ್ಮ ಬೇಡಿಕೆಗಳನ್ನು ಮಂಡಿಸಬಹುದು ಎಂದರು.
ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರ ಬಿ.ಜೆ.ಪಿ. ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ವಹಿಸಿದ್ದರು. ಜಿಲ್ಲಾ ಪ್ರಣಾಳಿಕೆ ಸಮಿತಿ ಸಂಚಾಲಕ ವಿಶ್ವೇಶ್ವರ ಭಟ್, ಸಹ ಸಂಚಾಲಕ ಶಂಕರ್ ಭಟ್, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ಕ್ಷೇತ್ರ ಪ್ರಭಾರಿ ನಿತಿನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ, ಜಿಲ್ಲಾ ಕಾರ್ಯದರ್ಶಿಗಳಾದ ಸತೀಶ್ ಕುಂಪಲ, ನಮಿತಾ ಶ್ಯಾಮ್ ಉಪಸ್ಥಿತರಿದ್ದರು. ಕ್ಷೇತ್ರ ಪ್ರ.ಕಾರ್ಯದರ್ಶಿಗಳಾದ ಮೋಹನ್ ರಾಜ್ ಸ್ವಾಗತಿಸಿದರು, ಮನೋಜ್ ಆಚಾರ್ಯ ವಂದಿಸಿದರು.