ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುಂಪಲ: ಭೌತಿಕವಾಗಿ, ಲೌಖಿಕವಾಗಿ ನಾವು ಬೆಳೆದು ಸಂಸ್ಕಾರವಂತರಾಗಬೇಕಾದರೆ ಭಜನೆ ಮುಖ್ಯ ಸಾಧನ. ಭಜನೆ ಮಾಡುವುದರಿಂದ ನಾವು ಭಕ್ತಿಯಿಂದ ಭಗವಂತನಲ್ಲಿ ಶರಣಾಗಿ ದೇವರ ದಾಸರಾಗಲು ಒಂದು ಅವಕಾಶ. ಸುಖೀ ಸಮಾಜದ ನಿರ್ಮಾಣದಲ್ಲಿ ಭಜನಾ ಮಂಡಲಿಗಳ ವಿಶೇಷ ಪಾತ್ರವಿದ್ದು ಇದು ನಮ್ಮ ಸಂಸ್ಕ್ರತಿಯನ್ನು ಎತ್ತಿ ತೋರಿಸುತ್ತದೆ ಎಂದು ದ.ಕ ಜಿಲ್ಲಾ ಪಂಚಾಯತ್ನ ಅಧ್ಯಕ್ಷೆ ಶ್ರೀಮತಿ ಆಶಾ ತಿಮ್ಮಪ್ಪ ಅಭಿಪ್ರಾಯಪಟ್ಟರು.
ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಪ್ರತಿಷ್ಟಾ ಮಹೋತ್ಸವ, ಏಕಾಹ ಭಜನೋತ್ಸವದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಘಾಟನೆಯನ್ನು ಉದ್ಯಮಿ ಪ್ರವೀಣ್ ಸುವರ್ಣ ಬಗಂಬಿಲ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಯೇನಪೋಯ ವಿಶ್ವವಿದ್ಯಾಲಯದ ಪ್ರಾಂಶುಪಾಲ ಡಾ. ಸಿ.ಎಚ್. ಮಂಜುನಾಥ್, ಬಜಾಜ್ ಅಲೈನ್ಸ್ನ ಪದ್ಮನಾಭ ಸುವರ್ಣ, ಕಿಟೆಲ್ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ವಿಠಲ್.ಎ, ತುಳು ಚಲಚನಚಿತ್ರ ನಟ ಸುರೇಂದ್ರ ಬಂಟ್ವಾಳ, ಮಂದಿರದ ಮಹಾಪೋಷಕ ಕೇಶವದಾಸ್ ಬಗಂಬಿಲ, ಮಹಿಳಾ ಅಧ್ಯಕ್ಷೆ ವಸಂತಿ ಜನಾರ್ಧನ್, ಉಪಸ್ಥಿತರಿದ್ದರು.
ಈ ಸಂದರ್ಬದಲ್ಲಿ ತಿರುಮಲೇಶ್ವರ ಭಟ್ (ವೈಧಿಕ), ಶಿಲ್ಪಶ್ರೀ (ಕ್ರೀಡೆ), ರಮೇಶ್ ಗಾಣಿಗ (ಹಾರ್ಮೋನಿಯಂ ವಾದಕ), ದಿವಾಕರ ಬಗಂಬಿಲ (ಧಾರ್ಮಿಕ ಕ್ಷೇತ್ರ), ವಿಶ್ವನಾಥ್ ಕುಲಾಲ್ (ಭಜನೆ) ಇವರುಗಳನ್ನು ಅಭಿನಂದಿಸಲಾಯಿತು.
ಮಂದಿರದ ಅಧ್ಯಕ,್ಷ, ಜಿ.ಪ ಉಪಾಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು, ಪ್ರವೀಣ್.ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿ, ನಾಗೇಶ್ ಎಮ್. ವಂದಿಸಿದರು.