ಉಳ್ಳಾಲ್ ನ್ಯೂಸ್ ನೆಟ್ ವರ್ಕ್


ಕುಂಪಲ: ಭಾರತದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಭಗತ್‍ಸಿಂಗರಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಕಾರ್ಯ ಮಾಡುತ್ತಿರುವ ಭಗತ್ ಸಿಂಗ್ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾಗಿದ್ದು, ಅವರ ಆದರ್ಶ, ಚಿಂತನೆಗಳನ್ನು ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಅಭಿಪ್ರಾಯಪಟ್ಟರು.



ಅವರು ಭಗತ್‍ಸಿಂಗ್ ಪ್ರತಿಷ್ಠಾನ ಕೇಂದ್ರ ಸಮಿತಿ ಉಳ್ಳಾಲ ಇದರ ಆಶ್ರಯದಲ್ಲಿ ಭಗತ್‍ಸಿಂಗರ ಜನ್ಮದಿನೋತ್ಸವದ ಅಂಗವಾಗಿ ಯುವ ಉದ್ಯಮಿ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ರಿಷಿ ಹಾರ್ಡ್‍ವೇರ್‍ನ ಮಾಲಕ ಸತೀಶ್ ಕರ್ಕೇರ ಅವರಿಗೆ ಭಗತ್‍ಸಿಂಗ್ ಉದ್ಯಮಶೀಲತಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಉದ್ಯಮದೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸತೀಶ್ ಕರ್ಕೇರ ಅವರನ್ನು ಭಗತ್‍ಸಿಂಗ್ ಪ್ರತಿಷ್ಠಾನ ಗುರುತಿಸಿ ಗೌರವಿಸುವುದು ಶ್ಲಾಘನೀಯ. ಕೇಂದ್ರ ಸರಕಾರದ ಮುದ್ರಾ ಯೋಜನೆಯನ್ನು ಭಗತ್‍ಸಿಂಗ್ ಪ್ರತಿಷ್ಠಾನದ ಪ್ರತಿಯೊಬ್ಬ ಸದಸ್ಯರು ಸದುಪಯೋಗಪಡಿಸಿಕೊಂಡು ಯಶಸ್ವಿ ಉದ್ಯಮಿಯಾಗಿ ಉದ್ಯೋಗ ಸೃಷ್ಟಿಸಿ ಎಂದರು.
ಸನ್ಮಾನ ಸ್ವೀಕರಿಸಿದ ಉದ್ಯಮಿ ಸತೀಶ್ ಕರ್ಕೇರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಗತ್‍ಸಿಂಗ್ ಪ್ರತಿಷ್ಠಾನದ ಅಧ್ಯಕ್ಷ ಪ್ರವೀಣ್ ಎಸ್. ಕುಂಪಲ, ಸಲಹೆಗಾರ ಆನಂದ ಕೆ. ಅಸೈಗೋಳಿ, ಮಾಜಿ ಅಧ್ಯಕ್ಷ ಹರೀಶ್ ಅಂಬ್ಲಮೊಗರು, ರಾಕೇಶ್ ಬೈಪಾಸ್, ನವೀನ್ ಪಾದಲ್ಪಾಡಿ, ನಾರಾಯಣ ಬಿ., ವಿಶ್ವನಾಥ ಶೆಟ್ಟಿ, ವೆಂಕಟಗಿರಿ ಕುಂಪಲ, ಕಿರಣ್ ಕೊಲ್ಯ, ನವೀನ್ ಬೈಪಾಸ್ ಮತ್ತಿತರರು ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕೃಷ್ಣ ಪೆÇನ್ನೆತ್ತೋಡು ವಂದಿಸಿದರು.