ಉಳ್ಳಾಲ: ಕಳ್ಳರಿಬ್ಬರು ಬೈಕ್ ಕಳವು ನಡೆಸಿರುವ ಘಟನೆ ಎರಡನೇ ಕೊಲ್ಯ ಗಂಗೂಸ್ ಕಿಚನ್ ಹೋಂ ಟು ಹೋಂ ಫುಡ್ ಡೆಲಿವರಿ ಸಂಸ್ಥೆ ಯಲ್ಲಿ ಮಂಗಳವಾರ ತಡರಾತ್ರಿ 1.48. ರ ವೇಳೆಗೆ ನಡೆದಿದೆ. ಕಳ್ಳರಿಬ್ಬರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಂಸ್ಥೆಗೆ ಸೇರಿದ ಹೀರೋ ಹೋಂಡ ಫ್ಯಾಷನ್ ಪ್ಲಸ್ ಬೈಕನ್ನು ಕಳವು ನಡೆಸಲಾಗಿದೆ. ಸಂಸ್ಥೆ ಹೊರಗಡೆ ನಿಲ್ಲಿಸಲಾದ ಬೈಕನ್ನು ಕಳ್ಳರಿಬ್ಬರು ಬಂದು ಕಳವು ನಡೆಸಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳರಿಬ್ಬರ ಚಹರೆ ಪತ್ತೆಯಾಗಿದ್ದು, ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರಿಗೆ ಕಳ್ಳರಿಬ್ಬರ ಸುಳಿವು ಲಭ್ಯವಾಗಿದ್ದು, ಶೀಘ್ರವೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
