ಉಳ್ಳಾಲ್ ನ್ಯೂಸ್ ನೆಟ್ ವರ್ಕ್




ಬೆಳ್ಮ: ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಭಂಗಕ್ಕೆ ಯತ್ನಿಸಿರುವ ಕುರಿತು ಕೊಣಾಜೆ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತನ ವಿರುದ್ಧ ದೂರು ದಾಖಲಾಗಿದೆ.



ದೇರಳಕಟ್ಟೆ ನಿತ್ಯಾನಂದನಗರದ ನಿವಾಸಿ ಗಣೇಶ್ ಎಂಬಾತನ ವಿರುದ್ಧ ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಾ ಕೃಷ್ಣಪ್ಪ ಪೂಜಾರಿ ಅವರು ದೂರು ನೀಡಿದ್ದಾರೆ.
ವಿಜಯ ಅವರ ನೆರೆಮನೆಯವರೇ ಆಗಿರುವ ಗಣೇಶ್ ನೀರಿನ ಕನೆಕ್ಷನ್ ವಿಚಾರಕ್ಕೆ ಸಂಬಂಧಿಸಿ ಬೆಳ್ಮ ಗ್ರಾ.ಪಂ ಗೆ ಗುರುವಾರದಂದು ಭೇಟಿ ನೀಡಿದ್ದರು. ಅಲ್ಲಿ ವಿಜಯಾ ಅವರ ಜತೆಗೆ ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ ಗಣೇಶ್ ಅವರು ಸೀರೆ ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆಂದು ದೂರಲಾಗಿದೆ. ಬೆಳ್ಮ ಗ್ರಾ.ಪಂ ಚುನಾವಣೆ ಸಂದರ್ಭ 5ನೇ ವಾರ್ಡಿನಲ್ಲಿ ವಿಜಯಾ ಅವರ ಎದುರಾಳಿ ಬಿಜೆಪಿ ಅಭ್ಯರ್ಥಿಯಾಗಿ ಗಣೇಶ್ ಚುನಾವಣೆಗೆ ಸ್ಪರ್ಧಿಸಿದ್ದರು.
ನಿನಗೆ ಕನೆಕ್ಷನ್ನೇ ಕೊಡುವುದಿಲ್ಲ ಅಂದಿದ್ದರು !
ಗ್ರಾಮ ಪಂಚಾಯಿತಿ ಚುನಾವಣಾ ಸಂದರ್ಭ ಬಿಜೆಪಿ ಅಭ್ಯರ್ಥಿಯಾಗಿದ್ದ ಗಣೇಶ್ ಅವರಿಗೆ ರಜನಿ ಶೆಟ್ಟಿ ಎಂಬವರು ಸೂಚಕರಾಗಿದ್ದರು. ಅವರ ಮನೆಗೆ ನೂತನ ನೀರಿನ ಕನೆಕ್ಷನ್ ಅರ್ಜಿ ಸಲ್ಲಿಸಿದ್ದರು. ಆದರೆ ಕನೆಕ್ಷನ್ ಕೊಡುವವರು ಮಲೇರಿಯಾ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅದು ವಿಳಂಬವಾಗಬಹುದು ಎಂದು ಬೆಳ್ಮ ಗ್ರಾ.ಪಂ ಅಧ್ಯಕ್ಷೆ ವಿeಯಾ ಅವರು ತಿಳಿಸಿದ್ದರು. ಆದರೆ ರಜನಿ ಅವರು ಗಣೇಶ್ ಅವರ ಮೊರೆ ಹೋಗಿದ್ದರು. ಅದಕ್ಕಾಗಿ ಗಣೇಶ್ ಅವರು ರಜನಿ ಜತೆಗೆ ಬೆಳ್ಮ ಪಂ. ಗೆ ನೀರಿನ ಕನೆಕ್ಷನ್ ಕೊಡಿಸಲು ಅಧ್ಯಕ್ಷರನ್ನು ಕೇಳಿಕೊಂಡಿದ್ದರು. ಆದರೆ ಅಧ್ಯಕ್ಷೆ ` ನೀನು ಯಾರು ನೀರಿನ ಕನೆಕ್ಷನ್ ಕೇಳಲು, ನಿನಗೆ ಕನೆಕ್ಷನ್ನೇ ಕೊಡುವುದಿಲ್ಲ ‘ ಎಂದು ಉಡಾಫೆಯಿಂದ ವರ್ತಿಸಿದ್ದಾರೆನ್ನಲಾಗಿದೆ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಗಣೇಶ್ ತಿಳಿಸಿದ್ದಾರೆ.