UN NETWORKS
ಮಂಗಳೂರು: ಮನುಷ್ಯನಿಗೆ ಎಷ್ಟೇ ಸಂಪತ್ತು ಇದ್ದರೂ, ನೆಮ್ಮದಿ ಎನ್ನುವ ಸಂಪತ್ತು ಇಲ್ಲದಿದ್ದರೆ ಬದುಕೇ ವ್ಯರ್ಥ, ಅಂತಹ ನೆಮ್ಮದಿ ಬದುಕಿನಲ್ಲಿ ಸಿಗಬೇಕಾದರೆ, ದೈವೀ ಅನುಗ್ರಹ ಬೇಕು, ದೈವಿ ಸಂಪತ್ತು ಸಿಗಬೇಕು, ಅದುವೇ ಶಾಶ್ವತ, ಇದಕ್ಕೆ ಭಜನೆ ದೊಡ್ಡ ಸಾಧನ. ಭಜನೆಯಲ್ಲಿ ತನ್ಮಯವಾದರೆ ನಮ್ಮನ್ನು ನಾವೇ ಮರೆಯುತ್ತೇವೆ. ಎಂದು ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನದ ಮಾತನಾಡಿದರು.
ಮಾಡೂರು ಸಾಯಿಧಾಮ ಬಡಾವಣೆಯಲ್ಲಿ, ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಅಖಂಡ ಭಜನಾ ಸಪ್ತಾಹದ ಸಮಾರೋಪಗೊಂಡು, ಭಜನೆಯ ಮೂಲಕ ಬದುಕಿಗೆ ಸಿಗುವ ನೆಮ್ಮದಿಯ ಬಗ್ಗೆ ಅವರು ಆಶೀರ್ವಚನದ ಮಾತಾನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಅನುವಂಶಿಕ ಅರ್ಚಕರು ವೇದಮೂರ್ತಿ ಬ್ರಹ್ಮಶ್ರೀ ಅನಂತ ಪದ್ಮನಾಭ ಅಸ್ರಣ್ಣ ಮಾತನಾಡಿ ಶಿರಡಿ ಸಾಯಿಬಾಬಾ ಗುರುಗಳು ಎಂದರೆ,ಕಷ್ಟದಲ್ಲಿರುವವರ ಕಷ್ಟವನ್ನು ಕಳೆಯುವ, ದುಖಃದಲ್ಲಿರುವವರ ದುಖಃವನ್ನು ಕಳೆಯುವ, ಇಂತಹ ಮಹಾತ್ಮರ ಸಾನಿಧ್ಯದಲ್ಲಿ ಅಖಂಡ ಭಜನಾ ಸಪ್ತಾಹ, ಪೂಜ್ಯ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಡೆದಿದೆ,ಇದರಿಂದ ಪರಿಸರಕ್ಕೆ ಮಾತ್ರ ಅಲ್ಲದೆ ಲೋಕಕ್ಕೆ ಸಹ ಒಳ್ಳೆಯದಾಗಲಿ ಎಂದು ಆಶೀರ್ವಚನದ ಮಾತುಗಳನಾಡಿದರು.
ನಮ್ಮ ವೇದ ಉಪನಿಷತ್ತುಗಳ ಸಾರವನ್ನು, ಕನಕ-ಪುರಂದರ ದಾಸರು ಸರಳ ಶಬ್ದಗಳಲ್ಲಿ ಭಜನೆಯ ಮೂಲಕ ಜನರಿಗೆ ಹೇಳಿದ್ದಾರೆ. ಕೇವಲ ಭಕ್ತಿ ಮಾತ್ರ ಅಲ್ಲದೆ, ನಮ್ಮ ಬದುಕಿನಲ್ಲಿ ಹೀಗೆ ಇರಬೇಕು ಎನ್ನುವುದನ್ನು ಭಜನೆಯ ಮೂಲಕ ಜನಸಾಮಾನ್ಯರಿಗೆ ಹೇಳಿದ್ದರೆ ಎಂದು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರು ವೇದಮೂರ್ತಿ ಬ್ರಹ್ಮಶ್ರೀ ಕಮಲದೇವಿ ಪ್ರಸಾದ ಅಸ್ರಣ್ಣ ಆಶೀರ್ವಚನದ ಮಾತನಲ್ಲಿ ಸಂದೇಶವನ್ನು ನೀಡಿದರು.
ಶಿರಡಿ ಸಾಯಿಬಾಬಾ ಮಂದಿರದ ಟ್ರಸ್ಟಿ ಶ್ರೀ ಕೆ.ಟಿ. ಸುವರ್ಣ ಅಧ್ಯಕ್ಷತೆಯನ್ನು ವಹಿಸಿದ್ದರು. ಯಕ್ಷಗಾನದ ಭಾಗವತಿಕೆಯಲ್ಲಿ ಹೆಸರು ಮಾಡಿದ ಗಾನ ಸುರಭಿ ರವಿಚಂದ್ರ ಕನ್ನಡಿ ಕಟ್ಟೆ ಮತ್ತು ಶಿಕ್ಷಣ ಕ್ರಾಂತಿಯ ಹರಿಕಾರರು, ಉದ್ಯಮಿ ಪ್ರಕಾಶ್ ಅಂಚನ್ ರವರಿಗೆ ಸನ್ಮಾನ ಮಾಡಿದರು.
ಮಂಗಳೂರಿನ ಉದ್ಯಮಿ, ಸಾಯಿ ಡೈಮಂಡ್ ನ ಶಾಂತಕುಮಾರ್, ಉದ್ಯಮಿ ಶ್ರೀಧರ್ ಶೆಟ್ಟಿ ಮುಟ್ಟ, ಕೋಟೆಕಾರ್ ಕೆಳಗಿನ ಗುತ್ತು ಕೃಷ್ಣ ಶೆಟ್ಟಿ, ಕೋಟೆಕಾರ್ ಪಟ್ಟಣ ಪಂಚಾಯತ ಅಧ್ಯಕ್ಷರು ಉದಯಕುಮಾರ್ ಶೆಟ್ಟಿ ಸೊಲ್ಲೆಂಜೆರ್, ಪರಿಸರದ ಸದಸ್ಯರು ಧೀರಜ್ ಕುಸಾಲ್ ನಗರ, ಉದ್ಯಮಿ ಉದಯಕುಮಾರ್ ಶೆಟ್ಟಿ ಕೊಂಡಾಣಗುತ್ತು, ಕಾಪಿಕಾಡ್ ಶ್ರೀ ಉಮಾಮಹೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರರು ಎ.ಜೆ. ಶೇಖರ್, ವಿದ್ವಾಂಸರು ಡಾ.ನಾರಾಯಣ ಪಟ್ಟತ್ತಿರಿಪ್ಪಾಡ್, ಮತ್ತು ಪ್ರಮುಖರು ಮಖ್ಯ ಅತಿಥಿಗಳಾಗಿ ಮಾತನಾಡಿದರು.
ಕು. ರಚನಾ ಶೇಖರ್, ಅನ್ವಿಕ ಪ್ರಾರ್ಥನೆ ಮಾಡಿದರು, ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಟ್ರಸ್ಟ್ ಕಾರ್ಯದರ್ಶಿ ಚಂದ್ರಹಾಸ್ ಪಂಡಿತ್ ಹೌಸ್ ಸ್ವಾಗತ ಮಾಡಿದರು, ವಿದ್ಯಾಧರ್ ಶೆಟ್ಟಿ ಪೊಸಕುರಲ್ ನಿರೂಪಿಸಿದರು, ಟ್ರಸ್ಟಿ ರವಿ ಕೊಂಡಾಣ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಶ್ರೀ ಶಿರಡಿ ಸಾಯಿಬಾಬಾ ಗುರುಗಳ ಸಾನಿಧ್ಯದಲ್ಲಿ ರಂಗಪೂಜೆ, ಮಹಾಪೂಜೆ ನಡೆಯಿತು.