ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಬೋಳಿಯಾರ್ : ಸಂಸದ ನಳಿನ್ ಕುಮಾರ್ ಕಟೀಲು ಅವರ ನೇತೃತ್ವದಲ್ಲಿ `ನಮ್ಮ ನಡೆ ಎತ್ತಿನಹೊಳೆಗೆ ‘ಕಾಲ್ನಡಿಗೆ ಪಾದಯಾತ್ರೆಗೆ ಬೆಂಬಲವಾಗಿ ಕುರ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಂದ ಸುಮಾರು 1000ಕ್ಕೂ ಹೆಚ್ಚು ಕಾರ್ಯರ್ತರು ಬೋಳಿಯಾರ್ ಜಂಕ್ಷನ್‍ನಿಂದ ಭಾನುವಾರ ಪಾದಯಾತ್ರೆ ಪ್ರಾರಂಬಿಸಿದರು.

ಕುರ್ನಾಡು ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ನೇತೃತ್ವದಲ್ಲಿ ನಡೆದ ಪಾದಯಾತ್ರೆಗೆ ಬಿಜೆಪಿ ಹಿರಿಯ ಮುಖಂಡ ಮುಡಿಪಿನ ಧರ್ಮಜಾಗೃತಿ ವೇದಿಕೆ ಅಧ್ಯಕ್ಷ ಟಿ. ಜಿ.ರಾಜಾರಾಮ ಭಟ್ ಚಾಲನೆ ನೀಡಿ ರಾಜ್ಯ ಸರಕಾರ ಮಲೆನಾಡಿಗೆ ನೀರನ್ನು ಹರಿಸುವ ಹುನ್ನಾರ ವಿರುದ್ಧ ಜಿಲ್ಲೆಯ ಜನತೆ ಎಚ್ಚೆತ್ತುಕೊಂಡಿದ್ದಾರೆ ಎಂಬುವುದನ್ನು ಸರಕಾರಕ್ಕೆ ತೋರಿಸಲು ಜಿಲ್ಲೆಯಾದ್ಯಂತ ಸಂಸದ ನಳಿನ್ ಕುಮಾರ್ ಕಟೀಲು ಅವರ ನೇತೃತ್ವದಲ್ಲಿ ಪ್ರತಿಭಟನೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದ್ದು ಆ ಮೂಲಕ ಯೋಜನೆಯ ಸಾಧಕ ಬಾಧಕಗಳನ್ನು ಜನರು ಸರಕಾರಕ್ಕೆ ಅರಿವು ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದÀಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ ಎತ್ತಿನಹೊಳೆ ಹೆಸರಿನಲ್ಲಿ ನೇತ್ರಾವತಿ ನದಿ ತಿರುವು ಯೋಜನೆ ವಿರೋ„ಸಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸಾವಿರಕ್ಕೂ ಅ„ಕ ಮಂದಿ ಭಾಗವಹಿಸುವ ಮೂಲಕ ಹೋರಾಟಕ್ಕೆ ಬಲ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕುರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಜಾ, ಉಪಾಧ್ಯಕ್ಷ ನಿತಿನ್ ಗಟ್ಟಿ ಕುರ್ನಾಡು, ಆಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್‍ನ ಮಾಜಿ ಸದಸ್ಯ ಕಿರಣ್ ಗಟ್ಟಿ ಕುರ್ನಾಡು, ಬಿಜೆಪಿ ಮುಖಂಡರಾದ ಜಗದೀಶ ಆಳ್ವ ಕುವೆತ್ತಬೈಲು, ಪ್ರೇಮಾನಂದ ರೈ ನೆತ್ತಿಲಕೋಡಿ, ರಾಮಚಂದ್ರ ಗಟ್ಟಿ, ಕೆ.ಎ.ಮುನೀರ್ ಬಾವ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಸೇಸಪ್ಪ ಟೈಲರ್, ಶಕ್ತಿ ಕೇಂದ್ರದ ಅಧ್ಯಕ್ಷ ನವೀನ್ ಪಾದಲ್ಪಾಡಿ, ಕೈರಂಗಳ ಸೇವಾ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಮಹೇಶ್ ಚೌಟ, ನವೀನ್ ಶೆಟ್ಟಿ ತೌಡುಗೋಳಿ, ಸುಜಿತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪಾದಯಾತ್ರೆಯು ಬೋಳಿಯಾರ್‍ನಿಂದ ಚೇಳೂರು, ಸಜಿಪ ಮಾರ್ಗವಾಗಿ ಪಾಣೆಮಂಗಳೂರು ಮೂಲಕ ಸಾಗಿ ಮೆಲ್ಕಾರ್‍ನಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರ ಪಾದಯಾತ್ರೆಯೊಂದಿಗೆ ಎತ್ತಿನಹೊಳೆ ಪ್ರದೇಶದತ್ತ ಸಾಗಿತು.