ಉಳ್ಳಾಲ: ಉಳ್ಳಾಲದ ಭಗವತಿ ಕ್ಷೇತ್ರಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ತೊಕ್ಕೊಟ್ಟು ಕೃಷ್ಣನಗರದ ನಿವಾಸಿ ಚಂದ್ರಕಾಂತ್ ಎಂಬವರಿಗೆ ಉಳ್ಳಾಲಬೈಲಿನ ಪ್ರೀತೇಶ್ ಎಂಬಾತ ಪಂಚ್ನಿಂದ ಹಲ್ಲೆ ನಡೆಸಿರುವ ಘಟನೆ ಇತ್ತೀಚೆಗೆ ನಡೆದಿದೆ.
ಚಂದ್ರಕಾಂತ್ ಅವರು ಕ್ಷೇತ್ರದಿಂದ ವಾಪಸ್ಸಾಗುವಾಗ ತಡೆದ ಪ್ರೀತೇಶ್ ಕೈಗೆ ಸುತ್ತಿದ ಕಬ್ಬಿಣದ ಸಂಕೋಲೆಯಿಂದ ಕೆನ್ನೆ ಮತ್ತು ತಲೆಯ ಭಾಗಕ್ಕೆ ಬಲವಾಗಿಹೊಡೆದಿದ್ದಾನೆ. ಆನಂತರ ಚೂರಿ ತೋರಿಸಿ ಜೀವಬೆದರಿಕೆಯೊಡ್ಡಿದ್ದಾನೆ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಪ್ರೀತೇಶ್ ಮತ್ತು ಕವಿತ್ ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾಗ, ಅವರ ಬೈಕನ್ನು ಚಂದ್ರಕಾಂತ್ ಅವರಿಗೆ ಸೇರಿದ ಓಮ್ನಿ ಕಾರಿನಲ್ಲಿ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿತ್ತು. ಇದರಿಂದ ಚಂದ್ರಕಾಂತ್ ಅವರೇ ಪೊಲೀಸರಿಗೆ ದೂರು ನೀಡಿ ತಮ್ಮನ್ನು ಬಂಧಿಸಿದ್ದು ಎಂದು ಪೂರ್ವದ್ವೇಷವನ್ನು ತೀರಿಸಿಕೊಂಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.