UN NETWORKS
ಉಳ್ಳಾಲ:ದೇರಳಕಟ್ಟೆ ನಿಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ವತಿಯಿಂದ ಕ್ಷೇಮ ಆಡಿಟೋರಿಯಂನಲ್ಲಿ “ಕ್ಷೇಮ ಸ್ಟೆಮ್ಕಾನ್ -2017″ರಾಷ್ಟ್ರೀಯ ಕಾರ್ಯಾಗಾರವನ್ನು ನಿಟ್ಟೆ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಶುಕ್ರವಾರದಂದು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಇಂದು ಸಂಶೋಧನಾ ಕ್ಷೇತ್ರವು ವಿಸ್ತಾರವಾಗಿ ಬೆಳೆಯುತ್ತಿದ್ದು, ಈ ನಿಟ್ಟಿನಲ್ಲಿ ಯುವ ಸಮುದಾಯ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು. ಸರಕಾರವು ಕೂಡಾ ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದರೆ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದರು.
ನಿಟ್ಟೆ ವಿವಿಯು ಕುಲಪತಿಗಳಾದ ಡಾ.ಸತೀಶ್ ಕುಮಾರ್ ಭಂಡಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಕಾರ್ಯಕ್ರಮದಲ್ಲಿ ನಿಟ್ಟೆಯ ಸಹಕುಲಾಧಿಪತಿ ಡಾ.ಶಾಂತಾರಾಮ ಶೆಟ್ಟಿ, ಯು.ಕೆ.ಯ ಕ್ಯಾಂಟ್‍ಬರ್ರಿ ಕ್ರಿಸ್ಟ್‍ಚರ್ಚ್ ವಿ.ವಿಯ ಮುಖ್ಯಸ್ಥರಾದ ಪ್ರೊ.ಡಾ.ಎ.ಅನಂತರಾಮ್ ಶೆಟ್ಟಿ, ಸೌತ್ ಕೊರಿಯಾದ ಸೆಲ್ ಥೆರಫಿ ಸೆಂಟರ್‍ನ ದಿ ಕೆಥೋಲಿಕ್ ವಿ.ವಿಯ ನಿರ್ದೇಶಕ ಸಿಯೊಕ್ ಜಂಗ್ ಕಿಮ್, ಕ್ಷೇಮದ ಡೀನ್ ಪ್ರೊ..ಪಿ.ಎಸ್.ಪ್ರಕಾಶ್, ವೈಸ್ ಡೀನ್ ಡಾ.ಕೆ.ಜಯಪ್ರಕಾಶ್ ಶೆಟ್ಟಿ, ಡಾ.ಅಲ್ಕ ಕುಲಕರ್ಣಿ, ಡಾ.ಲಾರೆನ್ಸ್ ಮ್ಯಾಥ್ಯೂಸ್, ಡಾ.ಜಿ.ಕೆ.ಸ್ವಾಮಿ, ಡಾ.ಶೇಷಾದ್ರಿ ಮೊದಲಾದವರು ಉಪಸ್ಥಿತರಿದ್ದರು.
ಡಾ.ಪಿ.ಎಸ್. ಪ್ರಕಾಶ್ ಸ್ವಾಗತಿಸಿ, ಡಾ.ಲಾರೆನ್ಸ್ ಅವರು ವಂದಿಸಿದರು.