ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಧುನಿಕ ಜೀವನ ಶೈಲಿಯಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಒಂದು ವಾರದ ಕಾಲ ನಡೆಯಿತು.
ಸಾಮಾನ್ಯ ವೈದ್ಯಕೀಯ ವಿಭಾಗದ ಆಶ್ರಯದಲ್ಲಿ ನಡೆದ ಈ ಶಿಬಿರದಲ್ಲಿ ಸುಮಾರು 500 ಮಂದಿ ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಂಡರು.
ಶಿಬಿರದ ಸಂದರ್ಭದಲ್ಲಿ ವೈದ್ಯರ ಸಂದರ್ಶನ, ಸಿಬಿಸಿ, ರಕ್ತದಲ್ಲಿ ಸಕ್ಕರೆ, ಎಫ್ಬಿಎಸ್, ಎಚ್ಬಿ, ಇಎಸ್ಆರ್, ರಕ್ತದ ಗುಂಪು, ಸೀರಂ ಕ್ರಿಯೇಟಿನ್, ಮೂತ್ರದ ಪರೀಕ್ಷೆ, ಇಸಿಜಿ, ಬಿಎಮ್ಐ, ಪಥ್ಯಾಹಾರದ ಸಲಹೆಗಳನ್ನು ಉಚಿತವಾಗಿ ಹಾಗೂ 50% ರಿಯಾಯಿತಿಯಲ್ಲಿ ಕೊಲೆಸ್ಟ್ರಾಲ್ ತಪಾಸಣೆ, ಎಲ್ಎಫ್ಟಿ(ಲಿವರ್), ಎಚ್ಬಿಎ1ಸಿ, ಟಿಎಫ್ಟಿ(ಥೈರೋಯ್ಡ್),ಎಕ್ಸ್ರೇ(ಎದೆ), ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಇಕೋ, ಟಿಎಂಟಿ(ಹೃದಯ) ಮಾಡಲಾಯಿತು.