ಉಳ್ಳಾಲ: ಮಾದಕ ವ್ಯಸನಿಯೊಬ್ಬ ಮೊಬೈಲ್ ಅಂಗಡಿಯಲ್ಲಿ ದಾಂಧಲೆ ನಡೆಸಿದ್ದು, ಘಟನೆಯ ಕುರಿತು ಪೆÇಲೀಸ್ ಕಂಪ್ಲೇಂಟ್ ನೀಡಿದ ಮೊಬೈಲ್ ಅಂಗಡಿಗೆ ತೆರಳಿ ತಲವಾರು ಬೀಸಿ ಅಂಗಡಿಯ ಗಾಜುಗಳನ್ನು ಪುಡಿಗೈದ ಘಟನೆ ತೊಕ್ಕೊಟ್ಟು ಸ್ಮಾರ್ಟ್ ಸಿಟಿಯಲ್ಲಿ ನಡೆದಿದೆ.




ಉಳ್ಳಾಲ ಸುಭಾಷ್ ನಗರ ನಿವಾಸಿ ಸವಾದ್ ಎಂಬಾತನೇ ದಾಂಧಲೆ ನಡೆಸಿದ ಆರೋಪಿಯಾಗಿದ್ದು, ನೌಫಾಲ್ ಅವರಿಗೆ ಸೇರಿದ ಅಂಗಡಿಗೆ ತೆರಳಿ ದಾಂಧಲೆ ನಡೆಸಿದ್ದ. ನೌಫಾಲ್ ಅದೇ ಕಟ್ಟಡದಲ್ಲಿರುವ ಕ್ರೀಡಾ ಸಾಮಾಗ್ರಿ ಮಾರಾಟದ ಮಳಿಗೆಯಲ್ಲಿ ಪಾಲುದಾರನಾಗಿದ್ದು, ಗಾಂಜಾ ವ್ಯಸನ ಮಾಡುತ್ತಿದ್ದ ಈತ ಈ ಹಿಂದೆಯೂ ದಾಂಧಲೆ ನಡೆಸಿದ್ದು, ನೌಫಾಲ್ ಪೆÇಲೀಸ್ ದೂರು ನೀಡಿದ ಹಿನ್ನೆಲೆಯಲ್ಲಿ ಪೆÇಲೀಸರ ಎದುರೆ ಅಂಗಡಿಗೆ ಕಲ್ಲು ಬಿಸಾಕಿದ್ದು ಬಳಿಕ ಅಂಗಡಿಯ ಎದುರು ಬಂದು ಚೂರಿಯಲ್ಲಿ ಗ್ಲಾಸ್ ಗೆ ಹಾನಿಗೊಳಿಸಿದ್ದಾನೆ. ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

