ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತಲಪಾಡಿ: ಜಿಲ್ಲಾ ಪಂಚಾಯಿತಿಯ ವಿಕಲಚೇತನರ ನಿಧಿಯಿಂದ ಮಂಜೂರಾದ ತಲಪಾಡಿ ಗ್ರಾಮ ಪಂಚಾಯಿತಿನ ರಾಮನಗರ 1 ನೇ ಅಡ್ಡರಸ್ತೆಯ ಕಾಂಕ್ರೀಟಿಕರಣಕ್ಕೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ ಶಿಲಾನ್ಯಾಸಗೈದರು.

ರಾಮನಗರ ಪ್ರದೇಶದಲ್ಲಿರುವ ಅಂಗವಿಕಲೆ ವಿಜಯಭಾರತಿ ಎಂಬವರಿಗೆ ರಸ್ತೆಯಿಲ್ಲದೆ ಹೋಗಿ ಬರಲು ಅಸಾಧ್ಯವಾಗುತಿತ್ತು. ಈ ಬಗ್ಗೆ ಅವರು ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ಜಿ.ಪಂ ಅಧ್ಯಕ್ಷರ ಜತೆಗೆ ಸಮಾಲೋಚಿಸಿ ರೂ. 3 ಲಕ್ಷ ಅನುದಾನವನ್ನು ಮಂಜೂರು ಮಾಡಲಾಗಿದೆ. ತಲಪಾಡಿ ಪಂ. ವ್ಯಾಪ್ತಿಗಳಲ್ಲಿ ಬೇಧಭಾವವಿಲ್ಲದೆ ಸಂಸದರು, ಜಿಲ್ಲಾ ಪಂಚಾಯಿತಿ, ಪಂಚಾಯಿತಿ ಕಾರ್ಯ ನಿರ್ವಹಿಸುತ್ತಿದೆ . ಮುಂದೆ ತಲಪಾಡಿಯಿಂದ ದೇವಿಪುರಕ್ಕೆ ಹೋಗುವ ರಸ್ತೆಯ ಕಾಂಕ್ರೀಟಿಕರಣಕ್ಕೆ 3.25 ಕೋಟಿ ಹಣ ಮಂಜೂರಾಗಿದೆ. ಶೀಘ್ರದಲ್ಲಿ ಅದರ ಕಾಮಗಾರಿಯನ್ನು ಪೂರ್ತಿಗೊಳಿಸಿ ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ಈ ಸಂದರ್ಭ ತಲಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಮಾಜಿ ಸದಸ್ಯ ವಿನಯ ನಾಯ್ಕ್, ತಲಪಾಡಿ ಪಂ. ಉಪಾಧ್ಯಕ್ಷೆ ಜಯಲಕ್ಷ್ಮೀ .ಟಿ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಕಾರ್ಯದರ್ಶಿ ರಾಜೇಶ್, ಪಂ.ಸದಸ್ಯರಾದ ಶೋಭಾ ಶೆಟ್ಟಿ, ಗೀತಾ, ಭಾಗ್ಯಲಕ್ಷ್ಮೀ ರೈ, ಗೋಪಾಲಕೃಷ್ಣ ಮೇಲಾಂಟ ಹಾಗೂ ಸ್ಥಳೀಯರಾದ ರಾಮಚಂದ್ರ ಶೆಟ್ಟಿ ದೊಡ್ಡಮನೆ, ಜಯರಾಜ್, ಮನೋಜ್ ಶೆಟ್ಟಿ, ನಳಿನಿ ಶೆಟ್ಟಿ, ವಿಜಯಭಾರತಿ ಮೊದಲಾದವರು ಉಪಸ್ಥಿತರಿದ್ದರು.