UN NETWORKS
ಉಳ್ಳಾಲ : ಶ್ರೀ ವಿದ್ಯಾಂಜನೇಯ ವ್ಯಾಯಾಮ ಶಾಲೆ ಉಳ್ಳಾಲ ಇದರ ಆಶ್ರಯದಲ್ಲಿ ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್‍ನ ಸಹಕಾರದೊಂದಿಗೆ ಎಸ್‍ವಿವಿಎಸ್ ಟ್ರೋಫಿ-2017 ಕಬಡ್ಡಿ ಪಂದ್ಯಾಟ ಡಿಸೆಂಬರ್ 24ರಂದು ಉಳ್ಳಾಲದಲ್ಲಿ ಜರಗಲಿದೆ.
ದಕ್ಷಿಣ ಕನ್ನಡಜಿಲ್ಲೆ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ಪುರುಷರ 70ಕೆ.ಜಿ.ವಿಭಾಗದ ಪ್ರೊ ಮಾದರಿಯ ಮ್ಯಾಚ್ ಇದಾಗಿದ್ದು ಡಿ.24 ಆದಿತ್ಯವಾರ ಮಧ್ಯಾಹ್ನ 2ರಿಂದ ಉಳ್ಳಾಲ ನಗರ ಸಭಾ ಮೈದಾನದಲ್ಲಿ ಪಂದ್ಯ ಆರಂಭಗೊಳ್ಳಲಿದೆ. ಮೊದಲು ಬಂದ 20ತಂಡಗಳಿಗೆ ಮಾತ್ರ ಅವಕಾಶವಿದೆ ಎಂದು ಪ್ರಕಟನೆ ತಿಳಿಸಿದೆ