ಉಳ್ಳಾಲ : ನಾಗರಿಕ ಸಮಾಜದಲ್ಲಿ ವಿಜ್ಞಾನ ಮನುಕುಲಕ್ಕೆ ಒಳಿತನ್ನು ಉಂಟುಮಾಡಲು ಹೆಚ್ಚು ಉಪಯುಕ್ತವಾಗಬೇಕು. ಕೆಲವೊಂದು ಪ್ರಶ್ನೆಗಳಿಗೆ ವಿಜ್ಞಾನದಲ್ಲಿ ಉತ್ತರವಿಲ್ಲ. ವಿಜ್ಞಾನ ವಾಸ್ತವಕ್ಕೆ ಹತ್ತಿರವಿದ್ದು ಜ್ಞಾನ ಹೆಚ್ಚಿಸವ ಕೆಲಸ ಮಾಡಿದರೆ ತತ್ವ ಯೋಚಿಸುವಂತೆ ಮಾಡುತ್ತದೆ ಎಂದು ಸುಪ್ರೀಂ ಕೋಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಎಂ.ಎನ್.ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.
ನಿಟ್ಟೆ ವಿಶ್ವವಿದ್ಯಾಲಯ ಮತ್ತು ಪೀಪಲ್ಸ್ ಕೌನ್ಸಿಲ್ ಆಫ್ ಎಜುಕೇಶನ್ ಜಂಟಿ ಆಶ್ರಯದಲ್ಲಿ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಪ್ರಥಮ ಅಖಿಲ ಭಾರತ ಪೀಪಲ್ಸ್ ವೈದ್ಯಕೀಯ ಹಾಗೂ ಆರೋಗ್ಯ ವಿಜ್ಞಾನ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ, ಬಳಿಕ ಸಮ್ಮೇಳನ ಪ್ರಯುಕ್ತ ಹೊರತಂದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಿಜ್ಞಾನ ಬಹಳಷ್ಟು ಮುಂದುವರಿದಿದ್ದು ಅದು ಸಾಧನೆ ಎಂದು ಬಿಂಬಿತವಾಗುವುದಾದರೆ ಅಣು ಶಕ್ತಿಗೆ ಮುಗ್ಧ ಪ್ರಪಂಚವನ್ನು ನಾಶಪಡಿಸಲು ಸೆಕೆಂಡ್ಗಳಷ್ಟೆ ಸಾಕು. ಮನುಷ್ಯ ಬಹಳಷ್ಟು ಬುದ್ಧಿವಂತನೂ ಹೌದು, ಅಷ್ಟೇ ಪ್ರಮಾಣದಲ್ಲಿ ತಪ್ಪನ್ನು ಎಸಗುವ ಮನೋಸ್ಥಿತಿಯನ್ನು ಒಳಗೊಂಡಿದ್ದಾನೆ. ನಾಗರಿಕ ಸಮಾಜದಲ್ಲಿ ವಿಜ್ಞಾನ ಮನುಕುಲಕ್ಕೆ ಒಳಿತನ್ನು ಉಂಟುಮಾಡಲು ಹೆಚ್ಚು ಉಪಯೋಗವಾಗಬೇಕು. ತತ್ವಶಾಸ್ತ್ರ ಹೇಳಿದಷ್ಟು ಸುಲಭದಲ್ಲಿ ಆಚರಣೆಗೆ ತರಲು ಅನುಸರಿಸಲು ಸಾಧ್ಯವಿಲ್ಲ. ಮಾನವೀಯತೆ ಎಲ್ಲಕ್ಕಿಂತೂ ಮಿಗಿಲಾದದ್ದು. ಎಲ್ಲ ಕ್ಷೇತ್ರದಲ್ಲೂ ಸತ್ಯ ಹಾಗೂ ಗುಣನಡತೆ ಮುಖ್ಯವಾಗುತ್ತದೆ ಎಂದರು.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಉನ್ನತ ಶಿಕ್ಷಣ ವಿವಿಗಳಿಂದ ಬೃಹತ್ ಕೈಗಾರಿಕೆಯತ್ತ ಸಾಗುತ್ತಿದ್ದು ಇದೊಂದು ಮಹತ್ವದ ಬೆಳವಣಿಗೆ. ಹಾರ್ವಡರ್್ ವಿವಿಯಲ್ಲಿ ವಿದ್ಯಾಥರ್ಿಗಳು ಕೈಗಾರಿಕೆಗಳತ್ತ ಹೆಚ್ಚಿನ ಆಕರ್ಷಣೆಗೊಳಗಾಗುತ್ತಿದ್ದಾರೆ. ಅಂತಹ ಸೆಳೆತ ಹಾಗೂ ಆಯ್ಕೆಯ ಹಿಂದೆ ಆಥರ್ಿಕ ಸಬಲತೆಯೂ ಕಾರಣವಾಗಿದೆ ಎಂದು ನುಡಿದರು.
ದಿಕ್ಸೂಚಿ ಭಾಷಣ ಮಾಡಿದ ಕೋರ್ ಗ್ರೂಪ್ನ ಅಧ್ಯಕ್ಷ ಪ್ರೊ. ತಪಸ್ ಭಟ್ಟಾಚಾರ್ಯ ಅವರು ವೈದ್ಯರನ್ನು ಸೃಷ್ಟಿಸಿದರೆ ಸಾಲದು. ಗುಣಮಟ್ಟ ಕಾಪಾಡುವುದು ಮುಖ್ಯ. `ಭಾರತ ಪ್ರಪಂಚದಲ್ಲಿಯೇ ಅತಿ ಹೆಚ್ಚು ವೈದ್ಯಕೀಯ ಪದವೀಧರರನ್ನು ಹೊರತರುತ್ತಿರುವುದು ಶ್ರೇಷ್ಠ ಕಾರ್ಯವಾಗಿದ್ದರೂ ಪದವೀಧರರು ತಮ್ಮ ಮುಂದಿನ ಶಿಕ್ಷಣ ಮುಂದುವರಿಸುವುದು, ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದು ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಸೇವೆ ಸಲ್ಲಿಸಲು ಉತ್ಸುಕರಾಗಬೇಕು ಎಂದು ನುಡಿದರು. ನಿಟ್ಟೆ ವಿವಿಯ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಪೀಪಲ್ಸ್ ಕೌನ್ಸಿಲ್ ಆಫ್ ಎಜುಕೇಶನ್ನ ಅಧ್ಯಕ್ಷ ಪ್ರೊ.ಪಿ.ಕೆ.ಯಾದವ್, ಮಣಿಪಾಲ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಡಾ.ಬಿ.ಎಂ.ಹೆಗ್ಡೆ ಅವರು ಜಸ್ಟಿಸ್ ಎಂ.ಎನ್.ವೆಂಕಟಾಚಾಲಯ್ಯ ಅವರನ್ನು ಪರಿಚಯಿಸಿದರು. ಕಾರ್ಯಕ್ರಮ ಸಂಘಟಕ ಪ್ರೊ. ಎನ್.ಪಿ.ಚುಬೇ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ.ಎಸ್.ರಮಾನಂದ ಶೆಟ್ಟಿ ಸ್ವಾಗತಿಸಿದರು. ರೋಹನ್ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು. ನಿಟ್ಟೆ ವಿಶ್ವವಿದ್ಯಾಲಯದ ಪ್ರೊ. ರಾಜಶೇಖರ್ ಎಂ, ಉಪಸ್ಥಿತರಿದ್ದರು.