UN NETWORKS

ಗುಜರಾತ್: 2ನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಪ್ರಮಾಣ ವಚನವನ್ನು ಸ್ವೀಕರಿಸಿದರು. ಉಪಮುಖ್ಯಮಂತ್ರಿಯಾಗಿ ನಿತಿನ್ ಪಟೀಲ್ ಪ್ರಮಾಣ ವಚನ ಸ್ವೀಕರಿಸಿದರು.

ಗುಜರಾತ್ ರಾಜ್ಯಪಾಲ ಓಂ. ಪ್ರಕಾಶ್ ಕೊಹ್ಲಿ ಪ್ರತಿಜ್ಞಾನಿಧಿಯನ್ನು ಭೋದನೆ ಮಾಡಿದರು. ವಿಶೇಷವಾಗಿ ಪ್ರಮಾಣ ವಚನ ಕಾರ್ಯಕ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹಾಗೂ 18 ರಾಜ್ಯಗಳ ಮುಖ್ಯಮಂತ್ರಿಗಳು ವಿಶೇಷ ಕ್ಷಣಕ್ಕೆ ಸಾಕ್ಷಿಯಾದರು.
ಇನ್ನು ಬಿಜೆಪಿಯ ಹಿರಿಯ ಎಲ್ ಕೆ. ಕೆ. ಅಡ್ವಾನಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗುಜರಾತ್ ನಲ್ಲಿ 6ನೇ ಭಾರಿಗೆ ಬಿಜೆಪಿ ಸರ್ಕಾರ ರಚನೆಯಾಗಿ ಅಧಿಕಾರಕ್ಕೆ ಬಂದಿದೆ.