UN NETWORKS


ಪೆರ್ಮನ್ನೂರು: ಶಾಂತಿದೂತ ಯೇಸು ಕ್ರಿಸ್ತ ಜಯಂತಿಯ ಕ್ರಿಸ್ ಮಸ್ ಹಬ್ಬದ ಶುಭಾಶಯವನ್ನು ಪೆರ್ಮನ್ನೂರು ಇಗರ್ಜಿಯ ಧರ್ಮಗುರುಗಳಾದ ಜೆ.ಬಿ.ಸಲ್ದಾಣ ಮತ್ತು ಕಿರಿಯ ಗುರುಗಳನ್ನು ಜಿಲ್ಲಾ ಪಂ.ಮಾಜಿ ಉಪಾಧ್ಯಕ್ಷರಾದ ಸತೀಶ್ ಕುಂಪಲ ನೇತೃತ್ವದಲ್ಲಿ ಬೇಟಿ ಮಾಡಿ ಶುಭ ಕೋರಲಾಯಿತು.



ಈ ಸಂಧರ್ಭದಲ್ಲಿ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟು, ಮಾಜಿ ಕೌನ್ಸಿಲರ್ ದಯಾನಂದ ತೊಕ್ಕೊಟು, ಬಿ.ಜೆ.ಪಿ. ಅಲ್ಪಸಂಖ್ಯಾತ ಮೋರ್ಛದ ಅಧ್ಯಕ್ಷರಾದ ಅಶ್ರಫ್ ಹರೇಕಳ, ಬಿ.ಜೆ.ಪಿ.ಪ್ರಮುಖರಾದ ರಾಜೇಶ್ ಪಿಲಾರ್ ಉಪಸ್ಥಿತರಿದ್ದರು.