ಕೋಟೆಕಾರು: ಸ್ತ್ರೀ ಶಕ್ತಿ ಗುಂಪುಗಳಿಗೆ ಸರಕಾರದ ಮೂಲಕ ವಿವಿಧ ಹಂತದಲ್ಲಿ ಸುತ್ತುನಿಧಿ ಪ್ರೋತ್ಸಾಹ ಧನ ಒದಗಿಸಿಕೊಡುತ್ತಿದ್ದೇವೆ. ಮಹಿಳೆಯರು ಆರ್ಥಿಕ ಸಬಲತೆ ಹೊಂದಿ ಒತ್ತಡ ರಹಿತ ಜೀವನ ನಡೆಸಲುವಂತೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.
ಅವರು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕೋಟೆಕಾರು ವಲಯ ಮತ್ತು ಸ್ತ್ರೀ ಶಕ್ತಿ ಗುಂಪುಗಳ ಮಹಿಳಾ ಸಂಗಮ ಕಾರ್ಯಕ್ರಮವನ್ನು ಕೋಟೆಕಾರು ಬೀರಿ ಮ್ಯಾರೇಜ್ ಮಹಲ್ನಲ್ಲಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೆಕಾರು ಗ್ರಾ.ಪಂ. ಉಪಾಧ್ಯಕ್ಷೆ ಶಶಿಕಲಾ ವಹಿಸಿದ್ದರು.
ಮಧ್ಯಾಹ್ನ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೆಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಕನೀರುತೋಟ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ, ತಾ. ಪಂ. ಸದಸ್ಯೆ ಕ್ಲೇರಾ ಕುವೆಲ್ಲೋ, ದೇವಕಿ, ಸುರೇಖಾ ಚಂದ್ರಹಾಸ್, ಗ್ರಾ. ಪಂ. ಅಧ್ಯಕ್ಷ ರಮಣಿ ತಲಪಾಡಿ, ಮಾಜಿ ಅಧ್ಯಕ್ಷ ಜಯರಾಜ್ ಸಾಲ್ಯಾನ್, ಕೋಟೆಕಾರು ಗ್ರಾ. ಪಂ. ಉಪಾಧ್ಯಕ್ಷೆ ಶಶಿಕಲಾ, ಸದಸ್ಯೆ ಗೀತಾ ಜಿ. ಪ್ರಭು, ಕೃಷ್ಣ ಗಟ್ಟಿ, ಪುಷ್ಪಲತಾ ಡಿ. ಶೆಟ್ಟಿ, ಶಶಿಕಲಾ ಗಟ್ಟಿ, ವಾರಿಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಉಪ ನಿರ್ದೇಶಕಿ ಗಟ್ರ್ರೂಡ್ ವೇಗಸ್, ಮಂಗಲೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲಾ ಉಪಸ್ಥಿತರಿದ್ದರು.
ವಲಯ ಮಟ್ಟದ ಉತ್ತಮ ಸ್ತ್ರೀ ಶಕ್ತಿ ಗುಂಪು ಪುರಸ್ಕಾರ – ದೇವಿಸ್ತ್ರೀ ಶಕ್ತಿ ಗುಂಪು ದೇವಿಪುರ ತಲಪಾಡಿ, ಉತ್ತಮ ಸಮಾಜ ಸೇವಕಿ (ದಾದಿ) ಪುರಸ್ಕಾರ – ಕಲ್ಯಾಣಿ ಕಿನ್ಯ , ವಲಯ ಮಟ್ಟದ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ – ಪುಷ್ಪಕುಮಾರಿ ಬಗಂಬಿಲ, ವಲಯ ಮಟ್ಟದ ಉತ್ತಮ ಅಂಗನವಾಡಿ ಸಹಾಯಕಿ ಪುರಸ್ಕಾರ ರಜನಿ ಉಚ್ಚಿಲಗುಡ್ಡೆ ಅಂಗನವಾಡಿ ಕೇಂದ್ರ ಇವರಿಗೆ ನೀಡಲಾಯಿತು.
ನಂತರ ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ಬಾಂಡ್ ಹಾಗೂ 31 ಸ್ತ್ರೀ ಶಕ್ತಿ ಗುಂಪುಗಳಿಗೆ ಸುತ್ತುನಿಧಿ ಚೆಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳೆ ಮತ್ತು ಕಾನೂನು ಬಗ್ಗೆ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚಂಗಪ್ಪ ಇವರಿಂದ ಮಾಹಿತಿ ಮತ್ತು ಮಹಿಳೆಯರ ಸ್ಥಾನಮಾನಗಳ ಬಗ್ಗೆ ಮಂಗಳೂರು ವಿಶ್ವ ವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಉಷಾರಾಣಿ ಮಾಹಿತಿ ನೀಡಿದರು.
ಕೋಟೆಕಾರು ವಲಯ ಮೇಲ್ವಿಚಾರಕಿ ಶಾರದಾ ಕೆ. ಸ್ವಾಗತಿಸಿದರು. ಬೋಳಿಯಾರ್ ವಲಯ ಮೇಲ್ವಿಚಾರಕ ಭಾರತಿ ಪಟಗಾರ್ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಪುಷ್ಪ ಬಗಂಬಿಲ ವಂದಿಸಿದರು.