ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಲ್ಯ: ಮನೆ ಹಾಗೂ ಅಂಗಡಿಗಳನ್ನೇ ಗುರಿಯಾಗಿಸಿ ಕೃತ್ಯ ಎಸಗುತ್ತಿದ್ದ ಕಳ್ಳರು , ಈ ಬಾರಿ ತಮ್ಮ ದಿಕ್ಕು ಬದಲಾಯಿಸಿ ಮಕ್ಕಳಿಗೆ ಅಕ್ಷರ ಕಲಿಸುವ ಶಾಲೆಗೆ ಕನ್ನ ಹಾಕುವ ಮೂಲಕ ರೂ.72,000 ನಗದು ಹಾಗೂ ಪಠ್ಯ ಸಾಮಗ್ರಿಗಳನ್ನು ಕಳವುಗೈದಿರುವ ಘಟನೆ ಕೊಲ್ಯ ಸಂತ ಜೋಸೆಫರ ಜಾಯ್ಲ್ಯಾಂಡ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಬುಧವಾರ ಬೆಳಕಿಗೆ ಬಂದಿದೆ.
ಉಳ್ಳಾಲ ವ್ಯಾಪ್ತಿಯಲ್ಲಿ ಮನೆ ಹಾಗೂ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು ಶಾಲೆಯನ್ನೂ ಬಿಡದೆ ಕೃತ್ಯ ಮುಂದುವರಿಸಿದ್ದಾರೆ. ಮಂಗಳವಾರ ತಡರಾತ್ರಿ ವೇಳೆ ಕೃತ್ಯ ಎಸಗಿರುವ ಕಳ್ಳರು ಶಾಲೆಯ ಗೇಟಿನ ಹಾಗೂ ಮುಖ್ಯ ಕಚೇರಿಯ ಬೀಗ ಮುರಿದು ಒಳನುಗ್ಗಿದ್ದಾರೆ. ಅಲ್ಲಿ ಕಪಾಟು ಹಾಗೂ ಡ್ರಾವರಿನಲ್ಲಿರಿಸಿದ್ದ ರೂ. .72,000 ನಗದು ಹಾಗೂ ಪಠ್ಯ ಪುಸ್ತಕ ಮತ್ತು ಸಾಮಗ್ರಿಗಳನ್ನು ಕಳವುಗೈದಿದ್ದಾರೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.