

ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಕೆ.ಸಿ.ರೋಡ್ ನಿವಾಸಿ ಶನಿವಾರ ರಾತ್ರಿ ನಾಪತ್ತೆಯಾಗಿದ್ದ ಹನ್ನೆರಡರ ಹರೆಯದ ಬಾಲಕ ಆಕೀಫ್ ಮೃತದೇಹ ಭಾನುವಾರ ಕೆ.ಸಿರೋಡ್ ಬಳಿ ಮೈದಾನದ ಬಳಿ ತೆಂಗಿನಗರಿಯ ಅಡಿಯಲ್ಲಿ ಪತ್ತೆಯಾಗಿದ್ದು, ಪಬ್‍ಜಿ ಮಾದರಿಯ ಫ್ರೀ ಫಯರ್ ಮೊಬೈಲ್ ಗೇಮ್ ವಿಚಾರದಲ್ಲಿ ಆತನ ಸ್ನೇಹಿತನೇ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.


ಕೆ.ಸಿ.ರೋಡ್ ನಿವಾಸಿ ದ್ವಿತೀಯ ಪಿಯುಸಿ ಕಲಿಯುತ್ತಿರುವ ಉತ್ತರ ಪ್ರದೇಶ ಮೂಲದ ದೀಪಕ್(17) ಆಕೀಫ್‍ನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಆರೋಪಿಯಾಗಿದ್ದು, ಫ್ರೀ ಫಯರ್ ಮೊಬೈಲ್ ಗೇಮ್ ವಿಚಾರದಲ್ಲಿ ನಡೆದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯವಾಗಿದ್ದು, ದೀಪಕ್‍ನನ್ನು ಉಳ್ಳಾಲ ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಯ ವಿವರ : ಕೆ.ಸಿ ರೋಡ್ ನಿವಾಸಿ ಹನೀಫ್ ಅವರ ಐವರು ಮಕ್ಕಳಲ್ಲಿ ಮಹಮ್ಮದ್ ಆಕೀಫ್ ನಾಲಕನೆಯವನಾಗಿದ್ದು ಮೂವರು ಸಹೋದರಿ, ಓರ್ವ ಸಹೋದರ ಮತ್ತು ತಂದೆ ತಾಯಿಯನ್ನು ಅಗಲಿದ್ದಾನೆ. ಕೆ.ಸಿ. ರೋಡ್‍ನ ಫಲಾಹ್ ಶಿಕ್ಷಣ ಸಂಸ್ಥೆಯಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿರುವ ಈತನಿಗೆ ಕೊರೊನ ಹಿನ್ನಲೆಯಲ್ಲಿ ಆನ್‍ಲೈನ್ ತರಗತಿಗೆಂದು ಹೆತ್ತವರು ಮೊಬೈಲ್ ತೆಗೆದುಕೊಟ್ಟಿದ್ದರು. ಕಳೆದ ಒಂದು ವರ್ಷದಿಂದ ಆಕೀಫ್ ಮೊಬೈಲ್‍ನಲ್ಲಿ ಕಲಿಕೆಯೊಂದಿಗೆ ಮೊಬೈಲ್ ಗೇಮ್‍ನಲ್ಲಿ ಪರಿಣತನಾಗಿದ್ದ. ಈ ಆಟವನ್ನು ಆನ್‍ಲೈನ್ ಮೂಲಕ ಹಲವಾರು ಸ್ನೇಹಿತರೊಂದಿಗೆ ಆಟವಾಡುತ್ತಿದ್ದು, ಈತ ಪ್ರತೀ ಬಾರಿ ಗೆಲ್ಲುತ್ತಿದ್ದ. ಗೇಮ್‍ನಿಂದ ಸ್ನೇಹಿತನಾದ ದೀಪಕ್ : ಮೂಲತ: ಉತ್ತರ ಪ್ರದೇಶದವನಾದ ದೀಪಕ್‍ನ ತಂದೆ ತಾಯಿ ಕಳೆದ 30 ವರ್ಷಗಳಿಂದ ಕೆ.ಸಿ.ರೋಡ್‍ನಲ್ಲಿ ವಾಸಿಸುತ್ತಿದ್ದು ಈತನ ತಂದೆ ಲಾರಿ ಚಾಲಕನಾಗಿದ್ದು ತಾಯಿ ಟೈಲರಿಂಗ್ ಸೇರಿದಂತೆÀ ಬೇರೆ ಬೇರೆ ಕೆಲಸ ಮಾಡುತ್ತಿದ್ದರು.



ದೀಪಕ್ ಸೋಮೇಶ್ವರದ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ಶಿಕ್ಷಣ ಪಡೆಯುತ್ತಿದ್ದು ಮೂರು ತಿಂಗಳ ಹಿಂದೆ ಆಕೀಫ್‍ಗೆ ಮೊಬೈಲ್ ಅಂಗಡಿಯಲ್ಲಿ ಪರಿಚಯವಾಗಿ ಆನ್‍ಲೈನ್‍ನಲ್ಲಿ ಆಟವಾಡುತ್ತಿದ್ದ. ಎದುರುಬದುರಾಗಿ ಆಟಕ್ಕೆ ಕರೆದಿದ್ದ ದೀಪಕ್ : ಆನ್‍ಲೈನ್‍ನಲ್ಲಿ ದೀಪಕ್‍ನೊಂದಿಗೆ ಯಾವಾಗಲೂ ಗೆಲ್ಲುತ್ತಿದ್ದ ಆಕೀಫ್‍ನನ್ನು ಎದುರುಬದುರಾಗಿ ಆಟಕ್ಕೆ ದೀಪಕ್ ಕರೆದಿದ್ದ. ಶನಿವಾರ ನಮಾಝ್ ಮಗಿಸಿ ಎಂಟು ಗಂಟೆಯ ಸುಮಾರಿಗೆ ಹೊರಗೆ ಹೋಗುತ್ತೇನೆ ಎಂದು ದೀಪಕ್ ಮನೆ ಬಳಿ ತೆರಳಿದ್ದ ಆಕೀಫ್ ನೇರ ಸ್ಪರ್ಧೆಯಲ್ಲಿ ದೀಪಕ್‍ನೆದುರು ಸೋತಿದ್ದ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದರೂ ದೀಪಕ್ ಮನೆಗೆ ತೆರಳಿದ್ದು, ಈ ಸಂದರ್ಭದಲ್ಲಿ ಆಕೀಫ್ ದೀಪಕ್‍ನನ್ನು ವಾಪಾಸ್ ಕರೆದು ಆಟವಾಡುವಂತೆ ಒತ್ತಾಯಿಸಿದ್ದಾನೆ. ದೀಪಕ್ ಆಟವಾಡಲು ಒಲವು ತೋರಿಸದೆ ಇದ್ದಾಗ ಆಕೀಫ್ ಆತನ ಮೇಲೆ ಕಲ್ಲು ಎಸೆದಿದ್ದ. ದೀಪಕ್ ಪ್ರತಿಯಾಗಿ ದೊಡ್ಡ ಕಲ್ಲು ತೆಗೆದು ಆಕೀಫ್‍ನ ಮೇಲೆ ತೂರಿದ್ದು ಅದು ಆತನ ಹಣೆ ಮತ್ತು ಕೆನ್ನೆಗೆ ಬಲವಾದ ಏಟು ನೀಡಿದ್ದು ಸ್ಥಳದಲ್ಲಿಯೇ ಕುಸಿದು ಬಿದಿದ್ದ. ದೀಪಕ್ ಘಟನೆಯ ಬಳಿಕ ಮನೆಗೆ ತೆರಳಿದ್ದರೂ 10 ನಿಮಿಷದ ಬಳಿಕ ವಾಪಾಸ್ ಘಟನಾ ಸ್ಥಳಕ್ಕೆ ಬಂದಾಗ ಆಕೀಫ್ ಕುಸಿದು ಬಿದ್ದ ಸ್ಥಿತಿಯಲ್ಲೇ ಇದ್ದುದ್ದನ್ನು ಕಂಡು ಆತನ ದೇಹವಮನ್ನು ಮೈದಾನದ ಬಳಿ ಎಳೆದು ಬಳಿಕ ತೆಂಗಿನ ಗರಿ ಮುಚ್ಚಿ ತೆರಳಿದ್ದ. ಆಕೀಫ್ ಹೊರಗಡೆ ಹೋದವ ಇನ್ನೂ ಬರಲಿಲ್ಲ ಎಂದು ಮನೆಯವರು ಹುಡುಕಾಡಿದ್ದು, ಸುತ್ತಮುತ್ತಲು ಎಲ್ಲಾ ಕಡೆ ಹುಡುಕಾಡಿದ್ದು ಆತನ ಸ್ನೇಹಿತರ ಮನೆಗೆ ತೆರಳಿ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ದೀಪಕ್‍ನೊಂದಿಗೆ ಮೊಬೈಲ್ ಗೇಮ್, ಆಡುವ ವಿಚಾರ ತಿಳಿದಿದ್ದ ಮನೆಯವರು ಅವನಲ್ಲೂ ವಿಚಾರಿಸಿದ್ದಾರೆ ಬಳಿಕ ತಡರಾತ್ರಿ ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿ ಆತನ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ದೀಪಕ್‍ನನ್ನು ವಿಚಾರಿಸಿದರೆ ಯಾವುದೇ ಮಾಹಿತಿ ನೀಡಿರಲಿಲ್ಲ. ಬೆಳಗ್ಗೆ ಹುಡುಕಾಟ ನಡೆಸಿದಾಗ ದೀಪಕ್ ಮನೆಯ ಅಣತಿ ದೂರದ ಮೈದಾನದಲ್ಲಿ ಆಕೀಫ್ ಕೊಲೆಯಾಗಿರುವುದು ಪತ್ತೆಯಾಗಿದೆ. ಬೆಳಗ್ಗೆ ಮೃತದೇಹ ಪತ್ತೆಯಾಗುತ್ತಿದ್ದಂತೆ ದೀಪಕ್ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಕಮಿಷನರ್ ಶಶಿಕುಮಾರ್, ಡಿಸಿಪಿಗಳಾದ ಹರಿರಾಂ, ವಿನಯ ಗಾಂವ್ಕರ್, ಎಸಿಪಿಗಳಾದ ನಟರಾಜ್, ರಂಜಿತ್ ಬಂಡಾರು, ನ್ಸ್‍ಪೆಕ್ಟರ್‍ಗಳಾದ ಸಂದೀಪ್, ಪ್ರಕಾಶ್ ಸ್ಥಳದಲ್ಲಿ ಆಗಮಿಸಿದ್ದು. ಈ ಸಂದರ್ಭದಲ್ಲಿ ಪೆÇಲೀಸ್ ಕಮೀಷನರ್ ಶಶಿಕುಮಾರ್ ಮಾತನಾಡಿ ಪೆÇೀಷಕರು ಮಕ್ಕಳ ಕೈಗೆ ಮೊಬೈಲ್ ನೀಡಿದಾಗ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರು. ಪಬ್ ಜೀ ಆಟ ಬ್ಯಾನ್ ಆದರೂ ಬೇರೆ ವರ್ಷನ್ ಗಳನ್ನು ಮಕ್ಕಳು ಉಪಯೋಗಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು.