UN NETWORKS
ಬೆಳ್ತಂಗಡಿ:ಸಮಾಜದ ಸಾಂತ್ವನ ಕೇಂದ್ರ ಮಲ್ಜಹ್ ಉಜಿರೆ ಇಲ್ಲಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್(KCF)ಕಾರ್ಯಕರ್ತರು 23/12/017 ನಿನ್ನೆ ಬೇಟಿ ಕೊಟ್ಟರು.
ಬೆಳ್ತಂಗಡಿ ತಾಲೂಕಿನ ಸುತ್ತಮುತ್ತಲಿನ ಪ್ರದೇಶ ಹಾಗೂ ಕರ್ನಾಟಕ,ಕೇರಳದ ಅಸಹಾಯಕ,ಬಡ,ನಿರ್ಗತಿಕ,ರೋಗಿಗಳ ಸಮೀಕ್ಷೆ ನಡೆಸಿ ಮಲ್ಜಹ್ ಸಂಸ್ಥೆಯ ರೂವಾರಿ ಸೆಯ್ಯಿದ್ ಅಲವಿ ಜಲಾಲುದ್ದೀನ್ ತಙಳ್ ಮದನಿ ಅಲ್ ಹಾದಿ ರವರು ಹಣ,ವಸತಿಗಳನ್ನು ನೀಡಿ ಪೋಷಿಸುತ್ತಾ ಬಂದಿರುತ್ತಾರೆ.
ಈ ಕುರಿತು ಸಮಲೋಚನೆ ಸಭೆ ಕೆಸಿಎಫ್ ನಾಯಕರುಗಳಿಂದ ನಡೆಯಿತು.ಮಲ್ಜಹ್ ಸಂಸ್ಥೆ ಈ ವರೆಗೆ ಮಾಡಿದ ಅದ್ವಿತೀಯ ಸೇವೆಯ ಸಮಗ್ರ ಮಾಹಿತಿಯನ್ನು ಕಲೆ ಹಾಕಿ ಕೃತಿ ರಚಿಸುವುದಾಗಿ ಯುವ ಬರಹಗಾರ ಸಿ.ಐ.ಇಸ್ಹಾಕ್ ಫಜೀರ್ ತಿಳಿಸಿದರು. ಇದನ್ನು ಸ್ವಲಾತ್ ಕಾರ್ಯಕ್ರಮದಲ್ಲಿ ಸೈಯ್ಯಿದ್ ಜಲಾಲುದ್ದೀನ್ ತಙಳ್ ಉಜಿರೆ ಸಭಾ ಕಾರ್ಯಕ್ರಮದಲ್ಲಿ ಘೋಷಿಸಿದರು.
ಮಲ್ಜಹ್ ಸಂಸ್ಥೆಯ ಮ್ಯಾನೇಜರ್ ಮೆಹಬೂಬ್ ಸಖಾಫಿ ಕಿನ್ಯ ಅವರೊಂದಿಗೆ ಕೆಸಿಎಫ್ ನಾಯಕರುಗಳದ ಸಲೀಂ ಕನ್ಯಾಡಿ,ಮೆಹಮೂದ್ ಉಳ್ಳಾಲ್,ಸಿ.ಐ.ಇಸ್ಹಾಕ್ ಫಜೀರ್, ಇಬ್ರಾಹಿಂ ಕಲ್ಕಟ್ಟ ಮತ್ತು ಅಶ್ರಫ್ ಸರಳಿಕಟ್ಟೆ ಕೆಲ ನಿಮಿಷಗಳ ಕಾಲ ಚರ್ಚೆ ನಡೆಸಿದರು.