ಉಳ್ಳಾಲ್ ನ್ಯೂಸ್ ಡೆಸ್ಕ್
ಕುಂಪಲ: ಕುಂಪಲ ಚೇತನ ನಗರ ನಿವಾಸಿ ಪ್ರಿನ್ಸ್ ಜೋನ್ ಜೇಕಬ್ (೧೪) ಎಂಬ ಬಾಲಕ ಕಾಣೆಯಾದ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತ ಕುಂಪಲ ತನ್ನ ಮನೆಯಿಂದ ಪುತ್ತೂರಿಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಚೀಟಿ ಬರೆದು ಹೋದವನು ರಾತ್ರಿಯಾದರೂ ವಾಪಾಸು ಮನೆಗೆ ಬಾರದೇ ಇದ್ದು ನಾಪತ್ತೆಯಾಗಿದ್ದಾನೆ.
ಈತನು ಮನೆಯಿಂದ ತೆರಳುವಾಗ ಲ್ಯಾಪ್ಟಾಪ್ ನ್ನು ತನ್ನ ಜೊತೆ ತೆಗೆದುಕೊಂಡು ಹೋಗಿದ್ದಾನೆ ಎಂದು ಸಂಬಂಧಿ ರೆನ್ನಿ ಫಿಲಿಪ್ ಜೋನ್ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.