ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ : ಬಂಟ್ವಾಳ ತಾಲೂಕು ಮೂಳೂರು ಬಾವಲಿಗುರಿಯಲ್ಲಿ ನೀರು ತುಂಬಿದ್ದ ಕೆಂಪು ಕಲ್ಲು ಕ್ವಾರಿಗೆ ಬಿದ್ದು ಇಬ್ಬರು ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಗಂಭೀರ ಸ್ಥಿತಿಯಲ್ಲಿ ಕಣಚೂರು ಆಸ್ಪತ್ರೆಗೆ ದಾಖಲಾದರೆ, ಇಬ್ಬರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಮೃತಪಟ್ಟವರನ್ನು ಬೋಳಿಯಾರ್ ಗ್ರಾಮದ ಮಜಿ ನಿವಾಸಿಗಳಾದ ಜಯಪ್ರಕಾಶ್(22), ದೀಕ್ಷಿತ್( 19) ಎಂಬವರಾಗಿದ್ದು, ಘಟನೆಯಿಂದ ಸಂತೋಷ್ ಮತ್ತು ಅಕ್ಷಯ್ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಕಾಲಿಗೆ ಗಾಯಗೊಂಡಿರುವ ಸುದೇಶ್ ಮತ್ತು ಶೇಖರ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಬೋಳಿಯಾರ್ ಮಜಿ ನಿವಾಸಿಗಳಾದ ಶೇಖರ್, ಜಯಪ್ರಕಾಶ್, ದೀಕ್ಷಿತ್, ಸುದೇಶ್, ಅಕ್ಷಯ್, ಸಂತೋಷ್ ಮೂರು ಬೈಕ್‍ಗಳಲ್ಲಿ ಇರಾ ಸಮೀಪದ (ಈಗ ಕೆಐಡಿಬಿಯ ಕೈಗಾರಿಕಾ ವಲಯಕ್ಕೆ ಸೇರಿರುವ)ಮೂಳೂರು (ಚೇಳೂರು ಗ್ರಾಮದ ಬಾವಲಿಗುರಿ) ಪ್ರದೇಶಕ್ಕೆ ಬೆಳಗ್ಗೆ 9 ಗಂಟೆಗೆ ಆಗಮಿಸಿದ್ದಾರೆ. ಸುಮಾರು 12 ಗಂಟೆಯ ಹೊತ್ತಿಗೆ ಮೂಳೂರಿನ ವಿಶಾಲವಾದ ಪ್ರದೇಶವಿರುವ ಬಾವಲಿಗುರಿ ಬಳಿ ತಲುಪಿದ್ದು, ಬೈಕ್‍ಗಳನ್ನು ನಿಲ್ಲಿಸಿದ ಈ ತಂಡದಲ್ಲಿದ್ದ ಜಯ ಪ್ರಕಾಶ್ ಕಲ್ಲು ಕ್ವಾರಿಯ ಕಡೆ ಓಡಿ ಹೋಗಿದ್ದು ಈ ಸಂದರ್ಭದಲ್ಲಿ ಕಲ್ಲು ಕ್ವಾರಿಗೆ ಬಿದ್ದನೆನ್ನಲಾಗಿದೆ. ಅವನ ಹಿಂದೆಯೇ ಓಡಿ ಹೋಗಿದ್ದ ದೀಕ್ಷಿತ್ ಜಯಪ್ರಕಾಶ್‍ನನ್ನು ಉಳಿಸಲು ಕಲ್ಲು ಕ್ವಾರಿಗೆ ಹಾರಿದ್ದು, ಇವರಿಬ್ಬರನ್ನು ಉಳಿಸಲು ಶೇಖರ್ ಕ್ವಾರಿಗೆ ಹಾರಿದ್ದ ಆದರೆ ಜಯ ಪ್ರಕಾಶ್ ಮತ್ತು ದೀಕ್ಷಿತ್ ಅದಾಗಲೇ ಸುಮಾರು 15ರಿಂದ 20 ಅಡಿ ಆಳವಿರುವ ಕಲ್ಲು ಕೋರೆಯ ಕೆಸರಿನಲ್ಲಿ ಹೂತು ಹೋಗಿದ್ದು, ಮುಳುಗೇಳುತ್ತಿದ್ದ ಶೇಖರ್‍ನನ್ನು ಸುದೇಶ್ ಮತ್ತು ಸಂತೋಷ್ ದಡಕ್ಕೆ ಎಳೆದು ಹಾಕುವಲ್ಲಿ ಯಶಸ್ವಿಯಾಗಿದ್ದ. ಆದರೆ ಜಯ ಪ್ರಕಾಶ್ ಮತ್ತು ದೀಕ್ಷಿತ್ ನೀರಿನ ಆಳದಲ್ಲಿಯೇ ಉಳಿದು ಹೋದರು.
ಯಾರಿಗೂ ಈಜು ಬರುತ್ತಿರಲಿಲ್ಲ :
ಕಲ್ಲು ಕ್ವಾರಿಯಲ್ಲಿ ಮುಳುಗಿ ಸಾವಿಗೀಡಾದ ದೀಕ್ಷಿತ್ ಮತ್ತು ಜಯಪ್ರಕಾಶ್ ಆಗಲಿ ಉಳಿದ ಆರು ಮಂದಿ ಯಾರೊಬ್ಬರಿಗೂ ಈಜು ಬರುತ್ತಿರಲಿಲ್ಲ. ಜಯ ಪ್ರಕಾಶ್‍ನನ್ನು ಉಳಿಸಲು ಹಾರಿದ ದೀಕ್ಷಿತ್ ಕಿಸೆಯಲ್ಲಿ ಮೊಬೈಲ್ ಇತ್ತು. ಶೇಖರ್ ಈಜು ಬಾರದಿದ್ದರೂ ನೀರಿಗೆಗೆ ಬಿದ್ದ ಸ್ನೇಹಿತರನ್ನು ಉಳಿಸಲು ಹೋದರೂ ಅದೃಷ್ಟವಶಾತ್ ಸುದೇಶ್ ಮತ್ತು ಸಂತೋಷ್ ಶೇಖರ್‍ನನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾವು ಉಟ್ಟಿದ್ದ ಬಟ್ಟೆಗಳನ್ನು ಹಗ್ಗವಾಗಿಸಿದರು :
ನೀರಿನಲ್ಲಿ ಮುಳುಗಿದ್ದ ದೀಕ್ಷಿತ್ ಮತ್ತು ಜಯಪ್ರಕಾಶ್‍ನನ್ನು ಉಳಿಸಲು ಶೇಕರ್ ಮತ್ತು ಅವನ ಸ್ನೇಹಿತರು ತಾವು ಉಟ್ಟಿದ್ದ ಬಟ್ಟೆಗಳನ್ನು ಕಟ್ಟಿ ಹಗ್ಗವಾಗಿಸಿ ಇಬ್ಬರನ್ನು ಉಳಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಸುದೇಶ್ ಯಾರಾದರೂ ರಕ್ಷಣೆಗೆ ಯಾರನ್ನಾದರೂ ಕರೆ ತರುವ ನಿಟ್ಟಿನಲ್ಲಿ ವೇಗವಾಗಿ ಚಲಿಸಿ ಬೈಕ್ ಅಪಘಾತವಾಗಿದ್ದು ಕಾಲಿಗೆ ಗಾಯವಾಗಿದೆ. ಈ ಸಂದರ್ಭದಲ್ಲಿ ಸುದೇಶ್ ತನ್ನ ಸ್ನೇಹಿತ ಪ್ರಭಾಕರ್ ಎಂಬವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಸಹಾಯ ಮಾಡುವಂತೆ ತಿಳಿಸಿದ್ದು ಪ್ರಭಾಕರ್ ತನ್ನ ಸ್ನೇಹಿತರೊಂದಿಗೆ ಆಗಮಿಸಿ ನೀರಿನಲ್ಲಿ ತಡಕಾಡಿದ್ದು, ಆದರೆ ಎರಡು ದೇಹಗಳನ್ನು ಮೇಲೆ ತರಲು ವಿಫಲರಾದರು. ಈ ಸಂದರ್ಭದಲ್ಲಿ ಪೆÇಲೀಸ್ ಸೇರಿದಂತೆ ಬೋಳಿಯಾರ್ ಪ್ರದೇಶದ ಸ್ನೇಹಿತರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಜನರು ತಂಡೋಪತಂಡವಾಗಿ ಆಗಮಿಸಿದರು.
ಇಬ್ಬರಿಂದ ಆತ್ಮಹತ್ಯಗೆ ಯತ್ನ :
ಜಯ ಪ್ರಕಾಶ್ ಮತ್ತು ದೀಕ್ಷಿತ್ ಕ್ವಾರಿಯಲ್ಲಿ ಮುಳುಗಿದ್ದರಿಂದ ಆತಂಕಿತರಾದ ಶೇಖರ್‍ಮತ್ತು ಸಂತೋಷ್ ಅದೇ ಕ್ವಾರಿಗೆ ಹಾರಲು ಯತ್ನಿಸಿದರೂ ಬೋಳಿಯಾರ್ ನಿವಾಸಿಗಳಾದ ಪ್ರಭಾಕರ್ ಛಾಯಾಗ್ರಾಹಕ ಸಂತೋಷ್ ಸೇರಿದಂತೆ ಬೋಳಿಯಾರ್‍ನಿಂದ ಬಂದಿದ್ದ ಯುವಕರ ತಂಡ ಇಬ್ಬರನ್ನು ತಡೆಯುವಲ್ಲಿ ಯಶಸ್ವಿಯಾಯಿತು.
ಸಹನೆ ಕಳಕೊಂಡು ಗಂಭೀರ ಸ್ಥಿತಿಗೆ ತಲುಪಿದರು :
ತಮ್ಮ ಸ್ನೇಹಿತರಿಬ್ಬರನ್ನು ನೀರಿನಿಂದ ಮೇಲಕ್ಕೆ ತರಲಾಗಿಲ್ಲ ಎಂಬ ದು:ಖದಲ್ಲಿಯೇ ಶೇಖರ್, ಸಂತೋಷ್ ಮತ್ತು ಅಕ್ಷಯ್ ಸಹನೆ ಕಳಕೊಂಡಿದ್ದು, ಅವರಲ್ಲಿ ಸಂತೋಷ್ ತಾನೂ ಸಾಯುತ್ತೇನೆ ಎಂದು ಅಲ್ಲೆ ಸ್ಥಳದಲ್ಲಿದ್ದ ಕಲ್ಲಿಗೆ ತಲೆಯನ್ನು ಜಜ್ಜಿಕೊಂಡಿದ್ದು ಇದರಿಂದ ಗಂಭೀರ ಸ್ಥಿತಿಗೆ ತಲುಪಿದರೆ, ಅಕ್ಷಯ್ ನಡೆದ ಘಟನೆಗಳನ್ನು ನೋಡಿಯೇ ಅಸ್ವಸ್ಥನಾಗಿ ಗಂಭೀರ ಸ್ಥಿತಿಗೆ ತಲುಪಿದ್ದಾನೆ. ಇನ್ನುಳಿದ ಸುದೇಶ್ ರಕ್ಷಣೆ ಮಾಡುವ ಭರದಲ್ಲಿ ಅಪಘಾತದಿಂದ ಗಾಯಗೊಂಡಿದ್ದಾನೆ. ಶೇಖರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಜಯಪ್ರಕಾಶ್ ಒಬ್ಬನೇ ಮಗ :
ಬಡಕುಟುಂಬದಿಂದ ಬಂದಿದ್ದ ಜಯಪ್ರಕಾಶ್ ಉಮೇಶ್ ಪೂಜಾರಿ ಮತ್ತು ಜಲಜಾ ದಂಪತಿಗಳ ಇಬ್ಬರು ಮಕ್ಕಳಲ್ಲಿ ಒಬ್ಬನೇ ಮಗ ಮತ್ತು ಮನೆಯ ಆಧಾರ ಸ್ತಂಭವಾಗಿದ್ದ. ಸಹೋದರಿಗೆ ಮೂರು ತಿಂಗಳ ಹಿಂದೆ ಮದುವೆಯಾಗಿದ್ದು, ಮನೆಯಲ್ಲಿ ಆಟಿ ಸಮ್ಮನವಿದ್ದರೂ ಮಧ್ಯಾಹ್ನ ಮನೆಗೆ ಬರುತ್ತೇನೆಂದು ಹೇಳಿ ಹೊರಟಿದ್ದ ವೃತ್ತಿಯಲ್ಲಿ ಟೈಲ್ ಕೆಸಕ್ಕೆ ಹೆಲ್ಪರ್ ಆಗಿ ದುಡಿಯುತ್ತಿದ್ದ
ದೀಕ್ಷಿತ್ ಜನಾರ್ಧನ ಪೂಜಾರಿ ಮತ್ತು ರಮಣಿ ದಂಪತಿಗಳ ಇಬ್ಬರು ಪುತ್ರರಲ್ಲಿ ಕಿರಿಯವ. ಈತ ಅಸೈಗೋಳಿಯ ಐಟಐಯಲ್ಲಿ ವಿದ್ಯಾರ್ಥಿಯಾಗಿದ್ದ
ಘಟನಾ ಸ್ಥಳಕ್ಕೆ ಕೊಣಾಜೆ ಪೆÇಲೀಸರು, ಅಗ್ನಿಶಾಮಕ ದಳ ಆಗಮಿಸಿದ್ದು, ಅಗ್ನಿಶಾಮಕ ದಳ ಆಗಮಿಸುವುದಕ್ಕೆ ಮೊದಲೇ ಪಾವೂರು ನ್ಯೂಪಡ್ಪುವಿನ ಮಹಮ್ಮದ್ ಇಕ್ಬಾಲ್ ಆಗಮಿಸಿ ಎರಡು ಮೃತದೇಹಗಳನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಾರಕ್ಕೊಮ್ಮೆ ಈ ತಂಡ ಮೂಳೂರು ಸೇರಿದಂತೆ ಬೇರೆ ಬೇರೆ ಕಡೆಗೆ ತಿರುಗಾಡುವುದು ಸಾಮಾನ್ಯವಾಗಿತ್ತು. ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಸಣ್ಣ ಸಣ್ಣ ತೊರೆಗಳಿಂದ ನೀರು ಹರಿಯುತ್ತಿದ್ದು, ಸಣ್ಣ ಜಲಪಾತವೊಂದಿದ್ದು, ಹೆಚ್ಚಿನ ಯುವಕರು ಈ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದರು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಕಲ್ಲು ಕ್ವಾರಿ ಮುಚ್ಚಿಲ್ಲ :
ಮೂಳೂರು ಪ್ರದೇಶ ಕೈಗಾರಿಕಾ ವಲಯಕ್ಕೆ ಒಳಪಟ್ಟಿದ್ದು, ಈ ಪ್ರದೇಶದಲ್ಲಿರುವ ಕಲ್ಲು ಕ್ವಾರಿಗಳನ್ನು ಮುಚ್ಚಲು ಈ ಹಿಂದೆಯೇ ಜಿಲ್ಲಾ„ಕಾರಿ ಎಲ್ಲಾ ಕಲ್ಲು ಕ್ವಾರಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದರೂ, ಈವರೆಗೆ ಯಾವುದೇ ಕಲ್ಲು ಕ್ವಾರಿಗಳನ್ನು ಮುಚ್ಚಿಲ್ಲ.ಮೂಳೂರು ಸೇರಿದಂತೆ ಬಂಟ್ವಾಳ, ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಅನೇಕ ಕಲ್ಲು ಕ್ವಾರಿಗಳು ಮಳೆಗಾಲದಲ್ಲಿ ಅಪಾಯಕಾರಿಯಾಗಿ ಉಳಿದಿದೆ. ಶೀಘ್ರವೇ ಇಲ್ಲಿರುವ ಕಲ್ಲು ಕ್ವಾರಿಗಳನ್ನು ಮುಚ್ಚಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖರಾದ ರಾಜಾರಾಮ ಭಟ್, ಪ್ರಶಾಂತ್ ಗಟ್ಟಿ, ಸತ್ಯಪಾಲ ರೈ ಮತ್ತಿತರರು ಉಪಸ್ಥಿತರಿದ್ದರು.
ಅಪತ್ಬಾಂಧವ ಮಹಮ್ಮದ್ ಇಕ್ಬಾಲ್ :
ಘಟನೆ ನಡೆದು ಸುಮಾರು ಎರಡು ಗಂಟೆಗಳ ಕಾಲ ಕಲ್ಲು ಕ್ವಾರಿಗೆ ಇಳಿಯುವ ಸಾಹಸ ಯಾರು ನಡಸಿರಲಿಲ್ಲ. ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರೂ ಸಮಯಕ್ಕೆ ಸರಿಯಾಗಿ ತಲುಪುವಲ್ಲಿ ವಿಫಲರಾಗಿದ್ದರು. ಈ ಸಂದರ್ಭದಲ್ಲಿ ಪಾವೂರಿನಲ್ಲಿ ವಾರದ ಹಿಂದೆ ದೋಣಿ ಮುಳುಗಿದ ಘಟನೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲದ್ದ ಇಬ್ಬರನ್ನು ರಕ್ಷಿಸಿದ್ದ ಹರೇಕಳ ನ್ಯೂಪಡ್ಪು ನಿವಾಸಿ ಮಹಮ್ಮದ್ ಇಕ್ಬಾಲ್ ಅವರನ್ನು ಪಾವೂರಿನ ಸಮಾಜ ಸೇವಕ ಸತ್ಯಪಾಲ ರೈ ಘಟನಾ ಸ್ಥಳಕ್ಕೆ ಕರೆದುಕೊಂಡು ಬಂದಿದ್ದು, ಕ್ಷಣಾರ್ಧದಲ್ಲಿ ಎರಡು ಮೃತದೇಹವನ್ನು ಮೇಲೆತ್ತಿದ್ದರು. ಆದರೆ ಅದಾಗಲೇ ಸಮಯ ಮೀರಿದ್ದರಿಂದ ಇಬ್ಬರನ್ನು ಜೀವಂತವಾಗಿ ಮೇಲೆತ್ತುವಲ್ಲಿ ವಿಫಲರಾದಕ್ಕೆ ವಿಷಾದ ವ್ಯಕ್ತಪಡಿಸಿದ ಇಕ್ಬಾಲ್ ಈ ಹಿಂದೆ ಸುಜೇರುವಲ್ಲಿ ಎಂಟು ವಿದ್ಯಾರ್ಥಿಗಳನ್ನು ರಕ್ಷಿಸಿದ್ದು, ಕಣ್ಣೂರಿನಲ್ಲಿ ಒರ್ವನನ್ನು ರಕ್ಷಿಸುವ ಮೂಲಕ ಅನೇಕ ಬಾರಿ ನೀರಿನಿಂದ ಹೋಗುವವರನ್ನು ಬದುಕಿಸುವಲ್ಲಿ ಯಶಸ್ವಿಯಾಗಿದ್ದು, ಹಲವು ಬಾರಿ ಅಪಧ್ಬಾಂದವರಾಗಿ ಕಾರ್ಯ ನಿರ್ವಹಿಸಿದ್ದಾರೆ.