ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಉಳ್ಳಾಲ ಹಳೆ ಸ್ಟೇಟ್‍ಬ್ಯಾಂಕ್ ಬಳಿ ಬಾರ್‍ಎಂಡ್ ರೆಸ್ಟಾರೆಂಟೊಂದನ್ನು ಬಲವಂತಾಗಿ ಕಟ್ಟಡದ ಮಾಲಕರು ತೆರವು ಮಾಡಿದ ಘಟನೆ ಭಾನುವಾರ ನಸುಕಿನ ವೇಳೆ ನಡೆದಿದ್ದು, ತೆರವಿಗೆ ಸಂಬಂ„ಸಿದಂತೆ ಒಂದು ಜೆಸಿಬಿಯೊಂದನ್ನು ವಶಕ್ಕೆ ತೆಗೆದುಕೊಂಡಿದ್ದು 15 ಮಂದಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಾರ್ ತೆರವಿನಿಂದ ಸುಮಾರು ಎಂಟು ಲಕ್ಷ ರೂ. ನಷ್ಟವಾಗಿದೆ ಎಂದು ಬಾರ್ ಮಾಲಕರು ದೂರಿನಲ್ಲಿ ತಿಳಿಸಿದ್ದಾರೆ.

ರವೀಂದ್ರ ಉಳ್ಳಾಲ್ ಎಂಬವರಿಗೆ ಸೇರಿದ ಅಶೋಕ್ ಬಾರ್ ಎಂಡ್ ರೆಸ್ಟಾರೆಂಟನ್ನು ನಸುಕಿನ ವೇಳೆ ತೆರವು ನಡೆಸಿದ್ದು, ಕಟ್ಟಡ ಮಾಲಕಿ ಲಲಿತಾ ರವಿ ಸೇರಿದಂತೆ 15ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಾಗಿದ್ದು, ತೆರವು ನಡೆಸುತ್ತಿದ್ದ ಜೆಸಿಬಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡರೆ, ಜೆಸಿಬಿ ಚಾಲಕ ಸಹಿತ ತೆರವು ನಡೆಸುತ್ತಿದ್ದ 15 ಜನರನ್ನು ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಚೋಟಾ ಮಂಗಳೂರು ಎಂದೇ ಪ್ರಸಿದ್ದಿಯನ್ನು ಪಡೆದಿರುವ ಉಳ್ಳಾಲದ ಹಳೆ ಸ್ಟೇಟ್ ಬ್ಯಾಂಕ್ ಬಳಿ ರವೀಂದ್ರ ಎಂಬವರು ಸುಮಾರು 22 ವರ್ಷಗಳಿಂದ ಉಳ್ಳಾಲದ ರಘುರಾಮ್ ಎಂಬವರಿಗೆ ಸೇರಿದ ಕಟ್ಟಡದಲ್ಲಿ ಬಾರ್ ಎಂಡ್ ರೆಸ್ಟಾರೆಂಟನ್ನು ನಡೆಸುತ್ತಿದ್ದರು. ರಘುರಾಮ್ ಅವರು ಎರಡು ವರ್ಷದ ಹಿಂದೆ ಕಟ್ಟಡವನ್ನು ತನ್ನ ಸಂಬಂ„ಯಾಗಿರುವ ಲಲಿತಾ ರವಿ ಎಂಬವರಿಗೆ ಮಾರಾಟ ನಡೆಸಿದ್ದರು. ಮಾರಾಟದ ಬಳಿಕ ಕಟ್ಟಡದಲ್ಲಿದ್ದ ಬೇರೆ ಅಂಗಡಿಗಳನ್ನು ತೆರವುಗೊಳಿಸಿದ್ದು, ಬಾರ್ ಎಂಡ್ ರೆಸ್ಟಾರೆಂಟನ್ನು ತೆರವುಗೊಳಿಸದ ಹಿನ್ನಲೆಯಲ್ಲಿ ಭಾನುವಾರ ನಸುಕಿನ ವೇಳೆಯಲ್ಲಿ ಜೆಸಿಬಿ ಮೂಲಕ ಬಲವಂತವಾಗಿ ತೆರವು ನಡೆಸಲಾಯಿತು.
ದಾರಿಯಲ್ಲಿ ಗುಂಡಿ ತೆಗೆದು ಬಾರ್ ಕಟ್ಟಡದ ಗೋಡೆಯನ್ನು ಉರುಳಿಸಿದರು :
ಬಾರ್ ಎಂಡ್ ರೆಸ್ಟಾರೆಂಟ್‍ಗೆ ತೆರಳುವ ದಾರಿಯನ್ನು ಗುಂಡಿ ತೆಗೆದು ಬಳಿ ಬಾರ್ ಎಂಡ್ ರೆಸ್ಟಾರೆಂಟ್ ಇದ್ದ ಕಟ್ಟಡದ ಗೋಡೆಯನ್ನು ಕೆಡವಿದ್ದು, ಈ ಸಂದರ್ಭದಲ್ಲಿ ಮಾರಾಟಕ್ಕೆಂದು ಸಂಗ್ರಹಿಸಿದ್ದ ಮದ್ಯ ಸಹಿತ ಬಾರ್‍ನಲ್ಲಿದ್ದ ಸಾಮಾಗ್ರಿಗೆ ಹಾನಿಯಾಗಿದ್ದು ಸುಮಾರು ಎಂಟು ಲಕ್ಷ ರೂ. ನಷ್ಟವಾಗಿದೆ ಎಂದು ಬಾರ್ ಮಾಲಕರು ದೂರಿನಲ್ಲಿ ತಿಳಿಸಿದ್ದಾರೆ.
ವರ್ಷದಿಂದ ನೋಟಿಸ್ ನೀಡಲಾಗುತ್ತಿದೆ :
ಕಟ್ಟಡವನ್ನು ತೆಗೆದು ಅಲ್ಲಿ ಹೊಸ ಕಟ್ಟಡ ನಿರ್ಮಾಣ ನಡೆಸಲು ಕಳೆದ ಒಂದೂವರೆ ವರ್ಷದಿಂದ ಬಾರ್ ಮಾಲಕರಿಗೆ ನೋಟಿಸ್ ನೀಡಲಾಗಿದ್ದು, ಬಾರ್ ಮಾಲಕರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಮಾಲಕರ ಸಂಬಂ„ಕರೊಬ್ಬರು ಪತ್ರಿಕೆಗೆ ತಿಳಿಸಿದರು. ತೆರವು ಕಾರ್ಯಾಚರಣೆಯ ಮಾಹಿತಿಯನ್ನು ಬಾರ್ ಮಾಲಕರಿಗೆ ತಿಳಿಸಿ ನಡೆಸಲಾಗಿದೆ. ಅದರಲ್ಲಿದ್ದ ಸಾಮಾನುಗಳನ್ನು ಖಾಲಿ ಮಾಡಲು ಮನವಿ ಮಾಡಿತ್ತು ಎನ್ನುವ ಅವರು ವೈನ್‍ಶಾಪ್ ನಡೆಸಲು ಅನುಮತಿ ನೀಡಿದ್ದ ಕೋಣೆಯನ್ನು ಮುಟ್ಟಿಲ್ಲ ಅದರ ಪಕ್ಕದ ಕೋಣೆಗಳನ್ನು ಕೆಡವಿದ್ದು, ಅದರಲ್ಲಿ ಮದ್ಯ ಸ್ಟಾಕ್ ಇರಿಸಿದ್ದ ಮಾಹಿತಿ ನಮಗೆ ಗೊತ್ತಿಲ್ಲ ಎಂದರು.
ಡಿಸೆಂಬರ್‍ವರೆಗೆ ಕಾಲಾವಕಾಶ ಕೇಳಿದ್ದೆ :
ಬಾರ್ ಎಂಡ್ ರೆಸ್ಟಾರೆಂಟನ್ನು ಈ ಪ್ರದೇಶದಿಂದ ಬೇರೆ ಕಡೆ ಸ್ಥಳಾಂತರಕ್ಕೆ ಕಳೆದ ಒಂದು ವರ್ಷದಿಂದ ಪ್ರಯತ್ನಿಸುತ್ತಿದ್ದೇನೆ. ಆದರೆ ಸರಿಯಾದ ಸ್ಥಳ ಸಿಗದೇ ಇರುವ ಹಿನ್ನಲೆಯಲ್ಲಿ ಡಿಸೆಂಬರ್‍ವರೆಗೆ ಮುನ್ನಡೆಸುವ ಕುರಿತು ಕಟ್ಟಡ ಮಾಲಕರಿಗೆ ಮಾಹಿತಿ ನೀಡಿದ್ದೆ.ಆದರೆ ನಮಗೆ ಕಟ್ಟಡ ಮಾಲಕರು ಯಾವುದೇ ಮಾಹಿತಿಯಾಗಲಿ ನೋಟಿಸ್ ಆಗಲಿ ನೀಡಿಲ್ಲ. ಕಳೆದ ಮೇ. ತಿಂಗಳ ವರೆಗೆ ಬಾಡಿಗೆ ತೆಗೆದುಕೊಂಡಿದ್ದಾರೆ. ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಅದರದೇ ಆದ ಕಾನೂನು ಇದ್ದು, ಅಬಕಾರಿ ಇಲಾಖೆ ಮೂಲಕ ನಾವು ಪರ್ಮಿಟ್ ತೆಗೆದು ವ್ಯವಹಾರ ನಡೆಸುತ್ತಿದ್ದೇವೆ. ಆದರೆ ಈಗ ಏಕಾಏಕಿ ಕಟ್ಟಡ ತೆರವುಗೊಳಿಸಿದ್ದರಿಂದ ಮಾರಾಟಕ್ಕೆಂದು ತಂದಿದ್ದ ಮದ್ಯ ಸಹಿತ ಸುಮಾರು 8 ಲಕ್ಷ ರೂ. ಹಾನಿಯಾಗಿದೆ ಎಂದು ಬಾರ್ ಮಾಲಕ ರವೀಂದ್ರ ಪತ್ರಿಕೆಗೆ ಮಾಹಿತಿ ನೀಡಿದರು.
ಸ್ಥಳೀಯರಿಗೆ ಸುಗ್ಗಿ :
ಬಾರ್ ಕಟ್ಟಡ ತೆರವುಗೊಳಿಸುತ್ತಿರುವ ಸುದ್ಧಿ ತಡ ರಾತ್ರಿ ಬಾರ್ ನೌಕರನಿಂದ ತಿಳಿದು ಬಂತು ಬಾರ್ ಕಡೆ ಬಂದಾಗ ಹೆಚ್ಚಿನ ಕಟ್ಟಡವನ್ನು ಧ್ವಂಸಗೊಳಿಸಲಾಗಿತ್ತು. ಘಟನೆಗೆ ಸಂಬಂ„ಸಿದಂತೆ ಉಳ್ಳಾಲ ಪೆÇಲೀಸರಿಗೆ ದೂರು ನೀಡಿದ್ದು ಪೊಲೀಸರು ಸ್ಥಳಕ್ಕಾಗಮಿಸಿದಾಗ ಹೆಚ್ಚಿನ ಮದ್ಯ ಬಾಟಲ್‍ಗಳು ಕಟ್ಟಡದ ಅಡಿಗೆ ಬಿದ್ದು, ಹಾನಿಯಾದರೆ, ಉಳಿದಿದ್ದ ಮದ್ಯದ ಬಾಟಲ್‍ಗಳನ್ನು ಸ್ಥಳೀಯರು ತೆಗೆದುಕೊಂಡು ಹೋಗುತ್ತಿರುವುದು ಅಸಾಯಕರಾಗಿ ನೋಡಬೇಕಾಯಿತು ಎಂದು ಬಾರ್ ಮಾಲಿಕರು ತಿಳಿಸಿದರು.