

ಉಳ್ಳಾಲ: ಉಳ್ಳಾಲದ ನೂತನ ಸುಸಜ್ಜಿತ ಆಸ್ಪತ್ರೆ ಮಮಗಳೂರು ಹೊರತುಪಡಿಸಿದರೆ ಉಡುಪಿವರೆಗೆ ಎಲ್ಲೂ ಕಾಣಲು ಸಿಗುವುದಿಲ್ಲ ಯಾವುದೇ ಹೋರಾಟವುಲ್ಲದೆ ಆರಂಬಗೊಂಡಿರುವ ಈ ಆಸ್ಪತ್ರೆಯ ವ್ಯವಸ್ಥೆಗಳು ವ್ಯವಸ್ಥಿತವಾಗಿ ಆರಂಭಗೊಂಡಾಗ ಮಾತ್ರ ಜನರಿಗೆ ಇದರ ಮಹತ್ವ ಅರಿಯಲು ಸಾಧ್ಯ ಎಂದು ಎಂದು ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ನಗರ ಸಮುದಾಯ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿ ಆಯುಷ್ ಆಯುರ್ವೇದಿಕ್ ಆಸ್ಪತ್ರೆ ಕಟ್ಟಡಕ್ಕೆ ಶಂಕು ಸ್ಥಾಪನೆ ಹಾಗೂ ಹೋಮಿಯೋಪಥಿ ಸೇವೆಗಳಿಗೆ
ಶನಿವಾರ ಚಾಲನೆ ನೀಡಿ ಮಾತನಾಡಿದರು.
ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರ ಕಿರಿದಾಗಿದ್ದ ಸಂದರ್ಭ ಶೆಡ್ ನಲ್ಲಿ ಸಭೆ ನಡೆಸಲಾಗುತ್ತಿತ್ತು.ಇದೀಗ ಆಯುಶ್ ಇಂಟಗ್ರೇಟೆಡ್ ಆಸ್ಪತ್ರೆಯ ನೂತನ ಕಟ್ಟಡ 56 ಲಕ್ಷದಲ್ಲಿ ನಿರ್ಮಾಣವಾಗಲಿದೆ. ಇತರ ಆಸ್ಪತ್ರೆಗಳಿಗಿಂತ ವಿಭಿನ್ನ ನಕ್ಷೆಯನ್ನೂ ಹೊಂದಿರಲಿದೆ. ಅಲೋಪಥಿ, ಆಯುರ್ವೇದಕ್ಕಿಂತ ರೋಗಿಗಳನ್ನು ಗುಣಪಡಿಸುವ ಔಷಧ ನೀಡುವುದು ಮುಖ್ಯವಾಗಿದ್ದು, ಸಮುದಾಯ ಕೇಂದ್ರದಲ್ಲಿ ಎಲ್ಲಾ ವಿಧದ ಚಿಕಿತ್ಸೆ ಸಿಗುವುದು ದೇಶದಲ್ಲೇ ಪ್ರಥಮ ಆಗಲಿದೆ. ಅಲೋಪಥಿ ಮತ್ತು ಆಯುರ್ವೇದ ವೈದ್ಯರು ಪರಸ್ಪರ ಸಹಕಾರದಿಂದ ಮುಂದುವರಿಯಬೇಕು ಎಂದು ಹೇಳಿದರು.
ನಗರಸಭಾಧ್ಯಕ್ಷೆ ಚಿತ್ರಕಲಾ ಕೆ, ಉಪಾಧ್ಯಕ್ಷ ಯು.ಪಿ.ಅಯ್ಯೂಬ್ ಮಂಚಿಲ, ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಆಯುಶ್ ಜಿಲ್ಲಾ ವೈದ್ಯಾ„ಕಾರಿ ಇಕ್ಬಾಲ್, ತಾಲೂಕು ಅ„ಕಾರಿ ಸುಜಯ ಭಂಡಾರಿ, ಫಾದರ್ ಮುಲ್ಲರ್ ಆಸ್ಪತ್ರೆಯ ಡಾ| ಪ್ರಭು ಕಿರಣ್, ಹೋಮಿಯೋಪಥಿ ಕಾಲೇಜಿನ ಆಡಳಿತಾ„ಕಾರಿ ರೆ| ಫಾ| ರೋಶನ್ ಕ್ರಾಸ್ತಾ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾ„ಕಾರಿ ಪ್ರಶಾಂತ್, ನಗರಸಭೆಯ ಮಾಜಿ ಅಧ್ಯಕ್ಷ ಹುಸೈನ್ ಕುಂಞÂಮೋನು, ಆಯುಶ್ ಇಲಾಖೆಯ ನಿವೃತ್ತ ವೈದ್ಯಾ„ಕಾರಿ ದೇವದಾಸ್ ಮೊದಲಾದವರು ಉಪಸ್ಥಿತರಿದ್ದರು.
ಡಾ| ಸಹನಾ ಪಾಂಡುರಂಗ ಸ್ವಾಗತಿಸಿದರು. ಸುಶ್ಮಾ ಕಾರ್ಯಕ್ರಮ ನಿರೂಪಿಸಿದರು.
