UN NETWORKS
ಉಳ್ಳಾಲ: ಬಂಟ ಸಮಾಜದ ಪ್ರತಿಷ್ಠಿತ ಹೇರೂರು ಮನೆತನದ ದಿ. ಗುಡ್ಡಣ್ಣ ಅಳ್ವ ಅವರ ಪುತ್ರ ಡಾ| ಹೇರೂರು ಮನಮೋಹನ ಆಳ್ವ (84) ಡಿ. 24ರಂದು ನಿಧನ ಹೊಂದಿದರು. ಮೃತರು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ತಮಿಳುನಾಡಿನಲ್ಲಿ ವೈದ್ಯಕೀಯ ಪದವಿ ಪಡೆದ ಬಳಿಕ ಸುಮಾರು 55 ವರ್ಷಗಳ ಕಾಲ ಖಾಸಾಗಿ, ಸರಕಾರಿ ವೈದ್ಯರಾಗಿ ತಮಿಳುನಾಡಿನ ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದರು. ತಮಿಳುನಾಡಿನ ತಿರುಚಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸಾವಿರಾರು ಬಡ ರೋಗಿಗಳಿಗೆ ವೈದ್ಯಕೀಯ ಸೇವೆ ನೀಡಿದ್ದ ಅವರು `ಆಳ್ವ ಡಾಕ್ಟರ್’ ಎಂದೇ ಪ್ರಸಿದ್ದಿಯನ್ನು ಪಡೆದಿದ್ದರು.
ಇವರ ಗ್ರಾಮೀಣ ವೈದ್ಯಕೀಯ ಸೇವೆಯನ್ನು ಗುರುತಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ವೈದ್ಯಕೀಯ ಜೀವನದೊಂದಿಗೆ ಸಾಮಾಜಿಕವಾಗಿ, ಧಾರ್ಮಿಕವಾಗಿ ಶೈಕ್ಷಣಿಕವಾಗಿ ತೊಡಗಿಸಿಕೊಂಡಿದ್ದ ಅವರು ಕೊಡುಗೈದಾನಿಯಾಗಿದ್ದರು.